ಮಾನವೀಯತೆ ಮೆರೆದ ತಹಸೀಲ್ದಾರ್ ನಿಶ್ಚಲ್ ನರೋನ್ಹಾ

KannadaprabhaNewsNetwork | Published : Oct 29, 2023 1:01 AM

ಸಾರಾಂಶ

ವೃದ್ಧಾಪ್ಯದಲ್ಲಿ ತಮ್ಮ ಹಕ್ಕಿಗಾಗಿ ಅಲೆದಾಡುತ್ತಿದ್ದ ರತ್ನಾಕರಗೆ ಕೊನೆಗೂ ಪಹಣಿ ಸಿಕ್ಕಿದ್ದು, ಕಾರವಾರ ತಹಸೀಲ್ದಾರ್ ನಿಶ್ಚಲ್ ನರೋನ್ಹಾ, ಕಂದಾಯ ನಿರೀಕ್ಷಕ ಪ್ರಶಾಂತ ನಾಯ್ಕ ಹಾಗೂ ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ, ಸಿಬ್ಬಂದಿ ಧನ್ಯವಾದ ಅರ್ಪಿಸಿದ್ದಾರೆ.

ಕಾರವಾರ:

ಕಳೆದ ೪೦ ವರ್ಷದ ಹಿಂದೆ ಹಂಗಾಮಿ ಲಾಗಿಣಿ ಪಡೆದು ೬ ವರ್ಷಗಳ ಹಿಂದೆ ಅಧಿಕೃತವಾಗಿ ಮಂಜೂರಿಯಾಗಿದ್ದರೂ ಪಹಣಿ ಪತ್ರ (ಆರ್‌ಟಿಸಿ) ಪಡೆಯಲು ಪರದಾಡುತ್ತಿದ್ದ ವ್ಯಕ್ತಿಗೆ ಇಲ್ಲಿನ ತಹಸೀಲ್ದಾರ್ ನಿಶ್ಚಲ್ ನರೋನ್ಹಾ ಎಲ್ಲ ತೊಡಕ್ಕನ್ನು ನಿವಾರಿಸಿ ಪಹಣಿ ದೊರಕುವಂತೆ ಮಾಡಿದ್ದಾರೆ.

೧೯೭೦ರ ಅವಧಿಯಲ್ಲಿ ಹಂಗಾಮಿ ಲಾಗಣಿಗೆ ಪಡೆದಂತಹ ಜಾಗವನ್ನು ಕಳೆದ ೪೦ ವರ್ಷದಿಂದ ಬೇಸಾಯ ಮಾಡಿಕೊಂಡು ಬಂದಂತಹ ತಾಲೂಕಿನ ತೋಡೂರು ನಿವಾಸಿ ರತ್ನಾಕರ ಪಾಂಡುರಂಗ ತೊಡೂರಕರ ಅವರಿಗೆ ೨೦೧೮ರಲ್ಲಿ ೩ ಎಕರೆ ವಿಸ್ತೀರ್ಣದ ಜಾಗವನ್ನು ಅಂದಿನ ಡಿಸಿ ಎಸ್.ಎಸ್. ನಕುಲ್ ಮಂಜೂರಾತಿ ಮಾಡಿದ್ದರು. ಆದರೆ ಆ ಜಾಗಕ್ಕೆ ಆರ್‌ಟಿಸಿ ಮಾಡಲು ಪರದಾಡುತ್ತಿದ್ದ ರತ್ನಾಕರಗೆ ಜಮೀನನ್ನು ಅಧಿಕೃತವಾಗಿ ಪಡೆಯಲು ಸಾಧ್ಯವಾಗಿರಲಿಲ್ಲ. ಹಲವಾರು ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿದ್ದರೂ ಮಂಜೂರಾತಿ ಆಗದೇ ಕಡತ ಧೂಳು ತಿನ್ನುತ್ತಿತ್ತು.

ತಮ್ಮ ಕಚೇರಿಯಲ್ಲಿ ಕಾಣುತ್ತಿದ್ದ ವ್ಯಕ್ತಿ ಕರೆದು ವಿಚಾರಿಸಿದಾಗ ತಹಸೀಲ್ದಾರ್‌ರಿಗೆ ಪಹಣೆ ಸಿಗದಿರುವುದು ತಿಳಿದುಬಂತು. ಈ ಬಗ್ಗೆ ಗಮನಕ್ಕೆ ಬರುತ್ತಿದ್ದಂತೆ ತಹಸೀಲ್ದಾರ್‌ ನೊರೋನ್ಹಾ ಸ್ಥಳ ಪರೀಶೀಲನೆ ನಡೆಸಿದರು. ದಾಖಲೆ ಪರಿಶೀಲಿಸಿ ತೊಡಕು-ತೊಂದರೆ ನಿವಾರಿಸಿ ಕಂದಾಯ ಇಲಾಖೆಯ ನಿಯಮನುಸಾರ ರೈತ ರತ್ನಾಕರ ಅವರಿಗೆ ದೊರಕಬೇಕಾದ ಪಹಣಿ ನೀಡಲು ಯಶಸ್ವಿಯಾಗಿದ್ದಾರೆ.ವೃದ್ಧಾಪ್ಯದಲ್ಲಿ ತಮ್ಮ ಹಕ್ಕಿಗಾಗಿ ಅಲೆದಾಡುತ್ತಿದ್ದ ರತ್ನಾಕರಗೆ ಕೊನೆಗೂ ಪಹಣಿ ಸಿಕ್ಕಿದ್ದು, ಕಾರವಾರ ತಹಸೀಲ್ದಾರ್ ನಿಶ್ಚಲ್ ನರೋನ್ಹಾ, ಕಂದಾಯ ನಿರೀಕ್ಷಕ ಪ್ರಶಾಂತ ನಾಯ್ಕ ಹಾಗೂ ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ, ಸಿಬ್ಬಂದಿ ಧನ್ಯವಾದ ಅರ್ಪಿಸಿದ್ದಾರೆ.ದಶಕದಿಂದ ಹಂಗಾಮಿ ಲಾಗಿಣಿ ಮಾಡಿಕೊಂಡು ಬಂದಿದ್ದು, ಕಳೆದ ೬ ವರ್ಷದ ಹಿಂದೆ ಸರ್ಕಾರದಿಂದ ಜಮೀನು ಮಂಜೂರುಗೊಂಡಿತ್ತು. ಆದರೆ ಆರ್‌ಟಿಸಿ ಮಾತ್ರ ಸಿಕ್ಕಿರಲಿಲ್ಲ. ಹತ್ತಾರು ಬಾರಿ ಕಚೇರಿಯಿಂದ ಕಚೇರಿ ಅಲೆದಾಡಿದರೂ ಪ್ರಯೋಜನವಾಗಿರಲಿಲ್ಲ. ಈ ಬಗ್ಗೆ ತಹಸೀಲ್ದಾರ ನಿಶ್ಚಲ್ ನೊರೋನ್ಹಾ ಅವರ ಗಮನಕ್ಕೆ ತಂದ ಬಳಿಕ ಈ ಬಗ್ಗೆ ಕುಲಂಕುಶವಾಗಿ ಪರಿಶೀಲನೆ ನಡೆಸಿ ನನಗೆ ನ್ಯಾಯ ನೀಡಿದ್ದಾರೆ ಎಂದು ಪಹಣಿ ಪಡೆದ ರೈತ ರತ್ನಾಕರ ತೊಡುರಕರ ಹೇಳಿದರು.

Share this article