ಹೊಳಲ್ಕೆರೇಲಿ ಏನಾದ್ರು ಅಭಿವೃದ್ಧಿ ಕೆಲಸ ಬಾಕಿ ಇದ್ರೆ ಹೇಳಿ

KannadaprabhaNewsNetwork |  
Published : Aug 28, 2024, 12:56 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್ | Kannada Prabha

ಸಾರಾಂಶ

Tell me if there is any development work pending in Holalkereli

-ಶಾಸಕ ಎಂ.ಚಂದ್ರಪ್ಪ ಮನವಿ । ಚಿಕ್ಕಜಾಜೂರು ಕಾವಲ್ ಗ್ರಾಮದಲ್ಲಿ 1.35 ಕೋಟಿ ರು ಕಾಮಗಾರಿಗೆ ಭೂಮಿ ಪೂಜೆ

------

ಕನ್ನಡಪ್ರಭ ವಾರ್ತೆ, ಹೊಳಲ್ಕೆರೆ

ಹೊಳಲ್ಕೆರೆ ತಾಲೂಕಿನಲ್ಲಿ ಏನಾದರೂ ಅಭಿವೃದ್ದಿ ಕೆಲಸಗಳು ಬಾಕಿ ಇದ್ರೆ ತಿಳಿಸಿ. ಯಾವುದೇ ಹಿಂಜರಿಕೆ ಬೇಡ. ಜನ ಸೇವಕನಾಗಿ ಗ್ರಾಮೀಣ ಅಭಿವೃದ್ಧಿಗೆ ಬದ್ದನಿರುವುದಾಗಿ ಶಾಸಕ ಎಂ.ಚಂದ್ರಪ್ಪ ಹೇಳಿದರು.

ತಾಲೂಕಿನ ಚಿಕ್ಕಜಾಜೂರು ಕಾವಲ್ ಗ್ರಾಮದಲ್ಲಿ ಒಂದು ಕೋಟಿ 35 ಲಕ್ಷ ರು. ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು ಅಭಿವೃದ್ದಿ ಮಾಡಲೆಂದೇ ರಾಜಕಾರಣಿಯಾಗಿದ್ದೇನೆ. ಎಲ್ಲರನ್ನು ಸಮಾನವಾಗಿ ಕಾಣಬೇಕೆಂಬ ದೃಷ್ಟಿಯಿಂದ ಜಾತಿ ತಾರತಮ್ಯ ಮಾಡದೆ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ ಎಂದರು.

ದೇಶಕ್ಕೆ ಸ್ವಾತಂತ್ರ್ಯ ಬಂದು 78 ವರ್ಷಗಳಾಗಿದೆ. ಅನೇಕ ಶಾಸಕರು ಕ್ಷೇತ್ರದಲ್ಲಿ ಬಂದು ಹೋಗಿದ್ದಾರೆ. ಆದರೆ, ರಸ್ತೆಗಳು ಮಾತ್ರ ಆಗಿರಲಿಲ್ಲ. ನಾನು ಶಾಸಕನಾದಾಗಿನಿಂದಲೂ ತಾಲೂಕಿನ 493 ಹಳ್ಳಿಗಳಲ್ಲಿಯೂ ಗುಣಮಟ್ಟದ ರಸ್ತೆಗಳ ನಿರ್ಮಿಸಿದ್ದೇನೆ. ಹೆಣ್ಣು ಮಕ್ಕಳು ಬೀದಿಗೆ ಬಂದು ನೀರು ಹಿಡಿಯಬಾರದೆಂದು ಟ್ಯಾಂಕ್ ಕಟ್ಟಿಸಿದ್ದೇನೆ. ಚಿಕ್ಕಜಾಜೂರಿನಿಂದ ಚಿತ್ರಹಳ್ಳಿವರೆಗೆ ಹೈಟೆಕ್ ರಸ್ತೆ ಮಾಡಿಸಿದ್ದೇನೆ. ಇನ್ನು ನೂರು ವರ್ಷಗಳಾದರೂ ಒಂದು ಚಿಕ್ಕ ಗುಂಡಿಯೂ ಬೀಳುವುದಿಲ್ಲ. ಚುನಾವಣೆಯಲ್ಲಿ ನನಗೆ ಮತ ನೀಡಿ ಗೆಲ್ಲಿಸಿದವರ ಋಣ ತೀರಿಸಬೇಕೆಂಬುದನ್ನು ಗಮನದಲ್ಲಿಟ್ಟುಕೊಂಡು ಕ್ಷೇತ್ರದಲ್ಲಿ ಯಾರು ಕೇಳಲಿ ಬಿಡಲಿ ಎಲ್ಲಿ ಏನೇನು ಸಮಸ್ಯೆಗಳಿದೆ ಎನ್ನುವುದನ್ನು ತಿಳಿದುಕೊಂಡು ಅಭಿವೃದ್ಧಿಗೆ ಶ್ರಮಿಸುತ್ತಿದ್ದೇನೆ. ಮಸೀದಿ ಕಟ್ಟಲು ಐವತ್ತು ಲಕ್ಷ ರು.ಗಳನ್ನು ನೀಡಿದ್ದೇನೆಂದು ಹೇಳಿದರು.

ಕೊಲ್ಲಾಪುರದಮ್ಮ ದೇವಸ್ಥಾನದ ಮುಂದಿನ ಗೋಕಟ್ಟೆಗೆ ಒಂದು ಕೋಟಿ ರು. ಅನುದಾನ ಕೇಳಲಾಗಿತ್ತು. ಆದರೆ, ಜನರ ಅಭಿಪ್ರಾಯ ಮೀರಿ ಒಂದುವರೆ ಕೋಟಿ ರು. ಕೊಟ್ಟಿದ್ದೇನೆ. ನಾಲ್ಕು ವರ್ಷಗಳ ಕಾಲ ಅಧಿಕಾರದಲ್ಲಿರುತ್ತೇನೆ. ಸರ್ಕಾರದಿಂದ ಅನುದಾನ ತಂದು ಕ್ಷೇತ್ರದ ಅಭಿವೃದ್ದಿಪಡಿಸುತ್ತೇನೆ. ತಲೆ ಕೆಡಿಸಿಕೊಳ್ಳುವುದು ಬೇಡ ಎಂದು ಮತದಾರರಿಗೆ ಭರವಸೆ ನೀಡಿದರು.

ಚಿಕ್ಕಜಾಜೂರು ಹತ್ತಿರ ಹಳ್ಳಕ್ಕೆ ಚೆಕ್‍ಡ್ಯಾಂ ನಿರ್ಮಿಸಲು ಒಂದು ಕೋಟಿ 37 ಲಕ್ಷ ರು., ಚಿಕ್ಕಜಾಜೂರು ಕಾವಲ್ ಗ್ರಾಮದ ಹತ್ತಿರ ಹಳ್ಳಕ್ಕೆ ಚೆಕ್‍ಡ್ಯಾಂ ಕಂ ಬ್ರಿಡ್ಜ್ ನಿರ್ಮಾಣ ಕಾಮಗಾರಿಗೆ ಒಂದು ಕೋಟಿ 39 ಲಕ್ಷ ರು. ಹಾಗೂ ಚಿಕ್ಕಜಾಜೂರು ಕಾವಲ್ ಗ್ರಾಮದ ಹತ್ತಿರ ಹೊಸ ಜಿನುಗು ಕೆರೆ ನಿರ್ಮಾಣಕ್ಕೆ 92 ಲಕ್ಷ ರು., ಚಿಕ್ಕಜಾಜೂರು ಗ್ರಾಮದ ಜಿನುಗು ಕೆರೆ ಅಭಿವೃದ್ದಿ ಕಾಮಗಾರಿಗೆ ಇದೆ ಸಂದರ್ಭದಲ್ಲಿ ಭೂಮಿ ಪೂಜೆ ನೆರವೇರಿಸಿದರು.

ಚಿಕ್ಕಜಾಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಜಲಿ ಮೋಹನ್, ಉಪಾಧ್ಯಕ್ಷ ನಾಗರಾಜ್, ಸದಸ್ಯರಾದ ಜಮೀರ ಭಾಷಾ, ಬಾಬು, ಶ್ರೀಕಾಂತ್, ಲಕ್ಷ್ಮಿ, ಕರೀಂಭಾಷ, ಡಿ.ಸಿ.ಮೋಹನ್, ಕೃಷ್ಣಮೂರ್ತಿ, ಸಣ್ಣ ನೀರಾವರಿ ಇಲಾಖೆ ಇಂಜಿನಿಯರ್ ನಾಗರಾಜ್ ಮತ್ತು ಗ್ರಾಮದ ಮುಖಂಡರು ಇದ್ದರು.

---------------

ಪೋಟೋ: ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಗ್ರಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿ ಪೂಜೆ ನೆರವೇರಿಸಿದರು.

---------

ಫೋಟೋ ಫೈಲ್ ನೇಮ್- 27 ಸಿಟಿಡಿ5

PREV

Recommended Stories

ವೈದ್ಯರ ಕೊರತೆಗೆ ನಲುಗಿದ ಸಾರ್ವಜನಿಕ ಆಸ್ಪತ್ರೆ
ಸತ್ಯಕಾಮರ ಸುಮ್ಮನೆಯಲ್ಲಿ ಕಸಾಪ ವಾರ್ಷಿಕ ಸಭೆ: ಡಾ.ಮಹೇಶ ಜೋಷಿ