ಶರಣರ ವಚನಗಳ ಅರ್ಥವನ್ನು ಮಕ್ಕಳಿಗೆ ಹೇಳಿಕೊಡಿ: ಮರಿಯಾಲಶ್ರೀ

KannadaprabhaNewsNetwork |  
Published : Jan 07, 2025, 12:16 AM IST
6ಸಿಎಚ್‌ಎನ್‌57ಚಾಮರಾಜನಗರ ತಾಲೂಕಿನ ಮರಿಯಾಲದಲ್ಲಿ ಯಳಂದೂರು ತಾಲ್ಲೂಕು ವೀರಶೈವ -ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಬಸವಶ್ರೀ ಪತ್ತಿನ ಸಹಕಾರ ಸಂಘದ 2025ರ ದಿನದರ್ಶಿಕೆ ಮರಿಯಾಲ ಮಠದ  ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ ಬಿಡುಗಡೆ ಗೊಳಿಸಿದರು. | Kannada Prabha

ಸಾರಾಂಶ

ಚಾಮರಾಜನಗರ ತಾಲೂಕಿನ ಮರಿಯಾಲದಲ್ಲಿ ಯಳಂದೂರು ತಾಲೂಕು ವೀರಶೈವ-ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಬಸವಶ್ರೀ ಪತ್ತಿನ ಸಹಕಾರ ಸಂಘದ 2025ರ ದಿನದರ್ಶಿಕೆಯನ್ನು ಮರಿಯಾಲ ಮಠದ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ಬಿಡುಗಡೆಗೊಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಬಸವಾದಿ ಶರಣರು 12ನೇ ಶತಮಾನದಲ್ಲಿ ನೀಡಿದ ಜೀವನಾಮೃತ ವಚನಗಳು ಹಾಗೂ ಅವರ ಬದುಕು ನಮ್ಮೆಲ್ಲರಿಗೂ ಮಾದರಿಯಾಗಬೇಕು. ನುಡಿದಂತೆ ನಡೆದವರು ನಮ್ಮ ಶರಣರು ಎಂದು ಮರಿಯಾಲ ಮಠದ ಇಮ್ಮಡಿ ಮುರುಘರಾಜೇಂದ್ರ ಸ್ವಾಮೀಜಿ ತಿಳಿಸಿದರು. ತಾಲೂಕಿನ ಮರಿಯಾಲದಲ್ಲಿ ಯಳಂದೂರು ತಾಲೂಕು ವೀರಶೈವ-ಲಿಂಗಾಯತ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ಬಸವಶ್ರೀ ಪತ್ತಿನ ಸಹಕಾರ ಸಂಘದ 2025ರ ದಿನದರ್ಶಿಕೆ ಬಿಡುಗಡೆಗೊಳಿಸಿ ಅವರು ಮಾತನಾಡಿದರು. ನೂತನ ವರ್ಷವು ಆರಂಭವಾಗಿದೆ. ಎಲ್ಲರು ತಮ್ಮ ಕಾಯಕದಲ್ಲಿ ನಿಷ್ಟರಾಗಿ ದುಡಿಯುವ ಜೊತೆಗೆ ಬಸವ ತತ್ವಗಳನ್ನು ಪಾಲನೆ ಮಾಡಿ, ಶರಣರ ವಚನಗಳನ್ನು ವಾಚನ ಮಾಡುವ ಜೊತೆಗೆ ಅದರ ಅರ್ಥವನ್ನು ಮಕ್ಕಳಿಗೆ ಹೇಳಿಕೊಡಿ. ಅದರಂತೆ ನಡೆಯಲು ಪ್ರಯತ್ನ ಮಾಡಿದರೆ ಸಾಕು ನಮ್ಮ ಬಾಳು ಬಂಗಾರವಾಗುತ್ತದೆ. ಯಾವುದೇ ಕೆಲಸಕ್ಕೆ ಹೋಗುವ ಮುನ್ನ ಬಸವ ಬಸವ ಎಂದು ಹೇಳುತ್ತಾ. ದಿನದರ್ಶಿಕೆಯಲ್ಲಿ ಶರಣರ ಭಾವಚಿತ್ರಗಳು ಹಾಗೂ ಅವರ ನಾಣ್ಣುಡಿಗಳನ್ನು ಪ್ರಕಟಿಸಿ. ಪ್ರತಿ ದಿನವು ನಿಮ್ಮೆಲ್ಲರ ಮನಕ್ಕೆ ಉಲ್ಲಾಸವನ್ನು ನೀಡುವಂತ ಮಾದರಿ ದಿನದರ್ಶಿಕೆಗಳನ್ನು ಪ್ರಕಟಿಸಿ ಎಂದರು. ಕಾರ್ಯಕ್ರಮದಲ್ಲಿ ನೌಕರರ ಸಂಘದ ಅಧ್ಯಕ್ಷ ಬಿ.ನಂಜುಂಡಸ್ವಾಮಿ, ಕಾರ್ಯದರ್ಶಿ ಮಲ್ಲಣ್ಣ, ಪದಾಧಿಕಾರಿಗಳಾದ ಮಹದೇವಪ್ಪ, ಸಿದ್ದರಾಜು, ಬಸವರಾಜು, ರವಿ, ನಿಕಟಪೂರ್ವ ಅಧ್ಯಕ್ಷ ಶಿವಕುಮಾರ್, ಪಿ.ಮಹದೇವಪ್ಪ ಹಾಗೂ ಮಲ್ಲಣ್ಣ, ಸದಸ್ಯರು, ಬಸವಶ್ರೀ ಪತ್ತಿನ ಸಂಘದ ಅಧ್ಯಕ್ಷ ಗುರುಸಿದ್ದಪ್ಪ, ಉಪಾಧ್ಯಕ್ಷೆ ಶೈಲಜಾ ಮಹದೇವಪ್ಪ, ನಿರ್ದೇಶಕರಾದ ವೀರಣ್ಣ, ಮಹದೇವಪ್ಪ, ನಾಗರಾಜು ಪಿ.ಎಸ್.ನಂಜುಂಡಸ್ವಾಮಿ, ರವಿ ಬಸವರಾಜು, ನೀಲಮ್ಮ, ಕಾರ್ಯದರ್ಶಿ ಮಹಾದೇವಸ್ವಾಮಿ, ಮಹೇಶ್, ನಂಜುಂಡಸ್ವಾಮಿ, ಮಲ್ಲೇಶಣ್ಣ ಹಾಗೂ ಸದಸ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವಿಜಯನಗರ ಪಾಲಿಕೆ ಬಜಾರ್‌ ಮಳಿಗೆಗಳ ಇ-ಹರಾಜು ಮೂಲಕ ವಿತರಿಸಿ: ಮಹೇಶ್ವರ್ ರಾವ್ ಸೂಚನೆ
ರಸ್ತೆ ಅಪಘಾತ ಸೈಕಲ್‌ ಸವಾರ ಸಾವು