ದ್ರಾವಿಡ ಬ್ರಾಹ್ಮಣರ ಸಂಘದ ದಶಮಾನೋತ್ಸವ ಕಾರ್ಯಕ್ರಮ

KannadaprabhaNewsNetwork | Published : Mar 24, 2025 12:31 AM

ಸಾರಾಂಶ

ದ್ರಾವಿಡ ಬ್ರಾಹ್ಮಣರ ಎಸೋಸಿಯೇಷನ್ ಮಂಗಳೂರು ತಾಲೂಕು ಇದರ ಶತಮಾನೋತ್ಸವ ಕಾರ್ಯಕ್ರಮ ಮಂಗಳೂರು ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ದ್ರಾವಿಡ ಬ್ರಾಹ್ಮಣರ ಎಸೋಸಿಯೇಷನ್ ಮಂಗಳೂರು ತಾಲೂಕು ಇದರ ಶತಮಾನೋತ್ಸವ ಕಾರ್ಯಕ್ರಮ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆಯಿತು.

ಶರವು ಶ್ರೀಮಹಾಗಣಪತಿ ದೇವಸ್ಥಾನದ ಮೊಕ್ತೇಸರ ರಾಘವೇಂದ್ರ ಶಾಸ್ತ್ರಿ ಉದ್ಘಾಟಿಸಿ, ಸಂಘದ ಐತಿಹಾಸಿಕ ಮಹತ್ವವನ್ನು ಮುಂದಿನ ಜನಾಂಗಕ್ಕೆ ತಲುಪಿಸಬೇಕು ಎಂದರು.

ಸಂದರ್ಭದಲ್ಲಿ ಶತಮಾನೋತ್ಸವದ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರು ಸಂಘದ ಸಾಧನೆಯನ್ನು ಶ್ಲಾಘಿಸಿ, ಶುಭಾಶಯ ಕೋರಿದರು.

ಶ್ರೀನಿವಾಸ ವಿಶ್ವವಿದ್ಯಾಲಯದ ಕುಲಪತಿ ಡಾ. ಎ. ರಾಘವೇಂದ್ರ ರಾವ್, ಕರ್ಣಾಟಕ ಬ್ಯಾಂಕಿನ ಜನರಲ್ ಮೆನೇಜರ್‌ ವಿನಯ ಭಟ್, ಸೂರ್ಯ ನಾರಾಯಣ ರಾವ್ ಇವರು ಶುಭ ಹಾರೈಸಿದರು.

ಸಮಾರಂಭದಲ್ಲಿ ಖ್ಯಾತ ಚಿತ್ರ ಕಲಾವಿದ ಬಿ. ಕೆ. ಮಾಧವ ರಾವ್, ಅಂತರಾಷ್ಟ್ರೀಯ ಪವರ್ ಲಿಫ್ಟಿರ್ ದೀಪಾ ಕೆ. ಎಸ್. ಹಾಗೂ ಸಮಾಜ ಸೇವಕ ಟಿ. ಎನ್. ರಮೇಶ್ ಇವರನ್ನು ಸನ್ಮಾನಿಸಲಾಯಿತು. ಸಂಘದ ಅಧ್ಯಕ್ಷ ರಮಾನಂದ ಪಾಂಗಾಳ್ ಇವರನ್ನು ಸದಸ್ಯರು ಗೌರವಿಸಲಾಯಿತು.

ಉಪಾಧ್ಯಕ್ಷ ಬೈಕಾಡಿ ಶ್ರೀನಿವಾಸ್ ರಾವ್ ಸ್ವಾಗತಿಸಿದರು. ರವಿಚಂದ್ರ ಹೊಳ್ಳ ಪ್ರಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಗುರುಚರಣ್ ವಂದಿಸಿದರು. ಜೇಷ್ಠ ಲಕ್ಷ್ಮಿ ನಿರೂಪಿಸಿದರು.

ಸಭಾ ಕಾರ್ಯಕ್ರಮದ ಬಳಿಕ ವಿದುಷಿ ಸುಮಂಗಲ ರತ್ನಾಕರ್ ನೇತೃತ್ವದಲ್ಲಿ ಯಕ್ಷಾರಾಧನಾ ಕಲಾ ಕೇಂದ್ರ ಉರ್ವ ಇವರಿಂದ ‘ಪಾರಿಜಾತಾಪಹರಣ - ಅಗ್ರ ಪೂಜೆ’ ಯಕ್ಷಗಾನ ಬಯಲಾಟ ನಡೆಯಿತು.ಈ ಸಂದರ್ಭದಲ್ಲಿ ಶತಮಾನೋತ್ಸವ ಸಮಿತಿ ಪ್ರಮುಖರಾದ ರಾಘವೇಂದ್ರ ಬಿ, ಭರತ್ ರಾವ್, ಕಾತ್ಯಾಯಿನಿ ರಾವ್, ಮೋಹನ್ ದಾಸ್, ಸುಧಾಕರ ರಾವ್ ಪೇಜಾವರ, ರಘುರಾಮ ರಾವ್, ಪಿ.ಆರ್. ಬೋಳೂರು, ಶ್ರೀನಿವಾಸ ರಾವ್, ಕಂಬಳ ವೆಂಕಟೇಶ ರಾವ್, ಸುಮನ ರಾವ್, ಅನಂತ ರಾಮ ರಾವ್ ಮತ್ತಿತರರಿದ್ದರು.

Share this article