ಕನ್ನಡಪ್ರಭ ವಾರ್ತೆ ಜಮಖಂಡಿ
ಡಾಂಬರ್ ಕಾಯಿಸುವ ಫೆವರ್ ವಾಹನವನ್ನು ಟ್ರ್ಯಾಕ್ಟರ್ ನೊಂದಿಗೆ ಎಳೆದುಕೊಂಡು ಮುಧೋಳ ಕಡೆಗೆ ಹೋಗುತ್ತಿದ್ದಾಗ ದುರ್ಘಟನೆ ನಡೆದಿದೆ ಟ್ಯ್ರಾಕ್ಟರ್ ಚಾಕನ ಅಯ ತಪ್ಪಿದ ಪರಿಣಾಮ ಹಳ್ಳಕ್ಕೆ ವಾಹನ ಉರುಳಿಬಿದ್ದು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮುಧೋಳ ತಾಲುಕಿನ ಮುಗಳಖೋಡ ಗ್ರಾಮದ ರಾಜೇಸಾಹೇಬ ಜಾತಗಾರ ಅವರಿಗೆ ವಾಹನ ಚಾಲಕನಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಸಿಪಿಐ ಮಲ್ಲಪ್ಪ ಮಡ್ಡಿ. ಶಹರ ಪೊಲೀಸ್ ಠಾಣೆಯ ಪಿಎಸ್‌ಐ ಅನೀಲ ಕುಂಬಾರ, ಗ್ರಾಮೀಣ ಪಿಎಸ್‌ಐ ಗಂಗಾಧರ ಪೂಜಾರಿ ಹಾಗೂ ಅಗ್ನಿ ಶಾಮಕ ಠಾಣೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಾಹನದ ಕೆಳಭಾಗದಲ್ಲಿ ಸಿಲುಕಿದ್ದ ಚಾಲಕ ನನ್ನು ಹೊರತೆಗೆಯಲು ಹರ ಸಾಹಸ ಪಟಬೇಕಾಯಿತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.