ಸೊರಬ: ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಉಗ್ರರು ಪ್ರವಾಸಿಗರ ಮೇಲೆ ನಡೆಸಿದ ಹತ್ಯೆಯನ್ನು ಖಂಡಿಸಿ ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಪಟ್ಟಣದಲ್ಲಿ ಪಂಜಿನ ಮೆರವಣಿಗೆಯ ಮೂಲಕ ಪ್ರತಿಭಟನೆ ನಡೆಸಲಾಯಿತು.ಜಡೆ ಹಿರೇಮಠ ಮತ್ತು ಸೊರಬ ಕಾನುಕೇರಿ ಮಠದ ಅಮರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸಂಜೆ ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಅವರಣದಲ್ಲಿ ಪಂಜಿನ ಮೆರವಣಿಗೆಗೆ ಚಾಲನೆ ನೀಡಿದರು.
ದೇಶದ ಪ್ರಧಾನ ಮಂತ್ರಿಗಳು ಹೇಳಿದಂತೆಯೇ ಈ ಭಯೋತ್ಪಾದಕರನ್ನು ಈ ಭೂಮಿಯಲ್ಲಿಯೇ ಇಲ್ಲದಂತಾಗಿಸಬೇಕು. ಪಶ್ಚಿಮ ಬಂಗಾಳದಲ್ಲಿ ಬಾಂಗ್ಲಾ ದೇಶಕ್ಕೆ ಹೊಂದಿಕೊಂಡಿರುವ ಮುರ್ಶಿದಾಬಾದ್, ಮಾಲ್ಟಾ ಹಾಗೂ ೨೪ ಜಿಲ್ಲೆಗಳಲ್ಲಿ ಮುಸ್ಲಿಂ ಜನಸಂಖ್ಯೆ ಹೆಚಾಗಿದ್ದು, ಚಿಕ್ಕಂದಿನಿಂದ ಹಿಂದೂಗಳ ಬಗ್ಗೆ ಅವರಲ್ಲಿ ಅಸಹಿಷ್ಣುತೆ ಬೆಳೆಸಲಾಗಿದೆ ಎಂದು ದೂರಿದರು.ಪಂಜಿನ ಮೆರವಣಿಗೆಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಪ್ರಕಾಶ ಅಗಸನಹಳ್ಳಿ, ಮಾಜಿ ಅಧ್ಯಕ್ಷ ಪ್ರಕಾಶ್ ತಲಕಾಲಕೊಪ್ಪ, ಜಾನಕಪ್ಪ ಯಲಸಿ, ಹಿಂದೂ ಜಾಗರಣಾ ವೇದಿಕೆಯ ಲೋಕೇಶ್ ಕಕ್ಕರಸಿ, ವಿಹಿಂಪ ತಾಲೂಕು ಅಧ್ಯಕ್ಷ ಕಾಳಿಂಗರಾಜ್, ಸಾಗರ ಜಿಲ್ಲಾ ಸಹ ಸಂಚಾಲಕ ರವಿ ಗುಡಿಗಾರ್, ಗೋ ಸಂರಕ್ಷಣಾ ಹೋರಾಟ ಸಮಿತಿ ಅಧ್ಯಕ್ಷ ಜೆ.ಎಸ್.ಚಿದಾನಂದಗೌಡ, ಪ್ರಮುಖರಾದ ನಾಗರಾಜ ಗುತ್ತಿ, ಸಿ.ಪಿ.ಈರೇಶಗೌಡ, ಪ್ರಸನ್ನ ಶೇಟ್, ರಾಜು ಮಾವಿನಬಳ್ಳಿಕೊಪ್ಪ, ಹರೀಶ್, ಪುನಿತ್, ಶಿವಯೋಗಿ, ಸುಧಾಕರ ಭಾವೆ, ಮಹೇಶ ಖಾರ್ವಿ, ಎಂ.ಕೆ.ಯೋಗೇಶ್, ಸಂಜೀವ ಆಚಾರ್, ಜಿ.ಕೆರಿಯಪ್ಪ, ಸುರೇಶ್ ಭಂಡಾರಿ, ಅರುಣ ಪುಟ್ಟನಹಳ್ಳಿ, ವೈ.ಜಿ.ಗುರುಮೂರ್ತಿ ಚಿಕ್ಕಶಕುನ, ಮಂಜಪ್ಪ ಕರಡಿಗೇರಿ, ರಂಗನಾಥ ಮೊಗವೀರ, ಸುರೇಶ್ ಉದ್ರಿ ಮೊದಲಾದವರು ಹಾಜರಿದ್ದರು.