ಕನ್ನಡ ಪ್ರಭ ವಾರ್ತೆ ಕುಶಾಲನಗರ
ಮಳೆ ಹಾನಿ ಪ್ರದೇಶಗಳಿಗೆ ಕುಶಾಲನಗರ ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ಅವರು ಭೇಟಿ ಮಾಡಿ ಪರಿಶೀಲನೆ ನಡೆಸಿದರು. ಕುಶಾಲನಗರ ಸಮೀಪದ ಮಾದಪಟ್ಟಣ, ಕೂಡಿಗೆ, ಹೆಗ್ಗಡಳ್ಳಿ ಗ್ರಾಮಗಳ ಪ್ರದೇಶಗಳಲ್ಲಿ ಹಾನಿಗೊಂಡಿರುವ ಮನೆಗಳಿಗೆ ಭೇಟಿ ನೀಡಿದ ತಹಸೀಲ್ದಾರ್ ಮತ್ತು ಸಿಬ್ಬಂದಿ ತಂಡ ಕುಟುಂಬ ಸದಸ್ಯರೊಂದಿಗೆ ಚರ್ಚೆ ನಡೆಸಿ ಸೂಕ್ತ ಪರಿಹಾರ ಒದಗಿಸುವ ಭರವಸೆ ನೀಡಿದರು.
ಕುಶಾಲನಗರದ ತಗ್ಗು ಪ್ರದೇಶದ ಬಡಾವಣೆಗಳಾದ ಸಾಯಿ, ಕುವೆಂಪು ಬಡಾವಣೆಗಳಿಗೆ ಭೇಟಿ ನೀಡಿದ ತಹಸೀಲ್ದಾರ್, ಕುಶಾಲನಗರ- ಕೊಪ್ಪ ಸೇತುವೆ ಬಳಿ ನದಿಯಲ್ಲಿ ನೀರಿನ ಹರಿವಿನ ಪ್ರಮಾಣ ಬಗ್ಗೆ ಗಮನಹರಿಸಿದರು.ಹಾರಂಗಿ ಅಣೆಕಟ್ಟಿನಿಂದ ಹೆಚ್ಚುವರಿ ನೀರನ್ನು ಬಿಡುವ ಸಂದರ್ಭ ಮುಳುಗಿದ ಸೇತುವೆ ಬಳಿ ತೆರಳಿದ ತಹಸೀಲ್ದಾರ್ ಸೇತುವೆಯ 2 ಎರಡು ಭಾಗಗಳಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ಜನರು ಅಥವಾ ವಾಹನಗಳು ಸಂಚರಿಸಿದಂತೆ ಎಚ್ಚರ ವಹಿಸುವಂತೆ ಸ್ಥಳೀಯ ಪೊಲೀಸರಿಗೆ ಸೂಚನೆ ನೀಡಿದರು.