12 ದಿನದ ಫಲಪುಷ್ಪ ಪ್ರದರ್ಶನಕ್ಕೆ ಇಂದು ತೆರೆ

KannadaprabhaNewsNetwork |  
Published : Aug 17, 2026, 02:15 AM IST
lalbagh  Flower Show 4 | Kannada Prabha

ಸಾರಾಂಶ

ಲಾಲ್‌ಬಾಗ್‌ ನಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ 1.45 ಲಕ್ಷ ಜನರು ಆಗಮಿಸಿದ್ದು ಟಿಕೆಟ್‌ನಿಂದ 70 ಲಕ್ಷ ರು. ಸಂಗ್ರಹವಾಗಿದೆ ಎಂದು ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಲಾಲ್‌ಬಾಗ್‌ ನಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಭಾನುವಾರ 1.45 ಲಕ್ಷ ಜನರು ಆಗಮಿಸಿದ್ದು ಟಿಕೆಟ್‌ನಿಂದ 70 ಲಕ್ಷ ರು. ಸಂಗ್ರಹವಾಗಿದೆ ಎಂದು ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ.

ನಗರದ ನಾನಾ ಭಾಗಗಳಿಂದ ಲಾಲ್‌ಬಾಗ್‌ಗೆ ಮೆಟ್ರೊದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದ್ದರಿಂದ ಲಾಲ್‌ಬಾಗ್‌ ವೆಸ್ಟ್‌ ಗೇಟ್‌ ಬಳಿಯಿರುವ ಮೆಟ್ರೊ ನಿಲ್ದಾಣದಲ್ಲಿ ಜನ ಸಾಲುಗಟ್ಟಿ ನಿಂತಿದ್ದರು. ಟಿಕೆಟ್‌ ಕೌಂಟರ್‌ಗಳಲ್ಲಿಯೂ ಜನ ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡು ಬಂತು. ಈ ಭಾಗದ ಮೆಟ್ರೊದಲ್ಲಿ ಇಡೀ ದಿನ ಜನ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬಂದರೂ, ಸಂಜೆಯ ವೇಳೆಗೆ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದರು.

ಭಾನುವಾರ ವಯಸ್ಕರು 97,950, ಮಕ್ಕಳು 32,400, ವಿದ್ಯಾರ್ಥಿಗಳು 15,650 ಹೀಗೆ ಒಟ್ಟು 1.46 ಲಕ್ಷ ಜನರು ಪುಷ್ಪ ಪ್ರದರ್ಶನಕ್ಕೆ ಆಗಮಿಸಿದ್ದರು.ಒಟ್ಟು ಟಿಕೆಟ್‌ ಮಾರಾಟದಿಂದ 70 ಲಕ್ಷ ರು. ಸಂಗ್ರಹವಾಗಿದೆ ಎಂದು ತೋಟಗಾರಿಕೆ ಇಲಾಖೆ ಅಪರ ನಿರ್ದೇಶಕ ಡಾ.ಎಂ.ಜಗದೀಶ್‌ ಮಾಹಿತಿ ನೀಡಿದ್ದಾರೆ.

ಈವರೆಗೆ 7.88 ಲಕ್ಷ ಮಂದಿ ವೀಕ್ಷಣೆ!

ಆಗಸ್ಟ್‌ 6ರಿಂದ 17ರವರೆಗೆ ಲಾಲ್‌ಬಾಗ್‌ನಲ್ಲಿ ಆಯೋಜಿಸಿದ್ದ ಗಂಗರಸರ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ ಸೋಮವಾರ ಮುಕ್ತಾಯವಾಗಲಿದೆ. ಈವರೆಗೆ ಒಟ್ಟು 7,88,106 ಮಂದಿ ಪುಷ್ಪ ಪ್ರದರ್ಶನ ವೀಕ್ಷಣೆಗೆ ಆಗಮಿಸಿದ್ದು, ಅಂದಾಜು 3,38,14,220 ರು.ಟಿಕೆಟ್‌ನಿಂದ ಸಂಗ್ರಹವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕರಾವಳಿಯಲ್ಲಿ ಕ್ಷೀಣಿಸುತ್ತಿದೆ ಕಪ್ಪೆಗಳ ಸಂತತಿ!
ಲಭ್ಯತೆ ಆಧರಿಸಿ ತ.ನಾಡಿಗೆ ಕಾವೇರಿ ನೀರು: ಸಿಎಂ