ಬೆಳಗಾವಿಯಲ್ಲಿ 25 ಗಂಟೆಗಳ ಕಾಲ ಶಾಂತಿಯುತವಾಗಿ ಸಾರ್ವಜನಿಕ ಗಣೇಶ ವಿಸರ್ಜನಾ ಮೆರವಣಿಗೆ

KannadaprabhaNewsNetwork |  
Published : Sep 19, 2024, 02:01 AM ISTUpdated : Sep 19, 2024, 07:39 AM IST
ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿರುವ ಸಚಿವ ಸತೀಶ ಜಾರಕಿಹೊಳಿ. | Kannada Prabha

ಸಾರಾಂಶ

ಬೆಳಗಾವಿಯಲ್ಲಿ ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ 25 ಗಂಟೆಗಳ ಕಾಲ ಶಾಂತಿಯುತವಾಗಿ ನೆರವೇರಿತು. ಮಂಗಳವಾರ ಸಂಜೆ ಆರಂಭವಾದ ಮೆರವಣಿಗೆ ಬುಧವಾರ ಸಂಜೆ ಮಹಾನಗರ ಪಾಲಿಕೆಯ ಗಣೇಶನ ವಿಸರ್ಜನೆಯೊಂದಿಗೆ ಮುಕ್ತಾಯಗೊಂಡಿತು.

  ಬೆಳಗಾವಿ :  ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಬೆಳಗಾವಿಯಲ್ಲಿ ಬರೋಬ್ಬರಿ 25 ಗಂಟೆ ಕಾಲ ಶಾಂತಿಯುತವಾಗಿ ನೆರವೇರಿದೆ.

ಹುತಾತ್ಮಚೌಕ್‌ದಲ್ಲಿ ಮಂಗಳವಾರಸಂಜೆ 5 ಗಂಟೆಗೆ ಶಾಸಕ ಅಭಯ ಪಾಟೀಲ ಅವರು ಗಣೇಶ ಮೂರ್ತಿಗಳ ವಿಸರ್ಜನಾ ಮೆರ‍ಣಿಗೆಗೆ ಚಾಲನೆ ನೀಡಿದ್ದರು. ಬುಧವಾರ ಸಂಜೆ 6 ಗಂಟೆಗೆ ಮಹಾನಗರ ಪಾಲಿಕೆಯ ಗಣೇಶನ್ನು ವಿಸರ್ಜಿಸುವ ಮೂಲಕ ಗಣೇಶನಿಗೆ ವಿದಾಯ ಹೇಳಲಾಯಿತು.ಸಾರ್ವಜನಿಕ ಗಣೇಶ ಮೂರ್ತಿಗಳ ವಿಸರ್ಜನಾ ಮೆರವಣಿಗೆ ಸಡಗರ, ಸಂಭ್ರಮದಿಂದ ನೆರವೇರಿದೆ.

 ಮಂಗಳವಾರ ತಡ ರಾತ್ರಿಯವರೆಗೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಗಣೇಶ ಮೂರ್ತಿಗಳ ವೀಕ್ಷಣೆಗೆ ಜಿಲ್ಲೆಯಮೂಲೆ ಮೂಲೆಗಳಿಂದ ಆಗಮಿಸಿದ್ದ ಜನರು ರಸ್ತೆಯಇಕ್ಕೆಲ್ಲಗಳಲ್ಲಿ ನಿಂತು ವೀಕ್ಷಿಸಿದರು. ಝಗಮಗಿಸುವ ವಿದ್ಯುತ್‌ ದೀಪಾಲಂಕಾರ, ಭಕ್ತರ ಜಯಘೋಷಣೆಗಳೊಂದಿಗೆ ಗಣೇಶನಿಗೆ ಸಂಭ್ರಮದಿಂದ ವಿದಾಯಹೇಳಲಾಯಿತು.

ಕೆಲ ಗಣೇಶ ಮೂರ್ತಿಗಳ ಮೆರವಣಿಗೆ ಮಾರ್ಗ ಬದಲಿಸಿದ ಪೊಲೀಸರ ಕ್ರಮ ಗಣೇಶ ಉತ್ಸವಮಂಡಳಗಳ ಪದಾಧಿಕಾರಿಗಳ ಆಕ್ರೋಶಕ್ಕೆಕಾರಣವಾಯಿತು. ಕೆಲ ಸಣ್ಣ ಪುಟ್ಟ ಘಟನೆಗಳನ್ನು ಹೊರತುಪಡಿಸಿದರೆ ಗಣೇಶ ಮೂರ್ತಿಗಳ ವಿಸರ್ಜನಾ ಮೆರ‍ವಣಿಗೆ ಶಾಂತಿಯುತವಾಗಿ ನೆರವೇರಿತು. ಗಣೇಶ ವಿಸರ್ಜನಾ ಮೆರ‍ವಣಿಗೆ ಹಿನ್ನೆಲೆಯಲ್ಲಿ ನಗರದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು