ಶಿವಗಂಗೆ ಬೆಟ್ಟದ ತಪ್ಪಲಲ್ಲಿ ಬೋನಿಗೆ ಬಿದ್ದ 3ನೇ ಚಿರತೆ

KannadaprabhaNewsNetwork |  
Published : Nov 28, 2024, 12:31 AM IST
ಪೋಟೋ 7  : ಬೋನಿಗೆ ಬಿದ್ದಿರುವ ಚಿರತೆ | Kannada Prabha

ಸಾರಾಂಶ

ದಾಬಸ್‌ಪೇಟೆ: ಸೋಂಪುರ ಹೋಬಳಿಯ ದಕ್ಷಿಣಕಾಶಿ ಶಿವಗಂಗೆ ಬೆಟ್ಟದ ತಪ್ಪಲಿನ ಹುಣಸೇಹಳ್ಳಿ ಬಳಿ ಬುಧವಾರ ಸಂಜೆ 3ನೇ ಚಿರತೆ ಬೋನಿಗೆ ಬಿದ್ದಿದೆ.

ದಾಬಸ್‌ಪೇಟೆ: ಸೋಂಪುರ ಹೋಬಳಿಯ ದಕ್ಷಿಣಕಾಶಿ ಶಿವಗಂಗೆ ಬೆಟ್ಟದ ತಪ್ಪಲಿನ ಹುಣಸೇಹಳ್ಳಿ ಬಳಿ ಬುಧವಾರ ಸಂಜೆ 3ನೇ ಚಿರತೆ ಬೋನಿಗೆ ಬಿದ್ದಿದೆ. ಇದುವರೆಗೂ ಮೂರು ದಿನಗಳಲ್ಲಿ ಮೂರು ಚಿರತೆ ಸೆರೆಯಾಗಿದ್ದು, ಸೋಮವಾರ, ಮಂಗಳವಾರ, ಬುಧವಾರ 3 ಚಿರತೆಗಳು ಸಾಲಾಗಿ ಬೋನಿಗೆ ಬಿದ್ದು, ಸುತ್ತಮತ್ತಲ ಗ್ರಾಮಸ್ಥರು ನಿಟ್ಟುಸಿರು ಬಿಡುವಂತಾಗಿದೆ. ನೆಲಮಂಗಲ ವಲಯ ಅರಣ್ಯಾಧಿಕಾರಿ ಮಂಜುನಾಥ್ ಮತ್ತು ತಂಡ ಸತತ ಹತ್ತು ದಿನಗಳಿಂದ ಕಾರ್ಯಚರಣೆ ಮುಂದುವರೆಸಿದೆ. ಒಂದು ವಾರದ ಹಿಂದೆನರಭಕ್ಷಕ ಚಿರತೆ ರೈತ ಮಹಿಳೆ ಬಲಿಯಾದ ಬಳಿಕ ಅರಣ್ಯ ಇಲಾಖೆ ಚಿರತೆಗಳ ಸೆರೆಗೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿತು. ಅದರ ಫಲವೇ ಮೂರು ದಿನಗಳಿಂದ ಸತತವಾಗಿ 3 ಚಿರತೆ ಬೋನಿಗೆ ಬಿದ್ದಿವೆ. ಸ್ಥಳಕ್ಕೆ ಆಗಮಿಸಿದ ಬೆಂ.ಗ್ರಾ. ಡಿಸಿಎಫ್ ಸೆರೀನಾ ಸಿಕ್ಕಲಿಗಾರ್ ಎಸಿಎಫ್ ನಿಜಾಮುದ್ದೀನ್, ಅರವಳಿಕೆ ತಜ್ಞ ಡಾ.ಕಿರಣ್ ಅಧಿಕಾರಿಗಳು ತಂಡ ಚಿರತೆಯನ್ನು ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ರವಾನಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡದಲ್ಲೂ ರೈಲ್ವೆ ಪರೀಕ್ಷೆ ನಡೆಸಲು ಪ್ರಧಾನಿ ಮೋದಿ ಅಸ್ತು: ಸೋಮಣ್ಣ
ಬಿಜೆಪಿ ಶಾಸಕ ಬೈರತಿ ವಿರುದ್ಧ ಲುಕ್‌ ಔಟ್‌ ನೋಟಿಸ್‌ ಜಾರಿ?