ದಕ್ಷಿಣ ಭಾರತದಲ್ಲಿ ಹುಟ್ಟಿದರೂ ಸಹ ವಿಶ್ವ ಮನ್ನಣೆ ಪಡೆದ ಜಾಗತಿಕ ಹಾಡುಗಾರ್ತಿ. ಇಂದು ಪ್ರತಿಭಾವಂತರನ್ನು ಗುರುತಿಸಲು ನೂರಾರು ವೇದಿಕೆಗಳಿವೆ. ಆದರೆ, ಜಾನಕಿ ಅಮ್ಮನವರ ಕಾಲದಲ್ಲಿ ಪ್ರತಿಭೆ ಗುರುತಿಸುವುದೇ ಕಷ್ಟವಾಗಿತ್ತು. ಹೆಣ್ಣು ಮಕ್ಕಳು ಸಾರ್ವಜನಿಕ ಒಡನಾಟವನ್ನು ಹೊಂದುವುದೆ ಕಷ್ಟಕರವಾಗಿತ್ತು.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಗಾನಕೋಗಿಲೆ ಎಸ್.ಜಾನಕಿ ಸಾಧನೆ ವಿಶ್ವದಾಖಲೆಗೆ ಸಮಾನ. ತನ್ನ ಗಾಯನದಿಂದ ಮಕ್ಕಳಿಂದ ವಯೋವೃದ್ಧರನ್ನು ಕೂಡಾ ಅಭಿಮಾನಿಗಳನ್ನಾಗಿ ಪಡೆದ ಹೃದಯವಂತೆ ಎಂದು ರೈತ ಹೋರಾಟಗಾರ್ತಿ ನಂದಿನಿ ಜಯರಾಂ ಹೇಳಿದರು.
ಪಟ್ಟಣದ ಪ್ರಗತಿ ವಿದ್ಯಾಶಾಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಎಸ್.ಜಾನಕಿ ಅಮ್ಮನವರ ಸಂಸ್ಮರಣೆಯಲ್ಲಿ ಮಾತನಾಡಿ, ಹಾಡುವ ಹಕ್ಕಿಗೆ ಪ್ರತಿ ನಿತ್ಯ ಹೇಗೆ ಹಾಡುವುದೆ ಕಾಯಕವೊ ಹಾಗೆ ಎಸ್.ಜಾನಕಿ ಅಮ್ಮನವರಿಗೂ ಕೂಡಾ ಹಾಡುವುದೆ ಕಾಯಕವಾಗಿತ್ತು ಎಂದರು.
ದಕ್ಷಿಣ ಭಾರತದಲ್ಲಿ ಹುಟ್ಟಿದರೂ ಸಹ ವಿಶ್ವ ಮನ್ನಣೆ ಪಡೆದ ಜಾಗತಿಕ ಹಾಡುಗಾರ್ತಿ. ಇಂದು ಪ್ರತಿಭಾವಂತರನ್ನು ಗುರುತಿಸಲು ನೂರಾರು ವೇದಿಕೆಗಳಿವೆ. ಆದರೆ, ಜಾನಕಿ ಅಮ್ಮನವರ ಕಾಲದಲ್ಲಿ ಪ್ರತಿಭೆ ಗುರುತಿಸುವುದೇ ಕಷ್ಟವಾಗಿತ್ತು. ಹೆಣ್ಣು ಮಕ್ಕಳು ಸಾರ್ವಜನಿಕ ಒಡನಾಟವನ್ನು ಹೊಂದುವುದೆ ಕಷ್ಟಕರವಾಗಿತ್ತು. ಇಂತಹ ಎಲ್ಲಾ ಸವಾಲುಗಳನ್ನು ನಗು ನಗುತ್ತಲೆ ಎದುರಿಸಿ ಎಲ್ಲವನ್ನು ಸಮಚಿತ್ತದಿಂದ ಸ್ವೀಕರಿಸಿ ಕನ್ನಡ ಮಣ್ಣಿನಲ್ಲಿ ಲೀನವಾಗಿದ್ದಾರೆ. ಕನ್ನಡ ನಾಡಿನ ಶ್ರೇಷ್ಠತೆಗೆ ಮತ್ತೊಂದು ನಿದರ್ಶನ ಎಂದು ಅಭಿಪ್ರಾಯಪಟ್ಟರು.
ಕಸಾಪ ಮಾಜಿ ಅಧ್ಯಕ್ಷ ಕೆ.ಕಾಳೇಗೌಡ ಮಾತನಾಡಿ, ಎಸ್.ಜಾನಕಿ ಅಮ್ಮನವರ ಹಾಡುಗಳನ್ನು ಅಂದಿನ ಕಾಲದ ಸಂಪರ್ಕ ಸೇತುವಾಗಿದ್ದ ರೇಡಿಯೋಗಳನ್ನು ಕೇಳಿ ಸಂತಸ ಪಡುತ್ತಿದ್ದೆವು. ಅದರಲ್ಲಿಯೂ ಮೆಚ್ಚಿನ ಚಿತ್ರಗೀತೆಗಳಲ್ಲಿ ಡಾ.ರಾಜಕುಮಾರ್ ಮತ್ತು ಎಸ್.ಜಾನಕಿ ಅವರು ಹಾಡುಗಳಿಗೆ ಸಿಂಹಪಾಲಿತ್ತು ಎಂದರು.
ಶರೀರ ನಮ್ಮಿಂದ ಕಣ್ಮರೆಯಾಗಿದೆ ಅಷ್ಟೆ. ಜಾನಕಿ ಅಮ್ಮನವರ ಶಾರೀರ ಯುಗ ಯುಗಗಳು ಕಳೆದರು ಕೂಡಾ ಶಾಶ್ವತವಾಗಿರುತ್ತದೆ. ಅವರು ಹುಟ್ಟಿದ್ದ ಆಂಧ್ರಪ್ರದೇಶದಲ್ಲಾದರು ಕೂಡಾ ಕನ್ನಡದ ಮೇಲಿನ ಪ್ರೇಮವನ್ನು ಹಾಗೂ ಕನ್ನಡಿಗರ ಹೃದಯ ವೈಶಾಲ್ಯತೆ ಮೆಚ್ಚಿ ಮೈಸೂರಿನಲ್ಲಿಯೆ ಜೀವಿಸಿ ಇಲ್ಲಿಯೆ ಇಹಲೋಕವನ್ನು ತ್ಯಜಿಸಿದ್ದಾರೆ. ಎಲ್ಲಾ ಕನ್ನಡ ಪ್ರೇಮಿಗಳಿಗೂ ಕೂಡಾ ಪಾಠವಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ತಾಲೂಕಿನ ಖ್ಯಾತ ಹಾಡುಗಾರರಾದ ರವಿ ಶಿವಕುಮಾರ್ ಮತ್ತು ಪಂಡಿತ್ ಪುಟ್ಟರಾಜ ಗವಾಯಿಗಳ ಶಿಷ್ಯ ಚಿನ್ಮಲ್ ಮತ್ತು ಸಂಗಡಿಗರಿಂದ ಸಂಗೀತದ ಕಾರ್ಯಕ್ರಮ ನಡೆಯಿತು. ನಿವೃತ್ತ ಶಿಕ್ಷಕ ಎಸ್.ಸಿ.ನಾಗೇಶ್ ಅವರನ್ನು ಅಭಿನಂದಿಸಲಾಯಿತು.
ಕಾರ್ಯಕ್ರಮದಲ್ಲಿ ಕಸಾಪ ಅಧ್ಯಕ್ಷ ಎಚ್.ಆರ್.ಪೂರ್ಣಚಂದ್ರ ತೇಜಸ್ವಿ, ಮಾಜಿ ಅಧ್ಯಕ್ಷರಾದ ಎಂ.ಕೆ.ಹರಿಚರಣತಿಲಕ್, ಕೆ.ಎಸ್.ಸೋಮಶೇಖರ್, ಜಾನಪದ ಪರಿಷತ್‌ನ ಅಧ್ಯಕ್ಷ ಕತ್ತರಘಟ್ಟ ವಾಸು, ಸುಜನಾ ಟ್ರಸ್ಟ್ ಕೋಶಾಧ್ಯಕ್ಷ ಚಾ.ಶಿ.ಜಯಕುಮಾರ್, ಕರವೇ ಅಧ್ಯಕ್ಷ ಅಗ್ರಹಾರಬಾಚಹಳ್ಳಿ ಶ್ರೀನಿವಾಸ್, ಮುಖ್ಯ ಶಿಕ್ಷಕ ಎಚ್.ಆರ್.ಗೋಪಾಲಕೃಷ್ಣ, ಶಿಕ್ಷಕ ನಾಗರಾಜು, ಮುಖಂಡ ಶ್ಯಾರಹಳ್ಳಿ ಗೋವಿಂದರಾಜು ಸೇರಿದಂತೆ, ವಿದ್ಯಾರ್ಥಿಗಳು ಪೋಷಕರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.