ಕಾಂಗ್ರೆಸ್‌ ಅಭ್ಯರ್ಥಿಗಳ ಗೆಲ್ಲಿಸಿದರೆ ಅನುಕೂಲ ಹೆಚ್ಚು: ಶಾಸಕ ಗೋಪಾಲಕೃಷ್ಣ ಬೇಳೂರು

KannadaprabhaNewsNetwork |  
Published : May 28, 2024, 01:11 AM IST
ಬೇಳೂರು ಸುದ್ದಿಗೋಷ್ಠಿ ನಡೆಸಿದರು | Kannada Prabha

ಸಾರಾಂಶ

ಕಾರ್ಮಿಕರು, ಬಡವರು, ಎಲ್ಲ ವರ್ಗದ ಜನರ ಪರವಾಗಿ ಕೆಲಸ ಮಾಡಿರುವ ಆಯನೂರು ಮಂಜುನಾಥ್ ನೈಋತ್ಯ ಪದವೀಧರ ಕ್ಷೇತ್ರಕ್ಕೂ, ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ ಶೈಕ್ಷಣಿಕ ಕ್ಷೇತ್ರದ ಬಗ್ಗೆ ಅಪಾರ ಅನುಭವ ಹೊಂದಿರುವ ಕೆ.ಕೆ.ಮಂಜುನಾಥ್ ಶಿಕ್ಷಕರ ಕ್ಷೇತ್ರಕ್ಕೂ ಸ್ಪರ್ಧೆ ಮಾಡಿದ್ದು, ಪಕ್ಷ ಅರ್ಹರಿಗೆ ಟಿಕೆಟ್ ನೀಡಿದೆ. ಪದವೀಧರರು ಮತ್ತು ಶಿಕ್ಷಕರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸುವುದರಿಂದ ಹೆಚ್ಚು ಅನುಕೂಲವಾಗಲಿದೆ.

ಕನ್ನಡಪ್ರಭವಾರ್ತೆ ಸಾಗರ

ನೈಋತ್ಯ ಪದವೀಧರ ಕ್ಷೇತ್ರದಿಂದ ಆಯನೂರು ಮಂಜುನಾಥ್, ಶಿಕ್ಷಕರ ಕ್ಷೇತ್ರದಿಂದ ಕೆ.ಕೆ.ಮಂಜುನಾಥ ಕಾಂಗ್ರೆಸ್ ಪಕ್ಷದಿಂದ ಕಣಕ್ಕೆ ಇಳಿದಿದ್ದು, ಪಕ್ಷದ ಇಬ್ಬರೂ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಪಟ್ಟಣದ ಮಲೆನಾಡು ಸಿರಿ ಸಭಾಂಗಣದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪಕ್ಷದ ಇಬ್ಬರು ಅಭ್ಯರ್ಥಿಗಳ ಗೆಲುವಿಗಾಗಿ ಕ್ಷೇತ್ರ ವ್ಯಾಪ್ತಿಯ ಶಾಲಾ ಕಾಲೇಜು, ವಿವಿಧ ಕಚೇರಿ ಹಾಗೂ ಪದವೀಧರರ ಭೇಟಿಯಾಗಿ ಮನವಿ ಮಾಡಲಾಗುತ್ತಿದೆ ಎಂದು ಹೇಳಿದರು.

ಕಾರ್ಮಿಕರು, ಬಡವರು, ಎಲ್ಲ ವರ್ಗದ ಜನರ ಪರವಾಗಿ ಕೆಲಸ ಮಾಡಿರುವ ಆಯನೂರು ಮಂಜುನಾಥ್ ನೈಋತ್ಯ ಪದವೀಧರ ಕ್ಷೇತ್ರಕ್ಕೂ, ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ ಶೈಕ್ಷಣಿಕ ಕ್ಷೇತ್ರದ ಬಗ್ಗೆ ಅಪಾರ ಅನುಭವ ಹೊಂದಿರುವ ಕೆ.ಕೆ.ಮಂಜುನಾಥ್ ಶಿಕ್ಷಕರ ಕ್ಷೇತ್ರಕ್ಕೂ ಸ್ಪರ್ಧೆ ಮಾಡಿದ್ದು, ಪಕ್ಷ ಅರ್ಹರಿಗೆ ಟಿಕೆಟ್ ನೀಡಿದೆ. ಪದವೀಧರರು ಮತ್ತು ಶಿಕ್ಷಕರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಿ ಗೆಲ್ಲಿಸುವುದರಿಂದ ಹೆಚ್ಚು ಅನುಕೂಲವಾಗಲಿದೆ ಎಂದರು.ಕಾಂಗ್ರೆಸ್ ಸರ್ಕಾರ ಎನ್.ಪಿ.ಎಸ್.ರದ್ಧತಿಗೆ ಈಗಾಗಲೇ ಸಮಿತಿ ರಚನೆ ಮಾಡಿದೆ. ಪದವೀಧರರ ಬೇಡಿಕೆಗೆ ಪೂರಕವಾಗಿ ಸ್ಪಂದಿಸುತ್ತಿದೆ. ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿಗಳಿಗೆ ಮತ ನೀಡಿರುವುದರಿಂದ ಕೊಟ್ಟ ಮತ ತನ್ನ ಮೌಲ್ಯ ಕಳೆದುಕೊಳ್ಳುತ್ತದೆ. ಆದ್ದರಿಂದ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಮನವಿ ಮಾಡಿದರು.

ಎಚ್‌ಡಿಕೆಯಲ್ಲಿ ಹತಾಶೆ ತುಂಬಿದೆ:

ಕುಮಾರಸ್ವಾಮಿ ಹತಾಶರಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಕೀಳಾಗಿ ಮಾತನಾಡುತ್ತಿದ್ದಾರೆ. ಬಿಜೆಪಿ ಜೊತೆ ಸೇರಿದ ಬಳಿಕ ತಮ್ಮ ಅಸ್ತಿತ್ವ ತೋರ್ಪಡಿಸಲು ಅವರೊಬ್ಬರೇ ಮಾತನಾಡುತ್ತಿದ್ದಾರೆ. ಒಂದು ಕಡೆ ಪ್ರಜ್ವಲ್ ತಮ್ಮ ಮಗ ಎನ್ನುವ ಕುಮಾರಸ್ವಾಮಿ, ಮತ್ತೊಂದು ಕಡೆ ತಮಗೂ ಪ್ರಜ್ವಲ್‌ಗೂ ಸಂಬಂಧವಿಲ್ಲ ಎಂದು ಹೇಳಿಕೆ ನೀಡುತ್ತಾರೆ. ಸದನದಲ್ಲಿ ಪೆನ್‌ಡ್ರೈ ವ್ ತಮ್ಮ ಬಳಿ ಇದೆ ಎಂದು ತೋರಿಸಿದ್ದು ಇವರೇ ಅಲ್ಲವೇ. ಒಬ್ಬ ಮಾಜಿ ಮುಖ್ಯಮಂತ್ರಿಯಾಗಿ ಮಕ್ಕಳಾಟ ಆಡುತ್ತಿರುವುದು ಎಷ್ಟು ಸರಿ. ಈಗ ಸಮರ್ಥವಾಗಿ ಕೆಲಸ ಮಾಡುತ್ತಿರುವ ಎಸ್ಐಟಿ ಮೇಲೆ ಒತ್ತಡ ಹೇರುವ ಪ್ರಯತ್ನ ಸಲ್ಲದು ಎಂದು ಆಕ್ಷೇಪಿಸಿದರು.

ಪಕ್ಷದ ಪ್ರಮುಖರಾದ ಕಲಸೆ ಚಂದ್ರಪ್ಪ, ಬಿ.ಆರ್.ಜಯಂತ್, ಸುರೇಶಬಾಬು, ಮಹಾಬಲ ಕೌತಿ, ಚೇತನರಾಜ್ ಕಣ್ಣೂರು, ಸೋಮಶೇಖರ ಲ್ಯಾವಿಗೆರೆ, ಅಶೋಕ ಬೇಳೂರು, ಎಚ್.ಎಂ.ರವಿಕುಮಾರ್, ಗಣಪತಿ ಮಂಡಗಳಲೆ, ಪ್ರಭಾವತಿ ಚಂದ್ರಕಾಂತ್, ಕೆ.ಹೊಳೆಯಪ್ಪ ಇನ್ನಿತರರು ಹಾಜರಿದ್ದರು.ಸರ್ಕಾರ ಬೀಳಿಸಲು ಸಾಧ್ಯವಿಲ್ಲ

ವಿಪಕ್ಷದಲ್ಲಿರುವ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೇರಿದ ದಾಖಲೆಯೇ ಇಲ್ಲ. ಅವರಿಂದಲೇ ಆಪರೇಷನ್ ಕಮಲ ಹುಟ್ಟಿದ್ದು. ರಾಜಕೀಯವನ್ನು ದುಡ್ಡಿನಿಂದ ಅಳೆಯುವ ಪರಿಪಾಠ ರೂಢಿಸಿದವರು. ಯಾರದ್ದೋ ದುಡ್ಡಿನಲ್ಲಿ ಗದ್ದುಗೆಗೇರಿ, ಅಧಿಕಾರ ಪಡೆಯುವುದು ಬಿಜೆಪಿಯವರಿಗೆ ಹೊಸದಲ್ಲ. ಅದಕ್ಕಾಗಿಯೇ ಜನರು ಅವರನ್ನು ಸೋಲಿಸಿ ಮೂಲೆಗುಂಪು ಮಾಡಿದ್ದಾರೆ. ೧೩೬ ಶಾಸಕರ ಬಲದ ಸುಭದ್ರ ಸರ್ಕಾರ ನಮ್ಮದು ಸರ್ಕಾರ ಬೀಳಿಸಲು ಸಾಧ್ಯವೇ ಇಲ್ಲ.

ಗೋಪಾಲಕೃಷ್ಣ ಬೇಳೂರು, ಶಾಸಕ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭಗವಂತನ ಶಕ್ತಿ ಪಡೆದವರಿಂದ ಡಿಕೆಶಿ ಸಿಎಂ ಆಗುವ ದಿನಾಂಕ ನಿಗದಿ : ಇಕ್ಬಾಲ್
ಜನ ನಂಗೆ ಇನ್ನೊಂದು ಅವಕಾಶ ಕೊಡಲಿ : ಎಚ್ಡಿಕೆ