ರಾಮನಗರ: ಬಿಜೆಪಿಯ ಗೊಂದಲಕ್ಕೂ, ಕಾಂಗ್ರೆಸ್ ಗೂ ಹೋಲಿಕೆ ಮಾಡಬೇಡಿ. ನಾವು ಪವರ್‌ನಲ್ಲಿದ್ದೇವೆ. ನಮ್ಮಲ್ಲಿ ಪವರ್ ಶೇರಿಂಗ್ ಮುಖ್ಯ ಅಲ್ಲ, ಜನಪರ ಆಡಳಿತ ನೀಡುವುದು ಮುಖ್ಯ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದರು.
ಕೆಪಿಸಿಸಿ ಅಧ್ಯಕ್ಷ ವಿಚಾರವನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡಲಿದೆ. ನಮ್ಮ ರಾಷ್ಟ್ರೀಯ ಅಧ್ಯಕ್ಷರು ಈ ಬಗ್ಗೆ ಯಾವುದೇ ಹೇಳಿಕೆ ನೀಡದಂತೆ ಸೂಚನೆ ನೀಡಿದ್ದಾರೆ. ಏನೇ ಸಮಸ್ಯೆ ಇದ್ದರೂ ಬಗೆಹರಿಸಿಕೊಂಡು ಒಟ್ಟಾಗಿ ಹೋಗುತ್ತೇವೆ. ಬಿಜೆಪಿಯ ಗೊಂದಲಕ್ಕೂ, ನಮಗೂ ಹೋಲಿಕೆ ಮಾಡಬೇಡಿ. ಈಗ ಬಿಜೆಪಿಯವರ ಪರಿಸ್ಥಿತಿ ನೋಡಿ ಯಾವ ಮಟ್ಟಕ್ಕೆ ಹೋಗಿದೆ. ಒಬ್ಬರನ್ನು ಕಂಡರೆ ಮತ್ತೊಬ್ಬರಿಗೆ ಆಗುತ್ತಿಲ್ಲ. ಎಲ್ಲರು ಹೊಡೆದಾಡಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಮುಡಾ ಕೇಸ್ ನಲ್ಲಿ ಮುಖ್ಯಮಂತ್ರಿ ಕುಟುಂಬಕ್ಕೆ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ ಸಚಿವರು, ತಪ್ಪು ಮಾಡಿದ್ದರೆ ತಾನೆ ತಪ್ಪು ಅಂತ ಹೇಳುವುದು ಎಂದು ಹೇಳಿದರು.ಈ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧವೂ ಷಡ್ಯಂತ್ರ ಮಾಡಿದರು. ಐಟಿ, ಇಡಿ ಅಧಿಕಾರಿಗಳನ್ನು ಬಿಜೆಪಿ ಪಕ್ಷ ಕೈಗೊಂಬೆಗಳನ್ನಾಗಿ ಮಾಡಿಕೊಂಡಿದೆ. ವಿರೋಧಿಗಳನ್ನು ಮುಗಿಸುವ ಹುನ್ನಾರ ಮಾಡುತ್ತಿದ್ದು, ಇದಕ್ಕೆಲ್ಲ ತಕ್ಕ ಉತ್ತರ ಕೊಟ್ಟು ಗಟ್ಟಿಯಾಗಿ ನಿಲ್ಲುತ್ತೇವೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಬಾಕ್ಸ್..............
ನಮ್ಮ ಮುಖ್ಯಮಂತ್ರಿಗಳು ಯಾವುದೇ ತಪ್ಪು ಮಾಡಿಲ್ಲ. ಮುಡಾ ವಿಚಾರದಲ್ಲಿ ನಾವು ಸ್ಪಷ್ಟವಾಗಿದ್ದೇವೆ. ಈಗಾಗಲೇ ಇಡಿ ತನಿಖೆ ಮಾಡುತ್ತಿದೆ. ಮೊನ್ನೆ 300 ಕೋಟಿ ಅಂತ ಹೇಳಿದರು. ಮುಖ್ಯಮಂತ್ರಿಗಳಿಗೂ ಅದಕ್ಕೂ ಸಂಬಂಧ ಇದೆಯಾ. ಎಲ್ಲದಕ್ಕೂ ಮುಖ್ಯಮಂತ್ರಿ ಹೆಸರು ತಳುಕು ಹಾಕುವುದು ಸರಿಯಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು. ಮುಖ್ಯಮಂತ್ರಿ ಸಿದ್ದರಾಮಯ್ಯರವರ ಹೆಸರನ್ನು ಹಾಳು ಮಾಡಲು ಷಡ್ಯಂತ್ರ ಮಾಡುತ್ತಿರುವ ಕೇಂದ್ರ ಬಿಜೆಪಿ, ತನಿಖಾ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದೆ. ಇದರಲ್ಲಿ ಸಿಎಂ ಹೆಸರು ಹೇಳಿ ಅಂತ ಮುಡಾ ಅಧಿಕಾರಿಗಳಿಗೆ ಧಮ್ಕಿ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಕೋಟ್ ...
-ದಿನೇಶ್ ಗುಂಡೂರಾವ್ , ಆರೋಗ್ಯ ಸಚಿವರು
ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರೊಂದಿಗೆ ಶಾಸಕ ಇಕ್ಬಾಲ್ ಹುಸೇನ್, ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಗಾಣಕಲ್ ನಟರಾಜ್ , ಬಿಡೆದಿ ಪುರಸಭೆ ಸದಸ್ಯ ಸಿ.ಉಮೇಶ್ ಮತ್ತಿತರರಿದ್ದರು.