ನೆಲಜಿ ಇಗ್ಗುತ್ತಪ್ಪ ದೇವಾಲಯದಲ್ಲಿ ವಾರ್ಷಿಕ ಕುಂಬ್ಯಾರು ಕಲಾಡ್ಚ ಹಬ್ಬ ಸಂಪನ್ನ

KannadaprabhaNewsNetwork |  
Published : Mar 04, 2026, 03:00 AM IST
ನೆಲಜಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಕುಂಬ್ಯಾರ್ ಕಲಾಡ್ಚ ಹಬ್ಬವನ್ನು ಸಾಂಪ್ರದಾಯಿಕವಾಗಿ ಶ್ರದ್ದಾಭಕ್ತಿಯಿಂದ ದೇವರಪ್ರದರ್ಶನ ನೃತ್ಯಬಲಿ ಜರುಗಿತು. 2.ಎನ್.ಪಿ.ಕೆ.—4.ನೆಲಜಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಕುಂಬ್ಯಾರ್ ಕಲಾಡ್ಚ ಉತ್ಸವದಲ್ಲಿ ಎತ್ತುಪೋರಾಟ.. | Kannada Prabha

ಸಾರಾಂಶ

ಸಮೀಪದ ನೆಲಜಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಕುಂಬ್ಯಾರು ಕಲಾಡ್ಚ ವಾರ್ಷಿಕೋತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ಕನ್ನಡಪ್ರಭ ವಾರ್ತೆ ನಾಪೋಕ್ಲು

ಸಮೀಪದ ನೆಲಜಿ ಶ್ರೀ ಇಗ್ಗುತ್ತಪ್ಪ ದೇವಾಲಯದಲ್ಲಿ ಕುಂಬ್ಯಾರು ಕಲಾಡ್ಚ ವಾರ್ಷಿಕೋತ್ಸವ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ಉತ್ಸವದ ಅಂಗವಾಗಿ ವಿಶೇಷ ಪೂಜೆಗಳು ನೆರವೇರಿದವು. ದೇವಾಲಯದಲ್ಲಿ 13 ತುಲಾಭಾರ ಸೇವೆ ಬಳಿಕ ಭಕ್ತರು ವಿವಿಧ ರೀತಿಯ ಹರಕೆ ರೂಪದಲ್ಲಿ ಕಾಫಿ,

ಕಾಳುಮೆಣಸು, ಎಣ್ಣೆ, ಮತ್ತಿತರ ಹರಕೆ ಸಲ್ಲಿಸಿದರು. ನಂತರ ದೇವಾಲಯದಲ್ಲಿ ಮಹಾಪೂಜೆ ಜರುಗಿತು. ಬಳಿಕ ಎತ್ತುಪೋರಾಟ. ಭಕ್ತರಿಗೆ ಪ್ರಸಾದ ವಿತರಣೆ ಅನ್ನಸಂತರ್ಪಣೆ. ಆನಂತರ ದೇವರ ಪ್ರದರ್ಶನ ನೃತ್ಯ ಬಲಿ ಜರುಗಿತು.

ತಂತ್ರಿ ಸಂತೋಷ ಹೆಬ್ಬಾರ್, ಅರ್ಚಕ ವಿಜಯಕುಮಾರ್ ಕಲ್ಲುರಾಯ ಮತ್ತು ರಾಜೇಶ್, ಜಯಚಂದ್ರ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಅನಂತರ ಇಗ್ಗುತ್ತಪ್ಪ ದೇವರ ಆದಿ ಸ್ಥಳವಾದ ಮಲ್ಮ ಬೆಟ್ಟಕ್ಕೆ ಎತ್ತುಪೋರಾಟದೊಂದಿಗೆ ತೆರಳಿ ವಿವಿಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಈ ಸಂದರ್ಭ ಉತ್ಸವದಲ್ಲಿ ತಕ್ಕ ಮುಖ್ಯಸ್ಥರಾದ ನಾಪನೆರವಂಡ ಪೊನ್ನಪ್ಪ, ಬಾಳೆಯಡ ರಾಜ ಕುಂಞಪ್ಪ, ಕೈಯಂದಿರ ರಮೇಶ್, ಆಡಳಿತ ಮಂಡಳಿ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ, ಕಾರ್ಯದರ್ಶಿ ಮುಕ್ಕಾಟಿರ ವಿನಯ್, ಖಜಾಂಚಿ ಮನವಟ್ಟಿರ ಪಾಪು ಚಂಗಪ್ಪ, ಆಡಳಿತ ಮಂಡಳಿ ಸದಸ್ಯರು, ಗ್ರಾಮಸ್ಥರು, ಊರಿನ, ಪರ ಊರಿನ ಭಕ್ತರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಾಜದ ಸ್ವಾಸ್ಥ್ಯ ಕಾಪಾಡಿದ ಮಠಗಳು
ಸರ್ಕಾರ, ಅಧಿಕಾರಿಗಳ ಧೋರಣೆಯಿಂದ ಕನ್ನಡ ಶಾಲೆ ಅವನತಿ: ಉಮಾನಾಥ ಕೋಟ್ಯಾನ್‌