ಸದೃಢ ಸಮಾಜದ ನಿರ್ಮಾಣ ಅಭಿಯಾನದ ಆಶಯ: ಡಾ. ಬಸವಲಿಂಗ ಪಟ್ಟದೇವರು

KannadaprabhaNewsNetwork |  
Published : Sep 05, 2025, 01:00 AM IST
ಗುರುವಾರ, ನಗರದ ನೇತಾಜಿ ಸುಭಾಶ್ಚಂದ್ರ ಭೋಸ್‌ ವೃತ್ತದಲ್ಲಿ ಬಸವಣ್ಣನವರ ಅನುಭವ ಮಂಟಪ ಮೆರವಣಿಗೆ ಹಾಗೂ ಸಾಮರಸ್ಯ ನಡಿಗೆ ಕಾರ್ಯಮದಲ್ಲಿ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು. | Kannada Prabha

ಸಾರಾಂಶ

ನಾಡಿನ ಜನರಲ್ಲಿ ಬಸವಾದಿ ಶರಣರ ಚಿಂತನೆಗಳನ್ನು ಬಿತ್ತುವ ಜೊತೆಗೆ, ಸಧೃಡ ಸಮಾಜದ ನಿರ್ಮಾಣ ಮಹತ್ವದ ಆಶಯದೊಂದಿಗೆ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರು ಹಾಗೂ ಭಾಲ್ಕಿಯ ನಾಡೋಜ ಡಾ. ಬಸವಲಿಂಗ ಪಟ್ಟದೇವರು ನುಡಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

ನಾಡಿನ ಜನರಲ್ಲಿ ಬಸವಾದಿ ಶರಣರ ಚಿಂತನೆಗಳನ್ನು ಬಿತ್ತುವ ಜೊತೆಗೆ, ಸಧೃಡ ಸಮಾಜದ ನಿರ್ಮಾಣ ಮಹತ್ವದ ಆಶಯದೊಂದಿಗೆ ಬಸವ ಸಂಸ್ಕೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಲಿಂಗಾಯತ ಮಠಾಧಿಪತಿಗಳ ಒಕ್ಕೂಟದ ಅಧ್ಯಕ್ಷರು ಹಾಗೂ ಭಾಲ್ಕಿಯ ನಾಡೋಜ ಡಾ. ಬಸವಲಿಂಗ ಪಟ್ಟದೇವರು ನುಡಿದರು.

ಗುರುವಾರ, ನಗರದ ನೇತಾಜಿ ಸುಭಾಶ್ಚಂದ್ರ ಭೋಸ್‌ ವೃತ್ತದಲ್ಲಿ ಬಸವಣ್ಣನವರ ಅನುಭವ ಮಂಟಪ ಮೆರವಣಿಗೆ ಹಾಗೂ ಸಾಮರಸ್ಯ ನಡಿಗೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಅವರು, ಬಸವಣ್ಣನವರ ಆಶಯದಂತೆ ಸಮಸಮಾಜ ನಿರ್ಮಾಣದ ಗುರಿ, ವ್ಯಸನಮುಕ್ತ ಸಮಾಜದ ನಿರ್ಮಾಣ, ಅಂಧಶ್ರದ್ಧೆ ಅಳಿಸಿ ಸುಜ್ಞಾನ ಬೆಳೆಸುವುದು, ಮಕ್ಕಳಲ್ಲಿ ಆಧ್ಯಾತ್ಮದ ಅರಿವು ಮೂಡಿಸುವುದು, ಮಹಿಳೆಯರ ಘನತೆ ಕಾಪಾಡುವುದು, ವ್ಯಕ್ತಿತ್ವ ವಿಕಸನ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವುದಾಗಿದೆ ಎಂದು ತಿಳಿಸಿದರು.

ಮೆರವಣಿಗೆಯಲ್ಲಿ ಬೈಲೂರಿನ ನಿಜಗುಣಾನಂದ ಮಹಾಸ್ವಾಮೀಜಿ, ಸಾಣೇಹಳ್ಳಿಯ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ, ಗುರುಮಠಕಲ್ ಖಾಸಾ ಮಠದ ಶಾಂತವೀರ ಮಹಾಸ್ವಾಮೀಜಿ, ಶಿವಾನಂದ ಮಹಾಸ್ವಾಮೀಜಿ ಹುಣಸಗಿ, ಕೋಡಾಲದ ಪಂಚಮ ಸಿದ್ದಲಿಂಗ ಸ್ವಾಮೀಜಿ, ನಾಗನೂರಿನ ಅಲ್ಲಮಪ್ರಭು ಮಹಾಸ್ವಾಮೀಜಿ, ಅಥಣಿಯ ಪ್ರಭುಚನ್ನಬಸವ ಮಹಾಸ್ವಾಮೀಜಿ, ಉರಿಲಿಂಗ ಪೆದ್ದೀಶ್ವರ ಮಠದ ಜ್ಞಾನಪ್ರಕಾಶ ಸ್ವಾಮಿಜಿ, ಕೊಡೆಕಲ್‌ನ ಶಿವುಕುಮಾರ ಸ್ವಾಮಿಜಿ, ಚಿಗರಳ್ಳಿಯ ಕಬೀರಾನಂದ ಸ್ವಾಮೀಜಿ, ಸಹಮತ ವೇದಿಕೆ ಜಿಲ್ಲಾಧ್ಯಕ್ಷ ಡಾ. ಭೀಮಣ್ಣ ಮೇಟಿ, ಗುಂಡಪ್ಪ ಕಲಬುರಗಿ, ಜಿಲ್ಲಾ ವೀರಶೈವ ಸಮಾಜದ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೋಸಂಬಿ, ಶ್ರೀನಿವಾಸರಡ್ಡಿ ಪಾಟೀಲ್ ಚನ್ನೂರ, ಬಸ್ಸುಗೌಡ ಬಿಳ್ಹಾರ, ನಾಗರತ್ನ ಕುಪ್ಪಿ, ಮಂಜುಳಾ ಗೂಳಿ, ಭಾಗ್ಯವಂತಿ ಕೆಂಭವಿ, ಶರಣು ದಂಡೀನ್, ಹಣಮೇಗೌಡ ಮರಕಲ್, ಸುದರ್ಶನ್ ನಾಯಕ್, ಅಡಿವೆಪ್ಪ ಜಾಕಾ, ನರಸರಡ್ಡಿ ಪಾಟೀಲ್ ಗಡ್ಡೆ ಸುಗೂರ, ರಂಗನಾಥರಡ್ಡಿ ಪಾಟೀಲ್ ನಜರಾಪೂರ, ಸುಗುರೇಶ ವಾರದ ಸುರಪುರ, ಶಿವರಾಜ ಕಲ್ಕೇರಿ, ಪ್ರಕಾಶ ಅಂಗಡಿ, ಬಾಶುಮಿಯಾ ನಾಯ್ಕೋಡಿ ವಡಗೇರಾ, ಮರೆಪ್ಪ ಚಟ್ರೇಕರ್, ಸಮದಾನಿ ಮೂಸಾ, ವಾಹೀದ್ ಮಿಯಾ, ಸೇರಿದಂತೆ ಸರ್ವ ಧರ್ಮಗಳ ಮುಖಂಡರು ಭಾಗವಹಿಸಿದ್ದರು.

PREV

Recommended Stories

ಬಿಆರ್‌ಎಲ್ ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಚಿರಕಾಲ ಉಳಿಯುವ ಆಪ್ತಭಾವದ ಕವಿ
ದಸರಾ ವೇಳೆ ಬಾನುರಿಂದ 2023ರ ಘಟನೆ ಮರುಕಳಿಸಬಾರ್ದು : ಯದುವೀರ್‌