ತೋಟದ ಮನೆಗೆ ನುಗ್ಗಿ ವೃದ್ಧನಿಗೆ ಇರಿದ ದುಷ್ಕರ್ಮಿಗಳು

KannadaprabhaNewsNetwork |  
Published : Dec 24, 2023, 01:45 AM IST
 ಚಾಕುವಿನಿಂದ ಹಲ್ಲೆ  | Kannada Prabha

ಸಾರಾಂಶ

ತಾಲೂಕಿನ ಕುಂಕುವ ಗ್ರಾಮದಲ್ಲಿ ಶುಕ್ರವಾರ ತಡ ರಾತ್ರಿ 11.30ರ ಸಮಯದಲ್ಲಿ ಗ್ರಾಮದ ಹೊರ ಹೊಲಯದಲ್ಲಿ ವಾಸ ಮಾಡುತ್ತಿದ್ದ ವೃದ್ಧ ದಂಪತಿ ಮೇಲೆ ಅಪರಿಚಿತ ವ್ಯಕ್ತಿಗಳು ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.

ಕುಂಕುವ ಗ್ರಾಮದಲ್ಲಿ ತಡರಾತ್ರಿ ನಡೆದ ಘಟನೆ । ಗಾಯಾಳು ಶಿ‍ವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲು

ಕನ್ನಡಪ್ರಭ ವಾರ್ತೆ ನ್ಯಾಮತಿ

ತಾಲೂಕಿನ ಕುಂಕುವ ಗ್ರಾಮದಲ್ಲಿ ಶುಕ್ರವಾರ ತಡ ರಾತ್ರಿ 11.30ರ ಸಮಯದಲ್ಲಿ ಗ್ರಾಮದ ಹೊರ ಹೊಲಯದಲ್ಲಿ ವಾಸ ಮಾಡುತ್ತಿದ್ದ ವೃದ್ಧ ದಂಪತಿ ಮೇಲೆ ಅಪರಿಚಿತ ವ್ಯಕ್ತಿಗಳು ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.

ಪಾಡುರಂಗಯ್ಯ ಮತ್ತು ಪತ್ನಿ ಲಕ್ಮಮ್ಮ ಗ್ರಾಮದ ಹೊರ ಹೊಲಯದಲ್ಲಿರುವ ತೋಟದ ಮನೆಯಲ್ಲಿ ವಾಸವಾಗಿದ್ದು ಶುಕ್ರವಾರ ತಡ ರಾತ್ರಿಯಲ್ಲಿ ಅಪರಿಚಿತ ವ್ಯಕ್ತಿಗಳು ಬೈಕ್‌ನಲ್ಲಿ ಬಿದ್ದಿದ್ದು ಗಾಯವಾಗಿದೆ. ಕುಡಿಯಲು ನೀರು ಕೊಡಿ ಎಂದು ಬಾಗಿಲು ತಟ್ಟಿದ್ದಾರೆ. ಲಕ್ಮಮ್ಮ ರಾತ್ರಿ ಹೊತ್ತಿನಲ್ಲಿ ಬಾಗಿಲು ತೆರೆಯುವುದು ಬೇಡ ಎಂದರೂ ಪಾಂಡುರಂಗಯ್ಯ ಬಾಗಿಲು ತೆಗೆದು ಕುಡಿಯಲು ನೀರು ಕೊಟ್ಟಿದ್ದಾರೆವ್ಯಕ್ತಿ ಮತ್ತೆ ಬಂದು ಸ್ವಲ್ಪ ಅರಿಷಿಣ ಪುಡಿ ಪಡೆದು ನಂತರ ಬಂದು ಸಕ್ಕರೆ ಕೊಡಿ ಎಂದು ಕೇಳಿದ್ದಾರೆ. ಸಕ್ಕರೆ ಇಲ್ಲವೆಂದು ಹೇಳಿದ ಮೇಲೆ ಪಾಂಡುರಂಗಯ್ಯನನ್ನು ಕೆಳಕ್ಕೆ ಬೀಳಿಸಿ ಚಾಕುವಿನಿಂದ ಕುತ್ತಿಗೆಗೆ ತಿವಿಯುತ್ತಿದ್ದಂತೆ ಕಿರಿಚಿದ್ದಾರೆ. ತಕ್ಷಣ ಲಕ್ಷ್ಮಮ್ಮ ಬಂದು ನೋಡಿದಾಗ ಇಬ್ಬರು ಪಾಂಡುರಂಗಯ್ಯನವರ ಕಾಲು ಅದುಮಿಕೊಂಡು ಕುತ್ತಿಗೆಗೆ ಚಾಕುವಿನಿಂದ ಇರಿಯುತ್ತಿದ್ದ ದೃಶ್ಯ ಕಂಡು ಚೀರಾಡಿದ್ದಾರೆ. ಅಪರಿಚಿತ ವ್ಯಕ್ತಿಗಳು ಓಡಿಹೋಗಿದ್ದಾರೆ.ಲಕ್ಷ್ಮಮ್ಮ ಗ್ರಾಮದ ಹಾಲೇಶಪ್ಪ, ಮಲ್ಲಿಕಪ್ಪನವರಿಗೆ ದೂರವಾಣಿಯಲ್ಲಿ ವಿಷಯ ತಿಳಿಸಿ ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಕರೆದೊಯ್ದಿದ್ದಾರೆ. ಘಟನೆ ಸಂಭವಿಸುವ ಮುನ್ನ ಸಾಕಿದ ನಾಯಿಯು ಪತ್ತೆಯಿಲ್ಲದಾಗಿದೆ. ನ್ಯಾಮತಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ದಂಪತಿಗಳಿಗೆ ಇಬ್ಬರು ಪುತ್ರರಿದ್ದು ಓರ್ವ ಮಗಳನ್ನು ಮದುವೆ ಮಾಡಿಕೊಡಲಾಗಿದೆ. ಓರ್ವ ಪುತ್ರ ಧ್ವಾರಕನಾಥ ಭದ್ರಾವತಿಯಲ್ಲಿ ಪೂರೋಹಿತ ಕೆಲಸ ಮಾಡಿಕೊಂಡಿದ್ದು ಇನ್ನೊಬ್ಬ ಚಲುವರಾಜ ಶಿವಮೊಗ್ಗದಲ್ಲಿ ಬಾಳೆ ಕಾಯಿ ಮಂಡಿ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡಿದ್ದಾರೆ. 5ಎಕರೆ ಅಡಕೆ ತೋಟವಿದ್ದು ಈ ವಿಚಾರವಾಗಿ ಪಕ್ಕದ ಜಮೀನಿನವರು ಆಗ್ಗಾಗೆ ಜಗಳವಾಗುತ್ತಿದ್ದು ಈ ವಿಚಾರವಾಗಿ ದಾವಣಗೆರೆ ಸಿವಲ್‌ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉಚಿತ ವಿದ್ಯುತ್‌, ₹2000ಕ್ಕೆ ಹೊಸ ಅರ್ಜಿ ಸಲ್ಲಿಕೆ ಕಡ್ಡಾಯ?
ಕರ್ನಾಟಕ ವಿದ್ಯುತ್‌ ವಿತರಣೆ ಖಾಸಗಿಗೆ?