ಗಮನ ಸೆಳೆದ ಸ್ವಾತಂತ್ರ್ಯೋತ್ಸವ ಪಥ ಸಂಚಲನ

KannadaprabhaNewsNetwork |  
Published : Aug 16, 2025, 12:00 AM IST
ರಾಜ್ಯದ ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ.ಪಾಟೀಲ ಅವರು ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ವಿವಿಧ ದಳಗಳ ವೀಕ್ಷಣೆ ಮಾಡಿದರು. | Kannada Prabha

ಸಾರಾಂಶ

ಗದಗ ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ನಡೆದ ವಿವಿಧ ದಳಗಳ ಪಥ ಸಂಚಲನ ಗಮನ ಸೆಳೆಯಿತು.

ಗದಗ: ನಗರದ ಕೆ.ಎಚ್. ಪಾಟೀಲ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ 79ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ನಡೆದ ವಿವಿಧ ದಳಗಳ ಪಥ ಸಂಚಲನ ಗಮನ ಸೆಳೆಯಿತು.

ರಾಜ್ಯದ ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಅವರು ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಸಾರ್ವಜನಿಕ ಧ್ವಜಾರೋಹಣ ನೆರವೇರಿಸಿ ವಿವಿಧ ದಳಗಳ ವೀಕ್ಷಣೆ ಮಾಡಿದರು.ಈ ವೇಳೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರನ್ನು ಗುರುತಿಸಿ ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.ಜಿಲ್ಲಾ ಪೊಲೀಸ್‌ ಅಧೀಕ್ಷಕ ರೋಹನ ಜಗದೀಶ್ ಹಾಗೂ ಡಿಎಸ್‌ಪಿ ವಿದ್ಯಾನಂದ ವಿ.ನಾಯಕ ಅವರ ಮಾರ್ಗದರ್ಶನದಲ್ಲಿ ಜರುಗಿದ ಆಕರ್ಷಕ ಪಥಸಂಚಲನದ ನೇತೃತ್ವವನ್ನು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪರೇಡ ಕಮಾಂಡರ್ ಶಂಕರಗೌಡ ಚೌದ್ರಿ ವಹಿಸಿದ್ದರು.

ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಪಡೆಯ ನೇತೃತ್ವವನ್ನು ವಿಜಯಕುಮಾರ ಜಿ. ವಹಿಸಿದ್ದರು. ನಾಗರಿಕ ಪೊಲೀಸ್‌ ಪಡೆಯ ನೇತೃತ್ವವನ್ನು ಚಾಂದಭಾಷಾ, ಆರ್.ಎಸ್.ಐ, ಡಿಎಆರ್, ಗೃಹ ರಕ್ಷಕ ದಳದ ನೇತೃತ್ವವನ್ನು ಎಂ.ಎನ್. ವಸ್ತ್ರದ, ಅಗ್ನಿಶಾಮಕ ಪಡೆಯ ನೇತೃತ್ವವನ್ನು ಬಂಗಾರಪ್ಪ ವೈ.ಟಿ., ಅಬಕಾರಿ ದಳದ ನೇತೃತ್ವವನ್ನು ವಿಜಯಲಕ್ಷ್ಮೀ ಗಣತಿ, ಅರಣ್ಯ ರಕ್ಷಕ ಪಡೆಯ ನೇತೃತ್ವವನ್ನು ಡೆಪ್ಯೂಟಿ ಆರ್.ಎಫ್.ಒ ಸಚಿನ ಬಿಸನಳ್ಳಿ, ಎನ್.ಸಿ.ಸಿ ಸೀನಿಯರ್ಸ್ ಬಾಯ್ಸ್ ದಳದ ನೇತೃತ್ವವನ್ನು ಜ್ಞಾನೇಶ ಗಾಯಕವಾಡ, ಎನ್.ಸಿ.ಸಿ. ಸೀನಿಯರ್ಸ್‌ ಗರ್ಲ್ಸ ನೇತೃತ್ವವನ್ನು ಕವಿತಾ ಬಾಕಳೆ, ಸೇವಾದಳದ ನೇತೃತ್ವವನ್ನು ಸರ್ಕಾರಿ ಹೆಣ್ಣುಮಕ್ಕಳ ಪ್ರೌಢಶಾಲೆಯ ಆಯುಷಾ ಸರ್ಕವಾಸ, ಕ್ರೀಡಾ ತಂಡದ ನೇತೃತ್ವವನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಂದೀಪ ನವಲೆಕರ, ಸ್ಕೌಟ್ಸ್ ದ ನೇತೃತ್ವವನ್ನು ಸಿ.ಡಿ.ಓ ಜೈನ್ ಪ್ರಾಥಮಿಕ ಶಾಲೆಯ ಅಭಿಷೇಕ ತೊಂಡಿಹಾಳ, ಸಾಮಾನ್ಯ ವಿಭಾಗದ ನೇತೃತ್ವವನ್ನು ಸೇಂಟ ಜಾನ್ ಪ್ರೌಢಶಾಲೆಯ ಸೋಮಶೇಖರ್, ಸ್ಕೌಟ್ಸ್ ವಿಭಾಗದ ನೇತೃತ್ವವನ್ನು ಕೆ.ಎಲ್.ಇ. ಸಿ.ಬಿ.ಎಸ್.ಇ ಬಾಲಕರ ಶಾಲೆಯ ಸಾಯಿಸಮರ್ಥ ಬಡಿಗೇರ, ಗೈಡ್ಸ್ ವಿಭಾಗದ ನೇತೃತ್ವವನ್ನು ಕೆ.ಎಲ್.ಇ ಸಿಬಿಎಸ್‌ಇ ಬಾಲಕಿಯರ ಶಾಲೆಯ ಸಾನ್ವಿ ಚನ್ನಪ್ಪಗೌಡ್ರ , ಸಾಮಾನ್ಯ ವಿಭಾಗದ ನೇತೃತ್ವವನ್ನು ಕೆ.ವಿ.ಎಸ್.ಆರ್. ಪ್ರೌಢಶಾಲೆಯ ಜಾಸ್ಮೀನ್ ಹುಸೇನಬಾಯಿ, ಸೇಂಟ ಜಾನ್ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯ ಪವನಕುಮಾರ್, ಬಾಸೆಲ್ ಮಿಶನ ಬಾಲಕರ ಪ್ರೌಢಶಾಲೆಯ ಉಲ್ಲಾಸ ಹೊನ್ನಾಳಿ, ವಿ.ಡಿ.ಎಸ್.ಟಿ.ಸಿ ಬಾಲಕಿಯರ ಪ್ರೌಢಶಾಲೆಯ ಸಹನಾ ಸಂಗಮದ ವಹಿಸಿದ್ದರು.

ಈ ವೇಳೆ ವಿಪ ಶಾಸಕ ಎಸ್.ವಿ. ಸಂಕನೂರ, ನಗರಾದ್ಧಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕಬರಸಾಬ ಬಬರ್ಜಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಬಿ.ಬಿ. ಅಸೂಟಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಜಿಪಂ ಸಿಇಒ ಭರತ್.ಎಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ ಕೆಂಚಪ್ಪನವರ, ಅಪರ ಜಿಲ್ಲಾಧಿಕಾರಿ ಡಾ. ದುರಗೇಶ್ ಕೆ.ಆರ್., ಉಪವಿಭಾಗಾಧಿಕಾರಿ ಗಂಗಪ್ಪ.ಎಂ. ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಜನಪ್ರತಿನಿಧಿಗಳು, ಗಣ್ಯರು, ಸಾರ್ವಜನಿಕರು ಹಾಗೂ ಶಾಲಾ ವಿದ್ಯಾರ್ಥಿಗಳು ಇದ್ದರು.

PREV

Recommended Stories

ನಾಳೆ ಕರಾವಳಿ, ಮಲೆನಾಡು ಜಿಲ್ಲೆಗಳಿಗೆ ರೆಡ್‌ ಅಲರ್ಟ್‌
ಮೈಸೂರು ದಸರಾ ಆನೆಗಳಿಗೆ 630 ಟನ್‌ ಆಹಾರ!