ಅಯೋಧ್ಯೆಯಲ್ಲಿ ಅನುರಣಿಸಿದ ಬೆಳ್ಕಳೆ ಚೆಂಡೆ ಬಳಗದ ಚೆಂಡೆ ವಾದನ

KannadaprabhaNewsNetwork | Published : Mar 1, 2024 2:16 AM

ಸಾರಾಂಶ

ಅಯೋಧ್ಯೆಯಲ್ಲಿ ಮಂಡಲೋತ್ಸವ ಮತ್ತು ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಚೆಂಡೆವಾದನ ಸೇವೆ ನಡೆಯಿತು.

ಕನ್ನಡಪ್ರಭ ವಾರ್ತೆ ಉಡುಪಿ

ಅಯೋಧ್ಯೆಯಲ್ಲಿ ಫೆ. 24 ಮತ್ತು 25ರಂದು ನಡೆದ ಮಂಡಲೋತ್ಸವ ಮತ್ತು ಪಲ್ಲಕ್ಕಿ ಉತ್ಸವದ ಸಂದರ್ಭದಲ್ಲಿ ಇಲ್ಲಿನ ಬೆಳ್ಕಳೆಯ ಶ್ರೀ ಮಹಾಲಿಂಗೇಶ್ವರ ಚೆಂಡೆ ಬಳಗ ಇವರಿಂದ ಚೆಂಡೆವಾದನ ಸೇವೆ ನಡೆಯಿತು.ಬಾಲಶ್ರೀರಾಮನ ಪ್ರತಿಷ್ಠಾ ದಿನದಿಂದ ಮೊದಲ್ಗೊಂಡು ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥರ ನೇತೃತ್ವದಲ್ಲಿ ಅಖಂಡ 48 ದಿನಗಳ ಕಾಲ ಮಂಡಲ ಪೂಜೆ ಮತ್ತು ಪಲ್ಲಕ್ಕಿ ಉತ್ಸವ ನಡೆಯುತ್ತಿದೆ. ಪ್ರತಿದಿನ ಬೇರೆಬೇರೆ ತಂಡಗಳಿಂದ ಚಂಡೆಸೇವೆಯನ್ನೂ ನಡೆಸಲಾಗುತ್ತಿದೆ.ಬೆಳ್ಕಳೆ ಬಳಗದ ಉಮೇಶ್ ಬಾಧ್ಯ, ಶ್ರೀಹರ್ಷ ಬೆಳ್ಕಳೆ, ರವಿ ಸಾಮಗ, ಸುನಿಲ್ ಭಟ್, ಶ್ರೀನಿಧಿ ಹಂದೆ, ಶ್ರೀನಾಥ್, ರಾಘವೇಂದ್ರ, ವಿಕ್ರಮ್ ಭಟ್, ನವೀನ್ ಬಾಧ್ಯ, ಅಭಿಲಾಷ್, ಪ್ರಸಾದ್, ಪನ್ನಗ ಸಾಮಗ, ಅಭಿಷ್ಟ ಹೆಬ್ಬಾರ್ ಅವರು ಈ ಚೆಂಡೆವಾದನ ಸೇವೆಯಲ್ಲಿ ಪಾಲ್ಗೊಂಡರು.2006 ರಲ್ಲಿ ಆರಂಭವಾದ ಬೆಳ್ಕಳೆ ಚೆಂಡೆ ಬಳಗವು ಉಡುಪಿ, ಮಂತ್ರಾಲಯ, ತಿರುಪತಿ ಹಾಗೂ ರಾಜ್ಯ ಮತ್ತು ಹೊರ ರಾಜ್ಯದ ಅನೇಕ ಧಾರ್ಮಿಕ ಕ್ಷೇತ್ರಗಳಲ್ಲಿ ಚೆಂಡೆ ವಾದನ ಕಾರ್ಯಕ್ರಮ ನೀಡಿದೆ. ಇದೀಗ ಜಗತ್ತಿನಾದ್ಯಂತ ಇರುವ ಕೋಟ್ಯಂತರ ಹಿಂದುಗಳ ಸ್ವಾಭಿಮಾನದ ಪ್ರತೀಕವಾಗಿ ತಲೆ ಎತ್ತಿ ನಿಂತಿರುವ ಭವ್ಯ ಶ್ರೀ ರಾಮ ಮಂದಿರದಲ್ಲಿ ಚೆಂಡೆ ವಾದನ ಸೇವೆ ನೀಡುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದೆ.ರಘುಪತಿ ಭಟ್ಟರ ಸೇವೆ: ಶನಿವಾರ ಮಾಜಿ ಶಾಸಕ ಕೆ.ರಘುಪತಿ ಭಟ್ಟರು ಜನ್ಮದಿನದಂದು ರಾಮಮಂದಿರದಲ್ಲಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆದ ಮಂಡಲೋತ್ಸವದಲ್ಲಿ ಭಾಗಿಯಾದರು. ಅಂದು ಸಂಜೆ ನಡೆದ ರಾಮೋತ್ಸವದ ತೊಟ್ಟಿಲು ಉತ್ಸವದಲ್ಲಿ ಪಾಲ್ಗೊಂಡ ಅವರಿಗೆ ಪೇಜಾವರ ಶ್ರೀ ಪಾದರು ಶ್ರೀ ದೇವರ ವಿಶೇಷ ಪ್ರಸಾದವನ್ನು ನೀಡಿ ಆಶೀರ್ವದಿಸಿದರು.

Share this article