ಬ್ಯಾಡಗಿ: ಶುಕ್ರವಾರ ಮಧ್ಯಾಹ್ನ ವರುಣನ ಆರ್ಭಟಕ್ಕೆ ಪಟ್ಟಣ ಅಕ್ಷರಶಃ ನಲುಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿತ್ತು. ಅದರಲ್ಲೂ ಪಟ್ಟಣದ ಮುಖ್ಯರಸ್ತೆ ಅಗಲೀಕರಣಕ್ಕೆ ಸಹಕರಿಸದೇ ಇರುವ ವರ್ತಕರ ಗೋಳಂತೂ ಹೇಳತೀರದಾಗಿತ್ತು.ಕಳೆದೆಂಟು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು, ರೈತರು ಸೇರಿದಂತೆ ಜನರನ್ನು ಒಂದೆಡೆ ಖುಷಿಗೊಳಿಸುತ್ತಿದೆ. ಇನ್ನೊಂದೆಡೆ ಮಳೆ ಸೃಷ್ಟಿಸುತ್ತಿರುವ ಅವಾಂತರಗಳು ಸಾರ್ವಜನಿಕರ ನಿದ್ದೆಗೆಡೆಸಿದೆ. ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಆರಂಭವಾದ ಮಳೆ ಸುಮಾರು ಒಂದೂವರೆ ತಾಸು ಗುಡುಗು ಮಿಂಚುಗಳ ಆರ್ಭಟದೊಂದಿಗೆ ಧೋ ಧೋ ಎಂದು ಒಂದೇ ಸಮನೆ ಸುರಿಯಿತು. ಕೆರೆಯೋ? ಮುಖ್ಯರಸ್ತೆಯೋ?: ನಿರಂತರ ಸುರಿದ ಮಳೆಗೆ ಪಟ್ಟಣದ ಮುಖ್ಯರಸ್ತೆಯಲ್ಲಂತೂ ತಗ್ಗುಗುಂಡಿಗಳು ಬಿದ್ದಿದ್ದು, ಮಳೆ ನೀರು ಸಂಗ್ರಹಗೊಂಡು ಕೆರೆಯಂತಾಗಿದೆ. ಎಲ್ಲಿಯೂ ಚರಂಡಿ ಇಲ್ಲದ ಕಾರಣ ರಸ್ತೆಯಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊಂಡು, ರಸ್ತೆ ಇಕ್ಕೆಲದಲ್ಲಿ ಮುಂದೆ ಹರಿದು ಹೋಗದೆ ರಸ್ತೆಯಲ್ಲಿಯೇ ನಿಂತಿದ್ದು, ವಾಹನ ಸವಾರರ ಪಾಲಿಗೆ ಕಂಟಕಪ್ರಾಯವಾಗಿ ಪರಿಣಮಿಸಿತು.ರಸ್ತೆಗಳಲ್ಲಿ ಹರಿದ ನೀರು: ಚರಂಡಿಗಳು ಸ್ವಚ್ಛಗೊಳ್ಳದ ಕಾರಣ ಪಟ್ಟಣದ ಬಹುತೇಕ ಕಡೆ ಮಳೆ ನೀರು ರಸ್ತೆಯ ಮೇಲೆ ಹರಿಯತ್ತಿದ್ದ ದೃಶ್ಯಗಳು ಕಂಡುಬಂದವು. ಅದರಲ್ಲೂ ಹಳೇ ಪೊಲೀಸ್ ಠಾಣೆ ಎದುರಿಗೆ ಮಳೆನೀರು ನದಿಯಂತೆ ಹರಿಯು ತ್ತಿದ್ದ ದೃಶ್ಯ ಕಂಡುಬಂದಿತು. ಮಳೆನಿಂತ ಮೇಲೂ ಈ ಸ್ಥಳದಲ್ಲಿ ವಾಹನ ಸವಾರರು ರಸ್ತೆಗಿಳಿಯಲು ಹೆದರಿ ನೀರಿನ ಒತ್ತಡ ತಗ್ಗುವವರೆಗೂ ಕಾದು ಬಳಿಕ ಹೊರಟರು.ನೀರಿನಿಂದ ತುಂಬಿದ ಕ್ರೀಡಾಂಗಣ: ಪಟ್ಟಣದ ರಟ್ಟೀಹಳ್ಳಿ ರಸ್ತೆಯಲ್ಲಿರುವ ತಾಲೂಕು ಕ್ರೀಡಾಂಗಣವು ನೀರಿನಿಂದ ತುಂಬಿ ಸಮುದ್ರದಂತೆ ಕಾಣುತ್ತಿತ್ತು. ಕ್ರೀಡಾಂಗಣದ ಮೇಲ್ಭಾಗದಲ್ಲಿ ರಸ್ತೆಯಿದ್ದು, ಅದಕ್ಕೆ ಹೊಂದಿಕೊಂಡಿರುವ ಚರಂಡಿಗಳು ಬ್ಲಾಕ್ ಆಗಿದ್ದರಿಂದ ಮಳೆನೀರು ಕ್ರೀಡಾಂಗಣಕ್ಕೆ ತಿರುಗಿದೆ ಎನ್ನಲಾಗುತ್ತಿದೆ.
ಕಾರ‍್ಯಕ್ರಮಕ್ಕೆ ಅಡ್ಡಿಶುಕ್ರವಾರ ಬೀರೇಶ್ವರ ದೇವಸ್ಥಾನ(ಹೊರಗುಡಿ) ಉದ್ಘಾಟನಾ ಕಾರ್ಯಕ್ರಮವಿತ್ತು. ಮಧ್ಯಾಹ್ನ ಸುರಿದ ಮಳೆಗೆ ಅತಿಥಿಗಳು ಸೇರಿದಂತೆ ಜನರು ಸಿಲುಕಿದರು. ನಿರಂಜನಾನಂದ ಶ್ರೀಗಳು ಆಶೀರ್ವಚನ ಮುಗಿಸಿ ವೇದಿಕೆಯಿಂದ ನಿರ್ಗಮಿಸುವಷ್ಟರಲ್ಲಿ ಮಳೆ ಆರಂಭವಾಯಿತು. ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರಿಂದ ಭೋಜನ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ನೆಮ್ಮದಿಯಿಂದ ಊಟವನ್ನು ಸಹ ಮಾಡಲು ಮಳೆ ಅವಕಾಶ ನೀಡಲಿಲ್ಲ. ಈ ಕುರಿತು ಮಾತನಾಡಿದ ಆಯೋಜಕ ಮಹೇಶ ಉಜನಿ ಬೀರೇಶ್ವರ ಅವರು ದೇವರೇ ಮಳೆ ಸುರಿಸುವ ಮೂಲಕ ಶುಭ ಸೂಚನೆ ನೀಡಿದ್ದಾನೆ ಎಂದರು.
ವರ್ತಕರಿಗೆ ಹಿಡಿಶಾಪಪಟ್ಟಣದ ಮುಖ್ಯರಸ್ತೆ ಅಭಿವೃದ್ಧಿ ಕಾಣದೇ ಕಿಷ್ಕಿಂದೆಯಂತಾಗಿದೆ. ರಸ್ತೆ ಅಕ್ಕಪಕ್ಕದಲ್ಲಿರುವ ವರ್ತಕರು ಸ್ವಪತ್ರಿಷ್ಠೆಯನ್ನು ಬಿಟ್ಟು ಅಗಲೀಕರಣ ಸಹಕರಿಸಬೇಕು. ಅಂದಾಗ ಮಾತ್ರ ಮಳೆ ನೀರಿನಿಂದ ಆಗುವ ಅನಾಹುತಗಳನ್ನು ತಪ್ಪಿಸಲು ಸಾಧ್ಯ. ದ್ವಿಚಕ್ತ ವಾಹನಗಳ ಸವಾರರು ಸಂಚರಿಸಲು ಸಾಧ್ಯವಾಗದೇ ವರ್ತಕರಿಗೆ ಹಿಡಿಶಾಪ ಹಾಕುತ್ತಿದ್ದ ದೃಶ್ಯಗಳು ಕಂಡುಬಂದವು.
ಸಾರ್ವಜನಿಕರಿಗೆ ಸೂಚನೆ: ಮಳೆಗೆ ಯಾವುದೇ ಜೀವ ಹಾನಿಯಾದ ಕುರಿತು ಮಾಹಿತಿ ಲಭ್ಯ ವಾಗಿಲ್ಲ. ಉಳಿದಂತೆ ಶಿಥಿಲವಾಸ್ಥೆಯಲ್ಲಿರುವ ಗೋಡೆ ಅಥವಾ ಮಾಳಿಗೆ ಮನೆಗಳಲ್ಲಿ ಯಾರು ವಾಸ ಮಾಡದಂತೆ ಪುರಸಭೆ ಮುಖ್ಯಾಧಿಕಾರಿ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಸಾರ್ವಜನಿಕರಿಗೆ ಸೂಚನೆ ನೀಡಲಾಗಿದೆ ಎಂದು ತಹಸೀಲ್ದಾರ್ ಫಿರೋಜ ಷಾ ಸೋಮನಕಟ್ಟಿ ತಿಳಿಸಿದರು.ಧೋ ಎಂದು ಸುರಿದ ಮಳೆಗೆ ನಲುಗಿದ ಬ್ಯಾಡಗಿ
The bear was shaken by the pouring rainಬ್ಯಾಡಗಿ ಸುದ್ದಿ, ಭಾರಿ ಮಳೆ, ಜನಜೀವನ, Byadagi news, heavy rain, public life
ನಿರಂತರ ಸುರಿದ ಮಳೆಗೆ ಪಟ್ಟಣದ ಮುಖ್ಯರಸ್ತೆಯಲ್ಲಂತೂ ತಗ್ಗುಗಳು ಬಿದ್ದಿದ್ದು, ಮಳೆ ನೀರು ಸಂಗ್ರಹಗೊಂಡು ಕೆರೆಯಂತಾಗಿದೆ. ಎಲ್ಲಿಯೂ ಚರಂಡಿ ಇಲ್ಲದ ಕಾರಣ ರಸ್ತೆಯಲ್ಲಿ ಗುಂಡಿಗಳಲ್ಲಿ ನೀರು ತುಂಬಿಕೊಂಡು, ರಸ್ತೆ ಇಕ್ಕೆಲದಲ್ಲಿ ಮುಂದೆ ಹರಿದು ಹೋಗದೆ ರಸ್ತೆಯಲ್ಲಿಯೇ ನಿಂತಿದ್ದು, ವಾಹನ ಸವಾರರ ಪಾಲಿಗೆ ಕಂಟಕಪ್ರಾಯವಾಗಿ ಪರಿಣಮಿಸಿತು.
ಫೋಟೋ-16ಬಿವೈಡಿ5ಏಬ್ಯಾಡಗಿಯಲ್ಲಿ ಮಳೆ ನೀರಿಗೆ ಕ್ರೀಡಾಂಗಣದ ಮೇಲ್ಭಾಗದಲ್ಲಿರುವ ಚರಂಡಿ ಕಟ್ಟಿರುವುದು.
ಫೋಟೋ-16ಬಿವೈಡಿ5ಬಿಬ್ಯಾಡಗಿಯ ಮುಖ್ಯರಸ್ತೆಯಲ್ಲಿ ನೀರು ತುಂಬಿದ್ದರಿಂದ ಹರಸಾಹಸಪಡುತ್ತಿರುವ ವಾಹನ ಚಾಲಕ.
ಫೋಟೋ-16ಬಿವೈಡಿ5ಸಿಬ್ಯಾಡಗಿಯಲ್ಲಿ ಮಳೆ ನೀರಿಗೆ ಸಮುದ್ರದಂತಾಗಿರುವ ಕ್ರೀಡಾಂಗಣ.
ಫೋಟೋ-16ಬಿವೈಡಿ5ಡಿಬ್ಯಾಡಗಿಯಲ್ಲಿ ಮಂಜು ಕವಿದಂತಾಗಿದ್ದು ಹಗಲುವೇಳೆಯೇ ಹೆಡ್‌ಲೈಟ್ ಹಾಕಿ ಸಂಚರಿಸುತ್ತಿರುವ ವಾಹನಗಳು.