ದಾವಣಗೆರೆ: ಸಿಎಂ ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಾಯಕ, ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಸುದೀರ್ಘ ಅವಧಿ ಅಧಿಕಾರ ನಡೆಸಿದ ದಾಖಲೆ ಮುರಿದಿದ್ದಲ್ಲ. ಕರ್ನಾಟಕವನ್ನು ಗೂಂಡಾ ರಾಜ್ಯ ಮಾಡಿದ್ದೇ ಸಿದ್ದರಾಮಯ್ಯ ಸರ್ಕಾರದ ಸಾಧನೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.
ಗಲಾಟೆಯಲ್ಲಿ ಅಮಾಯಕ ಕಾಂಗ್ರೆಸ್ ಕಾರ್ಯಕರ್ತನ ಜೀವ ಬಲಿಯಾಗಿದೆ. ಸಚಿವ ಜಮೀರ್ ಅಹಮ್ಮದ್ ಮೃತನ ಮನೆಗೆ ಹೋಗಿ ₹25 ಲಕ್ಷ ಪರಿಹಾರ ಕೊಟ್ಟು, ಮನೆ ಕಟ್ಟಿ ಕೊಡಿ ಅಂದ ಮಾತ್ರಕ್ಕೆ ಮೃತಪಟ್ಟ ಮನೆಯ ಮಗ ವಾಪಸ್ ಬರುತ್ತಾನಾ? ಸಚಿವ ಜಮೀರ್ ಅಹಮ್ಮದ್‌ಗೆ ನಿಜವಾದ ಕಾಳಜಿ ಇದ್ದರೆ ಇಡೀ ಪ್ರಕರಣದ ಪಾರದರ್ಶಕ ತನಿಖೆಗೆ ಒತ್ತಾಯಿಸಬೇಕಾಗಿತ್ತು ಎಂದರು.
ಬಳ್ಳಾರಿ ನೂತನ ಎಸ್‌ಪಿ ಅವರನ್ನು ಅಮಾನತುಪಡಿಸಿದ್ದು ಸರಿಯಲ್ಲ. ಭರತ್ ರೆಡ್ಡಿಯನ್ನು ಶಾಸಕ ಸ್ಥಾನದಿಂದ ವಜಾ ಮಾಡಬೇಕು. ಇಡೀ ಪ್ರಕರಣನ್ನು ಮುಚ್ಚಿ ಹಾಕಲು ಸಿಐಡಿ ತನಿಖೆಗೆ ಒಪ್ಪಿಸಲಾಗಿದೆ. ಸಿಐಡಿ ತನಿಖೆ ಬಗ್ಗೆ ನಮಗೆ ನಂಬಿಕೆ ಇಲ್ಲ. ಬಳ್ಳಾರಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದರು.ಬಿಜೆಪಿ ಮುಖಂಡರಾದ ಅರಕೆರೆ ನಾಗರಾಜ, ಜೆ.ಕೆ.ಸುರೇಶ, ಪ್ರವೀಣ ಜಾಧವ್, ರಾಜು ವೀರಣ್ಣ, ಅಜಯಕುಮಾರ, ಪಂಜು ಪೈಲ್ವಾನ್, ರವಿಗೌಡ, ಕೆ.ಎನ್.ವೆಂಕಟೇಶ ಇತರರು ಇದ್ದರು.
- - --6ಕೆಡಿವಿಜಿ7: