ಹೋರಾಟಗಳ ಪ್ರತಿಫಲ ಕರ್ನಾಟಕ ಉದಯ

KannadaprabhaNewsNetwork |  
Published : Nov 03, 2026, 03:15 AM IST
2ಬಿಎಸ್ವಿ02- ಬಸವನಬಾಗೇವಾಡಿಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವದಲ್ಲಿ ಭುವನೇಶ್ವರಿದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ ಕರ್ನಾಟಕ ಏಕೀಕರಣ ಅಷ್ಟು ಸುಲಭವಾಗಿ ಆಗಿಲ್ಲ, ಪ್ರತಿಯೊಬ್ಬರೂ ನಾಡು ನುಡಿಯ ಬಗ್ಗೆ ಅಭಿಮಾನ ಹೊಂದಿದವರಾಗಬೇಕೆಂದು ಕಲಬುರ್ಗಿಯ ಆಂಗ್ಲ ಭಾಷಾ ಪ್ರಾಧ್ಯಾಪಕ ಆನಂದ್.ಸಿ.ಎಸ್ ಹೇಳಿದರು

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ಕರ್ನಾಟಕ ಏಕೀಕರಣ ಅಷ್ಟು ಸುಲಭವಾಗಿ ಆಗಿಲ್ಲ, ಪ್ರತಿಯೊಬ್ಬರೂ ನಾಡು ನುಡಿಯ ಬಗ್ಗೆ ಅಭಿಮಾನ ಹೊಂದಿದವರಾಗಬೇಕೆಂದು ಕಲಬುರ್ಗಿಯ ಆಂಗ್ಲ ಭಾಷಾ ಪ್ರಾಧ್ಯಾಪಕ ಆನಂದ್.ಸಿ.ಎಸ್ ಹೇಳಿದರು.

ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಬಸವೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಐಕ್ಯೂಎಸಿ, ಕನ್ನಡ ಹಾಗೂ ಸಂಸ್ಕೃತಿಕ ವಿಭಾಗಗಳ ಸಹಯೋಗದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 71ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿದ ನಂತರ ಮಾತನಾಡಿದರು. ಸಾಕಷ್ಟು ಹೋರಾಟಗಳ ಪ್ರತಿಫಲವಾಗಿ ಮೈಸೂರು ರಾಜ್ಯ ಕರ್ನಾಟಕವಾಗಿ ಉದಯವಾಯಿತು. ಕರ್ನಾಟಕದ ಏಕೀಕರಣಕ್ಕಾಗಿ ತರಾಸು, ಅನಕೃ, ಆಲೂರು ವೆಂಕಟರಾಯ, ಹುಯಿಲಗೋಳ ನಾರಾಯಣರಾವ್, ಕುವೆಂಪು, ಬೇಂದ್ರೆ, ಗೋಕಾಕ್ ಸೇರಿದಂತೆ ಅನೇಕ ಮಹನೀಯರು ತಮ್ಮ ಬದುಕನ್ನು ಅರ್ಪಿಸಿ ಸುಂದರವಾದ ಕರ್ನಾಟಕವನ್ನು ಕಟ್ಟಿಕೊಟ್ಟಿದ್ದಾರೆ. ಕನ್ನಡವು ಇಂದು ಜ್ಞಾನದ ಭಾಷೆಯಾಗಿ ಅನ್ನದ ಭಾಷೆಯಾಗಿ ತನ್ನ ಅಸ್ತಿತ್ವವನ್ನು ಉಳಿಸಿಕೊಂಡು ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡ ಸರ್ವ ಶ್ರೇಷ್ಠ ಭಾಷೆಯಾಗಿದೆ ಎಂದು ಬಣ್ಣಿಸಿದರು.

ಪ್ರಾಚಾರ್ಯ ಡಾ.ಎ.ವ್ಹಿ.ಸೂರ್ಯವಂಶಿ ಮಾತನಾಡಿ, ಪ್ರತಿಯೊಬ್ಬರಲ್ಲಿಯೂ ನಾಡು-ನುಡಿಯ ಕುರಿತು ಅಭಿಮಾನ ಇರಬೇಕು. ಆಗ ಮಾತ್ರ ಸುಂದರ ನಾಡನ್ನು ಕಟ್ಟಬಹುದು. ನಿರಂತರ ಓದಿನೊಂದಿಗೆ ಯಾರು ಮುಂದುವರಿಯುತ್ತಾರೋ ಅವರು ಮೇಲ್ಮಟ್ಟಕ್ಕೆರುತ್ತಾರೆ ಎಂದರು.

ಕನ್ನಡ ರಾಜ್ಯೋತ್ಸವದಂಗವಾಗಿ ಹಮ್ಮಿಕೊಂಡಿದ್ದ ಪ್ರಬಂಧ ರಚನೆ, ಆಶುಭಾಷಣ, ಸ್ವರಚಿತ ಕವನ ವಾಚನ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ತಾಲೂಕು ಕಸಾಪ ಅಧ್ಯಕ್ಷ ಶಿವಾನಂದ ಡೋಣೂರ, ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಶಿವು ಮಡಿಕೇಶ್ವರ, ಐ.ಕ್ಯೂ.ಎ.ಸಿ. ಸಂಯೋಜಕ ಪ್ರೊ.ಸಿ.ಪಿ.ಧಡೇಕರ, ಎಂ.ಕೆ.ಯಾದವ ಸೇರಿ ಹಲವರು ಇದ್ದರು. ಕನ್ನಡ ಹಾಗೂ ಸಾಂಸ್ಕೃತಿಕ ವಿಭಾಗದ ಮುಖ್ಯಸ್ಥ ಡಾ.ಬಿ.ಎಂ.ಸಾಲವಾಡಗಿ ಸ್ವಾಗತಿಸಿದರು. ಸರಸ್ವತಿ ಇಂಡಿ ನಿರೂಪಿಸಿದರು. ಎ.ಯು.ಪಾಟೀಲ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಭುಗಿಲೆದ್ದ ಸರ್ಕಾರ ವರ್ಸಸ್‌ ಕುಮಾರಸ್ವಾಮಿ ಸ್ಟಿಂಗ್‌ ಫೈಟ್‌ - ಈಗ ಎಚ್‌ಡಿಕೆ ಚಾರ್ಜ್‌ಶೀಟ್‌
ಅರಬ್ಬಿ ಸಮುದ್ರದಲ್ಲಿ ಚಂಡಮಾರುತ - ಇನ್ನೂ 3 ದಿನ ರಾಜ್ಯದೆಲ್ಲೆಡೆ ಮಳೆ