- ಮುಷ್ಕರ ಬೆಂಬಲಿಸಿ ಬ್ಯಾಂಕ್ ನೌಕರರ ಸಂಘ ಪ್ರತಿಭಟನೆಯಲ್ಲಿ ರಾಘವೇಂದ್ರ ನಾಯರಿ
ದಾವಣಗೆರೆ: ಕೇಂದ್ರ ಸರ್ಕಾರ ಜಾರಿಗೆ ತಂದ ನೂತನ ಲೇಬರ್ ಕೋಡ್‌ಗಳು ಅಕ್ಷರಶಃ ಕಾರ್ಮಿಕರ ಪಾಲಿನ ಮರಣ ಶಾಸನವಾಗಿವೆ. ಕಾರ್ಮಿಕರನ್ನು ಆಧುನಿಕ ಗುಲಾಮಗಿರಿಗೆ ತಳ್ಳುವ ಹಾಗೂ ಕಾರ್ಮಿಕರನ್ನು ಜೀತದಾಳುಗಳನ್ನಾಗಿಸುವ ಹುನ್ನಾರವಾಗಿದೆ ಎಂದು ಎಐಟಿಯುಸಿ ದಾವಣಗೆರೆ ಜಿಲ್ಲಾಧ್ಯಕ್ಷ ರಾಘವೇಂದ್ರ ನಾಯರಿ ಆರೋಪಿಸಿದರು.
ಗುರುವಾರ ನಗರದ ಶ್ರೀ ಜಯದೇವ ವೃತ್ತದಲ್ಲಿ ಕರ್ನಾಟಕ ಪ್ರದೇಶ ಬ್ಯಾಂಕ್ ಎಂಪ್ಲಾಯೀಸ್ ಫೆಡರೇಶನ್ ನೇತೃತ್ವದಲ್ಲಿ ಬ್ಯಾಂಕ್ ಅಧಿಕಾರಿ, ನೌಕರರ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು. ಕೇಂದ್ರ ಸರ್ಕಾರದ ನೂತನ 4 ಕಾರ್ಮಿಕ ವಿರೋಧಿ ಸಂಹಿತೆಗಳನ್ನು ಕೂಡಲೇ ವಾಪಾಸ್ ಪಡೆಯಬೇಕು. ಜನವಿರೋಧಿ ಮಸೂದೆ ವಾಪಾಸ್ ಪಡೆಯಬೇಕು. ಕೇಂದ್ರ ಕಾರ್ಮಿಕ ಸಂಘಟನೆಗಳು ಮತ್ತು ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆಗಳು ಕೇಂದ್ರದ ರೈತ- ಕಾರ್ಮಿಕ ವಿರೋಧಿ ನೀತಿ ಖಂಡಿಸಿ ನಡೆಸಿದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದಲ್ಲಿ ನಾವೆಲ್ಲರೂ ಪಾಲ್ಗೊಳ್ಳುವ ಮೂಲಕ ಹೋರಾಟಕ್ಕೆ ಶಕ್ತಿ ತುಂಬಿದ್ದೇವೆ ಎಂದರು.ಸಾರ್ವಜನಿಕ ಸ್ವಾಮ್ಯದ ಬ್ಯಾಂಕು, ಗ್ರಾಮೀಣ ಬ್ಯಾಂಕು, ವಿಮಾ ಕಂಪೆನಿಗಳನ್ನು ಖಾಸಗೀಕರಣಗೊಳಿಸಬಾರದು. ಸರ್ಕಾರಿ ಬಂಡವಾಳ ಹಿಂತೆಗೆಯಬಾರದು. ನಮ್ಮ ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಸ್ಪಂದಿಸುವವರೆಗೆ ಹೋರಾಟ ನಡೆಯಲಿದೆ ಎಂದು ಕೆ.ರಾಘವೇಂದ್ರ ನಾಯರಿ ಎಚ್ಚರಿಸಿದರು.
- ಐದು ದಿನಗಳ ಬ್ಯಾಂಕಿಂಗ್ ಪದ್ಧತಿ ಜಾರಿಗೆ ತರಬೇಕು. ಎಲ್ಲಾ ಬ್ಯಾಂಕ್ ಉದ್ಯೋಗಿಗಳಿಗೆ ಹಳೆ ಪಿಂಚಣಿ ಸೌಲಭ್ಯ ನೀಡಬೇಕು.
- ಗ್ರಾಮೀಣ ಬ್ಯಾಂಕುಗಳಲ್ಲಿ ಬಡ್ತಿ ಮತ್ತು ಸೇವಾ ನಿಯಮ ಪರಿಷ್ಕರಿಸಬೇಕು, ಜನ ಸಾಮಾನ್ಯರಿಗೆ ಬ್ಯಾಂಕುಗಳು ವಿಧಿಸುವ ಶುಲ್ಕ ಕಡಿಮೆ ಮಾಡಬೇಕು.
ಜಿಲ್ಲಾ ಬ್ಯಾಂಕ್ ನೌಕರರ ಸಂಘ, ಗ್ರಾಮೀಣ ಬ್ಯಾಂಕ್ ಅಧಿಕಾರಿಗಳು- ನೌಕರರ ಸಂಘದ ನಾಗರಾಜ ನಾಶಿ, ಕೆ.ವಿಶ್ವನಾಥ ಬಿಲ್ಲವ, ಎಚ್.ಎಸ್. ತಿಪ್ಪೇಸ್ವಾಮಿ, ಶ್ರೀಹರ್ಷ, ಪರಶುರಾಮ, ಆರ್.ಆಂಜನೇಯ, ಎಂ.ಎಂ.ಸಿದ್ದಲಿಂಗಯ್ಯ, ಅಣ್ಣಪ್ಪ ನಂದಾ, ಸೈಯದ್ ಚಾಂದಬಾಷಾ, ಎಚ್.ಜೆ.ಆಶಾ, ಆರ್.ಮಂಜಪ್ಪ, ಕೆ.ರವಿಶಂಕರ, ಶ್ರೀನಿವಾಸ ನಾಡಿಗ್, ಜ್ಞಾನೇಶ್ವರ ಮಾಳವಾಡೆ, ಎಸ್.ಪ್ರಶಾಂತ, ಆಕನೂರು ತಿಪ್ಪೇಸ್ವಾಮಿ, ಮಂಜಮ್ಮ, ಟಿ.ಅಶ್ವಿನಿ, ಗಂಗು ಬಸವರಾಜ, ರಾಜೇಶ, ಸುನಂದಮ್ಮ, ಅನಿಲ, ಯಲ್ಲಪ್ಪ, ರೇಖಾ, ಪವನ, ಮೇಕಲ ಕೀರ್ತಿ, ಶ್ರೀನಿವಾಸ ಬಾದ ಷಹ, ನರೇಶ, ಸೂರ್ಯನಾರಾಯಣ, ಲಕ್ಷ್ಮಿನಾರಾಯಣ, ಅಬ್ರಾರ್ ಅಹಮದ್, ದುರ್ಗಪ್ಪ, ಜೋಸೆಫ್ ಇತರರು ಮುಷ್ಕರದ ನೇತೃತ್ವ ವಹಿಸಿದ್ದರು.
- - -