ಸಹಕಾರ ಸಂಘಗಳ ಮುನ್ನಡೆಸುವುದೇ ಸವಾಲು: ಸಿ.ಜಿ.ಹಳ್ಳದ್

KannadaprabhaNewsNetwork |  
Published : Sep 15, 2025, 01:00 AM IST
ಚಿತ್ರ 14ಬಿಡಿಆರ್56 | Kannada Prabha

ಸಾರಾಂಶ

ವಿವಿಧೋದ್ದೇಶ ಸಹಕಾರ ಸಂಘಗಳನ್ನು ಹುಟ್ಟು ಹಾಕುವುದಕ್ಕಿಂತಲೂ ಅವುಗಳನ್ನು ಸಮರ್ಪಕವಾಗಿ ಮುನ್ನೆಡೆಸಿಕೊಂಡು ಹೋಗುವುದು ಸವಾಲಿನ ಕಾರ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ್ ಹೇಳಿದರು.

ಕನ್ನಡಪ್ರಭ ವಾರ್ತೆ ಭಾಲ್ಕಿ

ವಿವಿಧೋದ್ದೇಶ ಸಹಕಾರ ಸಂಘಗಳನ್ನು ಹುಟ್ಟು ಹಾಕುವುದಕ್ಕಿಂತಲೂ ಅವುಗಳನ್ನು ಸಮರ್ಪಕವಾಗಿ ಮುನ್ನೆಡೆಸಿಕೊಂಡು ಹೋಗುವುದು ಸವಾಲಿನ ಕಾರ್ಯವಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಜಿ.ಹಳ್ಳದ್ ಹೇಳಿದರು.

ಪಟ್ಟಣದ ಬಾಲಾಜಿ ಮಂದಿರದಲ್ಲಿ ಭಾನುವಾರ ನಡೆದ ವೀರಶೈವ ಪ್ರಾಥಮಿಕ ಶಾಲಾ ಶಿಕ್ಷಕರ ವಿವಿದೋದ್ದೇಶ ಸಹಕಾರ ಸಂಘದ 15ನೇ ವಾರ್ಷಿಕ ಮಹಾಸಭಾ ಉದ್ಘಾಟಿಸಿ ಮಾತನಾಡಿ, ವೀರಶೈವ ಪ್ರಾಥಮಿಕ ಶಾಲಾ ಶಿಕ್ಷಕರ ವಿವಿಧೋದ್ದೇಶ ಸಹಕಾರ ಸಂಘ ಸುಮಾರು 15 ವರ್ಷಗಳಿಂದ ಸಾಗಿ ಬಂದಿರುವುದು ಪ್ರಶಂಸನೀಯ ಕಾರ್ಯವಾಗಿದೆ.

ಯಾವುದೇ ಸಹಕಾರ ಸಂಘಗಳು ಹುಟ್ಟುಹಾಕುವುದಕ್ಕಿಂತಲೂ ಅವುಗಳನ್ನು ಮುನ್ನಡೆಸಿಕೊಂಡು ಹೋಗುವುದು ಸವಾಲಿನ ಕೆಲಸವಾಗಿದೆ. ಸಂಘದಿಂದ ನಿವೃತ್ತ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸುವ ಕಾರ್ಯ ಶ್ಲಾಘನೀಯ, ಆದರೆ ಸಂಘದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹ ಮಾಡುವ ಕಾರ್ಯವಾಗಬೇಕು, ಅಲ್ಲದೇ 1 ಲಕ್ಷ ರು. ಸಾಲ ಪಡೆಯಲು ಬಂದರೆ ಅವರಲ್ಲಿ 10 ಸಾವಿರ ರು. ಷೇರು ಬಂಡವಾಳ ಸಂಗ್ರಹಿಸಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನು ನೇಮಕ ಮಾಡಿಕೊಂಡು ಸಂಘ ಇನ್ನೂ ಹೆಮ್ಮರವಾಗಿ ಬೆಳೆಸಬೇಕು ಎಂದು ಸಲಹೆ ನೀಡಿದರು.

ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಹಲಮಂಡಗೆ ಅಧ್ಯಕ್ಷತೆ ವಹಿಸಿ ಕೇವಲ 1.5 ಲಕ್ಷ ರು. ಷೇರು ಬಂಡವಾಳದಲ್ಲಿ ಸ್ಥಾಪನೆಯಾದ ವೀರಶೈವ ಪ್ರಾಥಮಿಕ ಶಾಲಾ ವಿವಿಧೋದ್ದೇಶ ಸಹಕಾರ ಸಂಘವು ಇಂದು 43.58 ಲಕ್ಷ ರು. ನಿವ್ವಳ ಲಾಭ ಗಳಿಸಿದೆ. ಪ್ರತಿವರ್ಷ ನಿವ್ಹಳ ಲಾಭದಲ್ಲಿ ಏರಿಕೆಯಾಗುತ್ತಲೇ ಬಂದಿದೆ. ಯಾವುದೇ ಸುಸ್ತಿ ಸಾಲ ಈ ಸಹಕಾರ ಸಂಘದಲ್ಲಿಲ್ಲ. ಇದಕ್ಕೆಲ್ಲ ಇಲ್ಲಿಯ ಸದಸ್ಯರ ಶ್ರಮ ಮತ್ತು ನಿರ್ದೇಶಕರ ಅವಿರತ ದುಡಿಮೆಯೇ ಕಾರಣವಾಗಿದೆ ಎಂದು ಹೇಳಿದರು.

ಸಂಘದ ಕಾರ್ಯದರ್ಶಿ ನಾಗಭೂಷಣ ಬೂದೆಪ್ಪ ಮಾಮಡಿ ವಾರ್ಷಿಕ ವರದಿ ವಾಚನ ಮಾಡಿದರು. ಸಂಘದ ಸಲಹೆಗಾರ ಬಾಬುರಾವ ಬಿರಾದಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸೂರ್ಯಕಾಂತ ಸುಂಟೆ, ರಾಜ್ಯ ಸರ್ಕಾರಿ ನೌಕರರ ಸಂಘದ ನಿರ್ದೇಶಕ ಬಸವರಾಜ ದಾನಾ ಮಾತನಾಡಿದರು. ಇದೇ ವೇಳೆ ಸಂಘದ ನಿವೃತ್ತ ಶಿಕ್ಷಕ ಮತ್ತು ಶಿಕ್ಷಕಿಯರಿಗೆ ಸಹಕಾರ ಸಂಘದಿಂದ ಗೌರವಿಸಲಾಯಿತು.

ಸಂಘದ ಉಪಾಧ್ಯಕ್ಷ ಭಗವಾನ ವಲಾಂಡೆ, ಮಲ್ಲಿನಾಥ ಸಜ್ಜನ್, ಅಶೋಕ ಕುಂಬಾರ, ಜಯರಾಜ ದಾಬಶೆಟ್ಟಿ, ಶರಣಪ್ಪ ರಾಚೋಟೆ, ಬಸವರಾಜ ರಂಜೆರೆ, ಚಂದ್ರಕಾಂತ ಮಾಶೆಟ್ಟೆ, ಪ್ರಭು ಡಿಗ್ಗೆ, ಬಸವರಾಜ ತೇಗಂಪೂರೆ, ರಾಜಕುಮಾರ ಘಂಟೆ, ಅನಿತಾ ಗುರಣ್ಣಾ, ಶಿಕ್ಷಕರ ಸಂಘದ ನಿರ್ದೇಶಕಿ ಮೈತ್ರಾದೇವಿ ಬಿರಾದಾರ, ಷಡಕ್ಷರಿ ಸ್ವಾಮಿ, ಪುಣ್ಯವತಿ ಕಾಮಣ್ಣ, ವಿರಶೆಟ್ಟಿ ಇಟಗೆ, ಅಮೃತಪ್ಪ ರಂಜೇರೆ ಧನ್ನೂರ(ಹೆಚ್), ಮಲ್ಲಿಕಾರ್ಜುನ ಪಾಟೀಲ ಧನ್ನೂರ(ಹೆಚ್), ಸೋಮನಾಥ ಗೋರ್ಟಾ(ಬಿ), ವ್ಯವಸ್ಥಾಪಕ ವಿಶ್ವನಾಥ ವಾಡೆ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5-6 ತಿಂಗಳಿಂದ ನೀರು ಪೋಲು: ಕ್ರಮಕೈಗೊಳ್ಳದ ಅಧಿಕಾರಿಗಳು
ತಮ್ಮ ಮೇಲಿನ ಆರೋಪ ಸುಳ್ಳು, ಆಧಾರ ರಹಿತ : ಮುನೀಶ್‌ ಮೌದ್ಗಿಲ್‌