ಕಣ್ಣೀರಿಟ್ಟು ಮಂಡಿಯೂರಿ ಮತಕೇಳಿದ ಮೇಟಿ ಮಕ್ಕಳು

KannadaprabhaNewsNetwork |  
Published : Mar 24, 2026, 02:30 AM IST
ಕಣ್ಣೀರು ಹಾಕಿದ | Kannada Prabha

ಸಾರಾಂಶ

ಬಾಗಲಕೋಟೆ ಉಪಚುನಾವಣೆಯ ಕಾಂಗ್ರೆಸ್ ಬಹಿರಂಗ ವೇದಿಕೆ ಕಾರ್ಯಕ್ರಮದಲ್ಲಿ ಮೇಟಿ ಅವರ ಪುತ್ರ ಮಲ್ಲಿಕಾರ್ಜುನ ಮೇಟಿ ಮಾತನಾಡುವ ಸಂದರ್ಭದಲ್ಲಿ ತಂದೆಯ ನೆನೆದು ಕಣ್ಣೀರು ಹಾಕಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಾಗಲಕೋಟೆ ಉಪಚುನಾವಣೆಯ ಕಾಂಗ್ರೆಸ್ ಬಹಿರಂಗ ವೇದಿಕೆ ಕಾರ್ಯಕ್ರಮದಲ್ಲಿ ಮೇಟಿ ಅವರ ಪುತ್ರ ಮಲ್ಲಿಕಾರ್ಜುನ ಮೇಟಿ ಮಾತನಾಡುವ ಸಂದರ್ಭದಲ್ಲಿ ತಂದೆಯ ನೆನೆದು ಕಣ್ಣೀರು ಹಾಕಿದರು. ಈ ಎಲ್ಲ ನಾಯಕರು ನಮ್ಮ ತಂದೆಯ ಜೊತೆಗಿದ್ದವರು. ಈಗ ನಮ್ಮ ಜೊತೆಗೆ ನಿಂತಿದ್ದಾರೆ. ನಾನು ಹೆಚ್ಚು ಮಾತನಾಡೋದಿಲ್ಲ, ನಮ್ಮ ನಾಯಕರು ಮಾತಾಡುತ್ತಾರೆ. ನನ್ನ ಸಹೋದರ ಉಮೇಶನನ್ನು ಗೆಲ್ಲಿಸಿಕೊಡಿ ಎಂದು ಮಲ್ಲಿಕಾರ್ಜುನ ಮೇಟಿ ಭಾವುಕರಾದರು. ವೇದಿಕೆಯಲ್ಲೇ ಮೇಟಿ ಮಕ್ಕಳು ಕಣ್ಣೀರಿಟ್ಟರು. ತಂದೆಯನ್ನು ನೆನೆದು ಮಲ್ಲಿಕಾರ್ಜುನ ಮೇಟಿ, ಉಮೇಶ ಮೇಟಿ, ಬಾಯಕ್ಕ ಮೇಟಿ ಕಣ್ಣೀರು ಹಾಕಿದರು. ಜನರ ಮುಂದೆ ಮಂಡಿಯೂರಿ ಕೈಮುಗಿದು ಪಕ್ಷದ ಗೆಲವಿಗೆ ಮಕ್ಕಳು ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಶಾಲನಗರ: ರಕ್ತದಾನ ಶಿಬಿರ ಉದ್ಘಾಟನೆ
ಅಂಬಾತನಯ ಮುದ್ರಾಡಿ ಪುಸ್ತಕ ಪ್ರಶಸ್ತಿಗೆ ನಾಟಕ ವಿಮರ್ಶಾಕೃತಿಗಳಿಗೆ ಆಹ್ವಾನ