ಕನ್ನಡಪ್ರಭ ವಾರ್ತೆ ಯಾದಗಿರಿ
ಯುವ ಕೆಂಪರಾಯನು ವಿದ್ಯಾಭ್ಯಾಸ ಪೂರ್ಣಗೊಂಡ ಬಳಿಕ ಗುರುಗಳ ಆದೇಶದಂತೆ ನಾಡಿನಾದ್ಯಂತ ಸಂಚರಿಸಿ ಲೋಕಾನುಭವ ಪಡೆದುಕೊಂಡರು. ಗುರುಕುಲದಲ್ಲಿದ್ದಾಗ ಕೆಂಪರಾಯರಿಗೆ ಏಕಾಂಬರಶಾಸ್ತ್ರಿ, ಗುರುನಂಜೇಶ, ಹೀಗೆ ಹಲವು ಪಂಡಿತರ ಗೆಳೆತನವಿತ್ತು. ಮುಂದೆ ಕೆಂಪೆರಾಯನು ಬೆಳೆದು ದೊಡ್ಡವನಾದಂತೆ ಕೆಂಪೇಗೌಡರೆಂಬ ಹೆಸರು ಬಂದಿತು ಎಂದರು.
ಕೆಂಪೇಗೌಡರ ಕನಸಿನ ಬೆಂಗಳೂರು ನಗರದ ನಿರ್ಮಾಣಕಾರ್ಯ 1537ರಲ್ಲಿ ಶುರುವಾಗುತ್ತದೆ. ಮೂಲತಃ ಕೃಷಿ ಕುಟುಂಬದಿಂದ ಬಂದಂತಹ ಕೆಂಪೇಗೌಡರು, ಹೋನನಾರು ಕಟ್ಟುವ ಆಚರಣೆಯಿಂದ ರಾಜಧಾನಿಯ ನಿಮಾರ್ಣಕಾರ್ಯ ಆರಂಭಿಸಿದರು ಎಂದರು.ಕಾರ್ಯಕ್ರಮದಲ್ಲಿ ಯುವ ಘಟಕ ಅಧ್ಯಕ್ಷರಾದ ವಿಶ್ವರಾಧ್ಯ ದಿಮ್ಮೆ, ಸಂತೋಷ ನಿರ್ಮಲಕರ್, ಭೀಮರಾಯ ರಾಮಸಮುದ್ರ, ಶರಣಪ್ಪ ದಳಪತಿ, ಹಣಮಂತ ಖಾನಳ್ಳಿ, ಸುರೇಶ ಬೆಳಗುಂದಿ, ವಿಜಯ ರಾಠೋಡ, ನಾಗು ತಾಂಡೂಲ್ಕರ್, ಸಾಬು ನೀಲಹಳ್ಳಿ, ಕಾಶಿನಾಥ ನಾನೇಕ, ಅಬ್ದುಲ್ ರೀಯಾಜ್, ಹಣಮಂತ ನಾನೇಕ, ರಮೇಶ ಡಿ. ನಾಯಕ ಇತರರು ಭಾಗಿಯಾಗಿದ್ದರು.