ಎಲ್ಲರ ಸಹಕಾರದಿಂದ ಮಾತ್ರ ಸಮ್ಮೇಳನ ಯಶಸ್ಸು

KannadaprabhaNewsNetwork |  
Published : Jan 26, 2025, 01:31 AM IST
ಕಸಾಪ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ ಫೆ.15 ರಂದು ಪಟ್ಟಣದ ವಿಬಿಸಿ ಹೈಸ್ಕೂಲ್‌ ಮೈದಾನದ ಸಿದ್ದೇಶ್ವರ ವೇದಿಕೆಯಲ್ಲಿ ತಾಲೂಕಿನ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಹಿನ್ನಲೆಯಲ್ಲಿ ತಾಲೂಕು ಕಸಾಪ ಕಚೇರಿಯನ್ನು ತೆರೆಯಲಾಗಿದೆ. ಗಣಿತಲೋಕ ಕಟ್ಟಡದಲ್ಲಿ ಕುಂಟೋಜಿ ಹಿರೇಮಠದ ಚನ್ನವೀರ ಶಿವಾಚಾರ್ಯ ಶ್ರೀಗಳು ಹಾಗೂ ಹಿರಿಯ ಸಾಹಿತಿಗಳು ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ

ಫೆ.15 ರಂದು ಪಟ್ಟಣದ ವಿಬಿಸಿ ಹೈಸ್ಕೂಲ್‌ ಮೈದಾನದ ಸಿದ್ದೇಶ್ವರ ವೇದಿಕೆಯಲ್ಲಿ ತಾಲೂಕಿನ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಹಿನ್ನಲೆಯಲ್ಲಿ ತಾಲೂಕು ಕಸಾಪ ಕಚೇರಿಯನ್ನು ತೆರೆಯಲಾಗಿದೆ. ಗಣಿತಲೋಕ ಕಟ್ಟಡದಲ್ಲಿ ಕುಂಟೋಜಿ ಹಿರೇಮಠದ ಚನ್ನವೀರ ಶಿವಾಚಾರ್ಯ ಶ್ರೀಗಳು ಹಾಗೂ ಹಿರಿಯ ಸಾಹಿತಿಗಳು ಉದ್ಘಾಟಿಸಿದರು.ಈ ವೇಳೆ ಸಾಮಾಜಿಕ ಕಾರ್ಯಕರ್ತ ಸಿ.ಬಿ.ಅಸ್ಕಿ ಮಾತನಾಡಿ, ಪಟ್ಟಣದಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ಈಗಾಗಲೇ ತಾಲೂಕಿನ ಹೆಸರಾಂತ ಸಾಹಿತಿಗಳು, ಗಣ್ಯರು ಕನ್ನಡಾಭಿಮಾನಿಗಳು ನಿರ್ಣಯಿಸಿದ್ದು ಸಂತೋಷ. ಇದು ಕೇವಲ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮವಲ್ಲಿ ಇಡೀ ದೇಶದೆಲ್ಲೆಡೆ ಕನ್ನಡದ ಕಂಪು ಪಸರಿಸುವಂತಾಗಲು ಮತ್ತು ಎಲ್ಲರೂ ಕನ್ನಡವನ್ನು ಗೌರವದಿಂದ ಕಾಣುವಂತೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಇಡೀ ತಾಲೂಕಿನ, ಪಟ್ಟಣದ ಎಲ್ಲ ಯುವಕರು ಹಿರಿಯರು, ಸಾಹಿತಿಗಳು,ಗಣ್ಯರು ರಾಜಕೀಯ ಮುಖಂಡರು, ಮಹಿಳಾ ಸಂಘಟನೆ ಮುಖ್ಯಸ್ಥರು ಕೈಜೋಡಿಸಿದಾಗ ಮಾತ್ರ ಸಮ್ಮೇಳನ ಯಶಸ್ವಿಗೊಳಿಸಲು ಸಾಧ್ಯ. ತಾಯಿ ಭುವನೇಶ್ವರಿ ಸೇವೆ ಮಾಡುವ ಮೂಲಕ ಯಾವುದೇ ವೈಯಕ್ತಿಕ ವಿಚಾರಕ್ಕೆ ಒತ್ತು ಕೊಡದೆ, ಸಮ್ಮೇಳನ ಸಮಿತಿಯ ನಿರ್ಣಯಕ್ಕೆ ಬದ್ದರಾಗಿ ಕನ್ನಡ ನಾಡು, ನುಡಿ, ಒಗ್ಗಟ್ಟಿನಿಂದ ಸಮ್ಮೇಳನ ಯಶಸ್ವಿಗೆ ಪ್ರಯತ್ನಿಸೋಣ. ಸಾಹಿತ್ಯ ಸಮ್ಮೇಳನದಲ್ಲಿ ನಮ್ಮ ತಾಲೂಕಿನ ಕಲೆ, ಸಾಹಿತ್ಯ, ಸಂಸ್ಕೃತಿ ಬಿಂಬಿಸುವ, ಹಳ್ಳಿಗಳ ವಿಶೇಷತೆ ಸಾರುವ ಸ್ಥಬ್ದ ಚಿತ್ರಗಳನ್ನು ಸಮ್ಮೇಳನಾಧ್ಯಕ್ಷರ ಮೆರವಣಿಗೆಯಲ್ಲಿ ಇರಬೇಕೆಂದು ಸಲಹೆ ನೀಡಿದರು.ನಿಕಟಪೂರ್ವ ಕಸಾಪ ಅಧ್ಯಕ್ಷ ಎಂ.ಬಿ.ನಾವದಗಿ ಅವರು ಮಾತನಾಡಿ, ಮುದ್ದೇಬಿಹಾಳ ತಾಲೂಕು ಶರಣರ, ಸಾಹಿತಿಗಳ ಪಣ್ಯ ಕ್ಷೇತ್ರವಾಗಿದೆ. ಈ ಹಿಂದೆ ನಡೆದಿರುವ ನಾಲ್ಕು ಸಮ್ಮೇಳನಗಳು ಯಶಸ್ವಿಯಾಗಿದ್ದು, ಮಾತ್ರವಲ್ಲದೇ ರಾಜ್ಯಕ್ಕೆ ಮಾದರಿಯ ಸಮ್ಮೇಳನ ಎಣಿಸಿಕೊಂಡಿವೆ. ಸಮ್ಮೇಳನಕ್ಕೆ ಬೇಗ ಸ್ವಾಗತ ಸಮಿತಿಯನ್ನು ಪ್ರಮುಖರು ಸೇರಿ ಚರ್ಚಿಸಿ, ಅಂತಿಮಗೊಳಿಸಲು, ತಾಲೂಕಿನ ಹಿರಿಕಿರಿಯ ಸಾಹಿತಿಗಳ ಹೆಸರನ್ನು ಪರಿಶೀಲಿಸಿ, ಸಮ್ಮೇಳನದ ಸರ್ವಾಧ್ಯಕ್ಷರನ್ನು ಆಯ್ಕೆ ಮಾಡಲು, ಕವಿಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಹಲವಾರ ರೀತಿಯ ಕಾರ್ಯಕ್ರಮಗಳ ಆಯೋಜನೆಗೆ ಪೂರ್ವತಯಾರಿ ನಡೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಈ ವೇಳೆ ಕುಂಟೋಜಿ ಹಿರೇಮಠದ ಚನ್ನವೀರ ಶಿವಾಚಾರ್ಯ ಮಹಾಸ್ವಾಮಿಗಳು, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪುರಸಭೆ ಅಧ್ಯಕ್ಷ ಮೈಬೂಬ ಗೊಳಸಂಗಿ, ಎಸ್.ಬಿ.ಚಲವಾದಿ, ಲಾಡ್ಲೇಮಶ್ಯಾಕ ನಾಯ್ಕೋಡಿ, ತಾಲೂಕಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲಬುರ್ಗಿ, ರಾಜು ಕರಡ್ಡಿ, ಯಲ್ಲಪ್ಪ ನಾಯಕಮಕ್ಕಳ, ಕನಾಟಕ ಕೋ ಆಪ್ ಬ್ಯಾಂಕ್‌ ಅಧ್ಯಕ್ಷ ಸಿ.ಎಲ್.ಬಿರಾದಾರ, ಉಪಾಧ್ಯಕ್ಷ ಗುರಲಿಂಗಪ್ಪಗೌಡ ಪಾಟೀಲ, ಎಂ.ಎಂ.ಬೆಳಗಲ್ಲ, ಸರಸ್ವತಿ ಪೀರಾಪೂರ, ಬಸವರಾಜ ಮುದ್ನೂರ, ರಾಜು ಕರಡ್ಡಿ ಸೇರಿದಂತೆ ಇನ್ನು ಹಲವರು ಭಾಗವಹಿಸಿದ್ದರು.

PREV

Recommended Stories

15 ವರ್ಷ ಮೇಲ್ಪಟ್ಟ ಸರ್ಕಾರಿ ವಾಹನ ಗುಜರಿಗೆ: ಆದೇಶ
ಹಾಸಿಗೆ, ದಿಂಬಿಗಾಗಿ ಮತ್ತೆ ಕೋರ್ಟಲ್ಲಿ ಅಂಗಲಾಚಿದ ಕೊಲೆ ಆರೋಪಿ ದರ್ಶನ್‌