ಚನ್ನಗಿರಿ: ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆ ಹಂತ 4ರ ಅಡಿಯಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರಿಗೆ ಸ್ವಉದ್ಯೋಗ ತರಬೇತಿ ಕಾರ್ಯಕ್ರಮದಡಿ ಪಟ್ಟಣದ 60 ಜನ ಪದವೀದರರಿಗೆ ಲ್ಯಾಪ್ ಟಾಪ್ ನೀಡಲಾಗುತ್ತಿದೆ. ಈ ಸೌಲಭ್ಯ ಸದುಪಯೋಗ ಮುಖ್ಯ ಎಂದು ಶಾಸಕ ಬಸವರಾಜು ವಿ. ಶಿವಗಂಗಾ ಹೇಳಿದರು.
ಮುಖ್ಯಾಧಿಕಾರಿ ಕೃಷ್ಣ ಡಿ.ಕಟ್ಟಿಮನಿ ಮಾತನಾಡಿ, ಪಟ್ಟಣದ ನಿರುದ್ಯೋಗಿ ಪಧವೀಧರರು ಸ್ವಾವಲಂಬಿ ಜೀವನ ನಡೆಸಲಿ ಎಂಬ ಉದ್ದೇಶದಿಂದ ರಾಜ್ಯ ಸರ್ಕಾರ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಲ್ಲಿ ₹28.98 ಲಕ್ಷ ವೆಚ್ಚದಲ್ಲಿ 60 ಫಲಾನುಭವಿಗಳಿಗೆ ಉಚಿತ ಲ್ಯಾಪ್ ಟಾಪ್‌ಗಳನ್ನು ವಿತರಣೆ ಮಾಡುತ್ತಿದೆ. ಕ್ಷೇತ್ರದ ಶಾಸಕರ ಸಹಕಾರದಿಂದ ಚನ್ನಗಿರಿ ಪಟ್ಟಣದ ಎಲ್ಲ 23 ವಾರ್ಡ್‌ಗಳಲ್ಲಿಯೂ ಜನತೆಗೆ ಬೇಕಾದ ಮೂಲಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಪುರಸಭೆ ಹಿರಿಯ ಆರೋಗ್ಯ ನಿರೀಕ್ಷಕ ಶಿವರುದ್ರಪ್ಪ, ಸಮುದಾಯ ಸಂಘಟನಾಧಿಕಾರಿ ಬಾಲಾಜಿ ರಾವ್, ಕಚೇರಿ ವ್ಯವಸ್ಥಾಪಕ ಆರಾಧ್ಯ, ಪುರಸಭಾ ಸದಸ್ಯರಾದ ಜಿ.ನಿಂಗಪ್ಪ, ಗಾದ್ರಿ ರಾಜು, ಕಮಲಾ ಹರೀಶ್, ಲತಾ, ಸರ್ವಮಂಗಳ, ಸವಿತಾ ರಾಘವೇಂದ್ರ, ಲಕ್ಷ್ಮೀದೇವಮ್ಮ, ನರಸಿಂಹಮೂರ್ತಿ, ಹಾಲೇಶ್, ಗೌಸ್ ಪೀರ್, ಇಮ್ರಾನ್, ಅಮೀರ್ ಅಹಮದ್, ಕಾಫಿಪುಡಿ ಶಿವಾಜಿ ರಾವ್, ಶಶಿಕುಮಾರ್, ಜಿತೇಂದ್ರರಾಜ್, ನಟರಾಜ್ ಮೊದಲಾದವರು ಹಾಜರಿದ್ದರು.- - - -30ಕೆಸಿಎನ್‌ಜಿ3: ಅರ್ಹ ಫಲಾನುಭವಿಗಳಿಗೆ ಶಾಸಕ ಬಸವರಾಜು ವಿ.ಶಿವಗಂಗಾ ಉಚಿತ ಲ್ಯಾಪ್ ಟಾಪ್‌ಗಳನ್ನು ವಿತರಿಸಿದರು.