ಸಂವಿಧಾನದಿಂದ ಎಲ್ಲರಿಗೂ ಒಂದೇ ಮತ ಎಂಬ ಕಾನೂನು ಜಾರಿ: ಟಿ.ಎಸ್.ಹಾಳಪ್ಪ

KannadaprabhaNewsNetwork |  
Published : Apr 16, 2025, 12:41 AM IST
15ಕೆಎಂಎನ್ ಡಿ22 | Kannada Prabha

ಸಾರಾಂಶ

ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ದೇಶದ ಪ್ರಧಾನಿ ಸೇರಿದಂತೆ ಬಡವನಿಗೂ ಒಂದೇ ಮತ ಎಂಬ ಕಾನೂನು ಜಾರಿಯಾಗಿದೆ. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸಮಾನತೆ, ಸಹೋದರತ್ವ ಹಾಗೂ ಭ್ರಾತುತ್ವವನ್ನು ಸಾರಿದರು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಿಂದ ದೇಶದ ಪ್ರಧಾನಿ ಸೇರಿದಂತೆ ಬಡವನಿಗೂ ಒಂದೇ ಮತ ಎಂಬ ಕಾನೂನು ಜಾರಿಯಾಗಿದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಮೆಮೋರಿಯಲ್ ಎಜುಕೇಷನ್ ಅಸೋಸಿಯೇಷನ್ ನ ಉಪಾಧ್ಯಕ್ಷ ಟಿ.ಎಸ್.ಹಾಳಪ್ಪ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರ ಬಳಿ ಇರುವ ಡಾ.ಬಿ.ಆರ್.ಅಂಬೇಡ್ಕರ್ ಮೆಮೋರಿಯಲ್ ಎಜುಕೇಷನ್ ಅಸೋಸಿಯೇಷನ್ ವತಿಯಿಂದ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿಯಲ್ಲಿ ಮಾತನಾಡಿ, ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಸಮಾನತೆ, ಸಹೋದರತ್ವ ಹಾಗೂ ಭ್ರಾತುತ್ವವನ್ನು ಸಾರಿದರು ಎಂದರು.

ವಕೀಲ, ದಲಿತ ಮುಖಂಡ ಕಣಿವೆ ಯೋಗೇಶ್ ಮಾತನಾಡಿ, ನಮ್ಮನ್ನಾಳುವ ಸರ್ಕಾರಗಳು ದಲಿತರನ್ನು ಓಟು ಬ್ಯಾಂಕ್ ಆಗಿ ಮಾಡಿಕೊಳ್ಳುವ ಮೂಲಕ ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಗಾಳಿಗೆ ತೂರುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ವೇಳೆ ಅಸೋಸಿಯೇಷನ್ ಅಧ್ಯಕ್ಷ ಅಂದಾನಯ್ಯ, ದಸಂಸ ಹಿರಿಯ ಮುಖಂಡ ಬ್ಯಾಡರಹಳ್ಳಿ ಪ್ರಕಾಶ್ ಮಾತನಾಡಿದರು.

ಮುಖಂಡರಾದ ಎಸ್.ಟಿ.ದೊಡ್ಡವೆಂಕಟಯ್ಯ, ಪಾಪಯ್ಯ, ವರದಯ್ಯ, ಲಾಲ್ ಬಹದ್ದೂರ್ ಶಾಸ್ತ್ರಿ, ಜಿ.ಬಿ.ಸುರೇಶ್, ಜಕ್ಕನಹಳ್ಳಿ ಕುಮಾರ್, ವೆಂಕಟೇಶ್, ಹನುಮಯ್ಯ, ಆನುವಾಳು ಸುರೇಶ್, ಕುಮಾರಸ್ವಾಮಿ, ಶಂಭೂನಹಳ್ಳಿ ರವಿಕುಮಾರ್, ಗುಮ್ಮನಹಳ್ಳಿ ರಮೇಶ್, ಎಂ.ಬೆಟ್ಟಹಳ್ಳಿ ಮಂಜುನಾಥ್, ಬೇವಿನಕುಪ್ಪೆ ದೇವರಾಜು, ಬನ್ನಂಗಾಡಿ ಯೋಗೇಶ್, ಗಂಗಾಧರ್ ಇತರರಿದ್ದರು.

ಅಂಬೇಡ್ಕರ್ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ

ಮದ್ದೂರು:

ಪಟ್ಟಣದ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಕಚೇರಿಯಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ 134ನೇ ಜನ್ಮ ದಿನಾಚರಣೆಯಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಚನೆ ಮಾಡಿದರು.

ಸಾಹಿತಿ ಶಿಕ್ಷಕ ಬಿ.ವಿ.ನಾರಾಯಣ ಮಾತನಾಡಿ, ಅಂಬೇಡ್ಕರ್ ದೇಶಕ್ಕೆ ಸರ್ವರಿಗೂ ಸಮಪಾಲು ಎಂಬ ತತ್ವದಡಿಯಲ್ಲಿ ಸಂವಿಧಾನ ನೀಡದ ಶ್ರೇಷ್ಠ ನಾಯಕರು. ಶಾಂತಿ ಸಂಕೇತ ಸಾರಿದ ಬೌದ್ಧ ಧರ್ಮ ಸ್ವೀಕರಿಸುವ ಮೂಲಕ ಹಿಂದೂವಾಗಿ ಹುಟ್ಟಿದ್ದೇನೆ ಹಿಂದೂವಾಗಿ ಸಾಯಲಾರೆ ಎಂದು ನುಡಿದರು ಎಂದರು.

ಪರಿಷತ್ ಜಿಲ್ಲಾ ಗೌರವಾಧ್ಯಕ್ಷ ಎಂ.ಸಿ.ಬಸವರಾಜು ಮಾತನಾಡಿ, ಡಾ.ಅಂಬೇಡ್ಕರ್ 20ನೇ ಶತಮಾನದಲ್ಲಿ ಹುಟ್ಟಿ ಬಂದು ಸಹೋದರತ್ವ, ಸಹಬಾಳ್ವೆ, ಸಮಾನತೆಯನ್ನು ಸಾರಿದ ಮಹಾ ಪುರುಷ. ಸಮಾಜಕ್ಕೆ ಪ್ರೀತಿ, ಕರುಣೆ,ವಿಶ್ವಾಸ,ನನ್ನು ಬಿತ್ತುವ ಬೌದ್ಧ ಧರ್ಮ ನನ್ನು ಅಪ್ಪಿಕೊಂಡರು ಎಂದರು.

ಈ ವೇಳೆ ಪರಿಷತ್ ಜಿಲ್ಲಾಧ್ಯಕ್ಷ ಸಿ.ಶಿವಲಿಂಗಯ್ಯ, ತಾಲೂಕು ಅಧ್ಯಕ್ಷ ಡಿ.ಸಿ.ಮಹೇಂದ್ರ, ಪ್ರಧಾನ ಕಾರ್ಯದರ್ಶಿ ಕೆ.ಟಿ.ಶಿವಕುಮಾರ್, ಉಪಾಧ್ಯಕ್ಷ ಎಂ.ಸಿ.ಶಿವರಾಜ್, ಅತಗೂರು ವೆಂಕಟಾಚಲಯ್ಯ, ಅಹಿಂದ ಸಂರಕ್ಷಣಾ ವೇದಿಕೆ ಸಂಘಟನಾ ಕಾರ್ಯದರ್ಶಿ ಶಶಿ ಕುಮಾರ್, ಜನಶಕ್ತಿ ಸಂಘಟನೆಯ ನಗರಕೆರೆ ಜಗದೀಶ್, ಉಪಾನ್ಯಾಸಕ ಪೃಥ್ವಿರಾಜ್, ಚಿಕ್ಕಣ್ಣ, ಚಾಮನಹಳ್ಳಿ ರಾಚಯ್ಯ, ಸಂತೋಷ್, ಬೂದಗುಪ್ಪೆ ಪುಟ್ಟ, ಪ್ರಸನ್ನ ಹಾಗೂ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ