-ನ್ಯಾ. ರಾಜು ಕೆ. ಶೇಡ್ಬಾಳ್ಕರ್ ಅಭಿಮತ । ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಯುವ ಸಂಸತ್ತು ಸಭೆಕನ್ನಡಪ್ರಭ ವಾರ್ತೆ ಸೊರಬ
ಡಾ. ರಾಜ್ ಕಲಾ ಮಂದಿರದಲ್ಲಿ ಶುಕ್ರವಾರ ತಾಲೂಕು ಆಡಳಿತ, ತಾ.ಪಂ, ಸಮಾಜ ಕಲ್ಯಾಣ ಇಲಾಖೆ, ಶಿಕ್ಷಣ ಇಲಾಖೆ, ಉನ್ನತ ಶಿಕ್ಷಣ ಇಲಾಖೆ ಹಾಗೂ ಕಾನೂನು ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಯುವ ಸಂಸತ್ತು ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾಪ್ರಭುತ್ವದ ನಿಜವಾದ ಶಕ್ತಿ ದೇಶದ ಸಂವಿಧಾನದಲ್ಲಿದೆ. ಪ್ರತಿಯೊಬ್ಬ ನಾಗರಿಕನ ಹಕ್ಕು, ಕರ್ತವ್ಯ ಮತ್ತು ಗೌರವಯುತ ಬದುಕಿಗೆ ಸಂವಿಧಾನವೇ ಭದ್ರ ಬುನಾದಿ. ಯುವಜನರು ಕೇವಲ ಶಿಕ್ಷಣ ಅಥವಾ ಉದ್ಯೋಗಕ್ಕೆ ಸೀಮಿತವಾಗದೆ ಸ್ವಾವಲಂಬಿ ಮತ್ತು ಜವಾಬ್ದಾರಿಯುತ ಜೀವನ ನಡೆಸಲು ಸಂವಿಧಾನ ನೀಡುವ ಸಮಾನತೆ, ಸ್ವಾತಂತ್ರ್ಯ ಹಾಗೂ ಭಾತೃತ್ವ ತತ್ವಗಳು ಅನಿವಾರ್ಯ. ದೇಶದ ಸರ್ವತೋಮುಖ ಪ್ರಗತಿ ಮತ್ತು ಭವಿಷ್ಯವು ಇಂದಿನ ಯುವ ಪೀಳಿಗೆಯ ಕೈಯಲ್ಲಿದ್ದು, ಸದೃಢ ಹಾಗೂ ಶಾಂತಿಯುತ ಸಮಾಜ ನಿರ್ಮಾಣಕ್ಕೆ ಯುವಜನತೆ ಸಂಕಲ್ಪ ಮಾಡಬೇಕಿದೆ ಎಂದರು.ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಜಯಶೀಲಗೌಡ ಮಾತನಾಡಿ, ಪರಿಶ್ರಮ ಮತ್ತು ಸಾಮರ್ಥ್ಯದ ಬಲದಿಂದ ಮಾತ್ರ ದೇಶ ಸಮಗ್ರ ಪ್ರಗತಿ ಸಾಧಿಸಲು ಸಾಧ್ಯ. ಆದ್ದರಿಂದ ಇಂದಿನ ಯುವಜನತೆ ಕ್ರಿಯಾಶೀಲತೆಯನ್ನು ಮೈಗೂಡಿಸಿಕೊಂಡು, ಪ್ರಾಮಾಣಿಕತೆಯ ಗುಣಗಳನ್ನು ಬೆಳೆಸಿಕೊಳ್ಳಬೇಕಾದ ತುರ್ತು ಅಗತ್ಯವಿದೆ ಎಂದರು.
ದೇಶಪ್ರೇಮ ಹಾಗೂ ರಾಷ್ಟ್ರದ ರಕ್ಷಣೆಯ ಮಹತ್ವವನ್ನು ಪ್ರತಿಯೊಬ್ಬ ನಾಗರಿಕನೂ ಅರಿಯಬೇಕು. ಯುವಜನರು ಗುಣಮಟ್ಟದ ಶಿಕ್ಷಣವನ್ನು ಪಡೆದು, ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ನಿಸ್ವಾರ್ಥ ದೇಶಸೇವೆಗೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕು ಎಂದರು.
..ಬಾಕ್ಸ್..
ಯುವ ಸಂಸತ್ ಸಭಾಧ್ಯಕ್ಷ ವಿಲಾಸ್ ಎಂ. ಭಟ್ ನೇತೃತ್ವದಲ್ಲಿ ಕಲಾಪ ಆರಂಭವಾಗಿ ಮುಖ್ಯಮಂತ್ರಿ ಹುದ್ದೆಯನ್ನು ಕೌಶಿಕ್. ಎನ್ ನೇತೃತ್ವ ವಹಿಸಿದ್ದರು. ವಿರೋಧ ಪಕ್ಷದ ನಾಯಕರಾಗಿ ಪವನ್, ಶ್ರೇಯಾ ಜವಾಬ್ದಾರಿ ನಿರ್ವಹಿಸಿದ್ದು, ಕಲಾಪದಲ್ಲಿ ಮನ್ವಿತ ಮಹಿಳೆಯರ ಮೇಲಿನ ಶೋಷಣೆ ಕುರಿತು ಮಾತನಾಡಿದರು. ಸ್ಥಳೀಯ ಹಾಗೂ ಸಾಮಾಜಿಕ ಸಮಸ್ಯೆಗಳಾದ ಮಂಗನಕಾಯಿಲೆ, ಮಹಿಳೆಯರ ಸುರಕ್ಷತೆ,. ಗ್ರಾಮೀಣ ನಿರುದ್ಯೋಗ ಮತ್ತು ಬರಗಾಲದ ಕುರಿತು ಯುವಕರು ಚರ್ಚಿಸಿರುವುದು ಶ್ಲಾಘನೀಯ..
ಫೋಟೊ:೩೦ಕೆಪಿಸೊರಬ-೦೨