ಕನ್ನಡಪ್ರಭ ವಾರ್ತೆ ಯಲಬುರ್ಗಾ
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಸಹಯೋಗದಲ್ಲಿ ನಡೆದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಸಂವಿಧಾನ ನಮ್ಮೆಲ್ಲರ ಜೀವನದ ಅವಿಭಾಜ್ಯ ಅಂಗವಾಗಿದೆ. ಈ ದೇಶದ ಕಾನೂನು ಮನುಷ್ಯನ ವ್ಯಕ್ತಿತ್ವಕ್ಕೆ ಗೌರವ ಘನತೆಗೆ ಚ್ಯುತಿ ಆಗದ ಹಾಗೆ ನೋಡಿಕೊಳ್ಳುತ್ತದೆ ಎಂದು ಹೇಳಿದರು.
ಮಾನವ ಹಕ್ಕುಗಳು ಎಲ್ಲರ ಘನತೆಯನ್ನು ಗುರುತಿಸುವ ಮತ್ತು ರಕ್ಷಿಸುವ ಮಾನದಂಡಗಳಾಗಿವೆ. ಮಾನವ ಹಕ್ಕುಗಳು ವೈಯಕ್ತಿಕ ಮಾನವರು ಸಮಾಜದಲ್ಲಿ ಮತ್ತು ಪರಸ್ಪರ ಹೇಗೆ ಬದುಕುತ್ತಾರೆ. ಹಾಗೇಯೇ ರಾಜ್ಯದೊಂದಿಗೆ ಅವರ ಸಂಬಂಧ ಮತ್ತು ರಾಜ್ಯವು ಅವರ ಕಡೆಗೆ ಹೊಂದಿರುವ ಬಾದ್ಯತೆಗಳನ್ನು ನಿಯಂತ್ರಿಸುತ್ತದೆ. ಯಾವುದೇ ಸರ್ಕಾರ, ಗುಂಪು ಅಥವಾ ವೈಯಕ್ತಿಕ ವ್ಯಕ್ತಿಗೆ ಇನ್ನೊಬ್ಬರ ಹಕ್ಕುಗಳನ್ನು ಉಲ್ಲಂಘಿಸುವ ಯಾವುದನ್ನೂ ಮಾಡಲು ಹಕ್ಕಿಲ್ಲ ಎಂದು ಹೇಳಿದರು.ಕಾಲೇಜಿನ ಪ್ರಾಚಾರ್ಯ ಶರಣಪ್ಪ ಬೇಲೇರಿ ಸಭೆ ಅಧ್ಯಕ್ಷತೆ ವಹಿಸಿ ಮತನಾಡಿ, ಎಲ್ಲಾ ಮಾನವರು ಮಾನವ ಹಕ್ಕುಗಳಿಗೆ ಅರ್ಹರಾಗಿದ್ದಾರೆ ಎಂದರು.
ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷ ಪ್ರಕಾಶ ಬೆಲೇರಿ, ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ, ಹಿರಿಯ ವಕೀಲರಾದ ಸಿ.ಎಸ್. ಬನ್ನಪ್ಪಗೌಡ್ರ. ಎಸ್.ಎನ್. ಶ್ಯಾಗೋಟಿ, ಪಿಎಸ್‌ಐ ವಿಜಯ ಪ್ರತಾಪ್, ನ್ಯಾಯಂಗ ಸಿಬ್ಬಂದಿ ರಾಘವೇಂದ್ರ ಕೋಳಿಹಾಳ ಹಾಗೂ ಉಪನ್ಯಾಸಕರಾದ ಬಸವರಾಜ ಹುಬ್ಬಳ್ಳಿ, ಸುಮಿತ್ರ, ವೀರಯ್ಯ ಕಾಡಿಗಿಮಠ, ಬೀರಪ್ಪ ಇತರರಿದ್ದರು. ಬಾಳಪ್ಪ ಹಡಪದ ವಂದಿಸಿದರು.