ಭಾವೈಕ್ಯತೆಯ ಬದುಕಿಗೆ ಸಂವಿಧಾನವೇ ಕಾರಣ: ತಾಪಂ ಇಒ

KannadaprabhaNewsNetwork |  
Published : Nov 27, 2025, 02:30 AM IST
ಮುಂಡಗೋಡ: ಬುಧವಾರ ಇಲ್ಲಿಯ ನಗರ ಸಭಾ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ನಡೆಯಿತು. ೨,೩) ಮೆರವಣಿಗೆ: ಇಲ್ಲಿಯ ಪ್ರವಾಸಿ ಮಂದಿರದಿಂದ ತೆರೆದ ವಾಹನದಲ್ಲಿ ಸಂವಿಧಾನ ಪೀಠಿಕೆ ಹಾಗೂ ಡಾ. ಬಿ.ಆರ್ ಅಂಬೇಡ್ಕರ ಅವರ ಭಾವಚಿತ್ರ ಮೆರವಣಿಗೆ ಹೊರಟು ಯಲ್ಲಾಪುರ ರಸ್ತೆ, ಬಸವನಬೀದಿ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಬಳಿಕ ನಗರ ಸಭಾಭವನ ಪ್ರವೇಶಿಸಿತು. | Kannada Prabha

ಸಾರಾಂಶ

ಸರ್ವರಿಗೂ ಸ್ವಾತಂತ್ರ್ಯವಾಗಿ ಬದುಕಲು ನಮ್ಮ ಸಂವಿಧಾನ ಅವಕಾಶ ಮಾಡಿ ಕೊಟ್ಟಿದೆ.

ಕನ್ನಡಪ್ರಭ ವಾರ್ತೆ ಮುಂಡಗೋಡ

ನಮ್ಮ ದೇಶದಲ್ಲಿ ಸಾಕಷ್ಟು ಭಾಷೆ, ಜಾತಿ, ಧರ್ಮಗಳಿದ್ದರೂ ಕೂಡ ಪ್ರತಿಯೊಬ್ಬರೂ ಯಾವುದೇ ಬೇಧ ಭಾವವಿಲ್ಲದೆ ನಿರ್ಭೀತಿ ಹಾಗೂ ಭಾವೈಕ್ಯತೆಯಿಂದ ಬದುಕಲು ನಮ್ಮ ಸಂವಿಧಾನವೇ ಕಾರಣವಾಗಿದೆ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಟಿ.ವೈ. ದಾಸನಕೊಪ್ಪ ಹೇಳಿದರು.

ಬುಧವಾರ ಇಲ್ಲಿಯ ನಗರಸಭಾ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ತಾಲೂಕು ಮಟ್ಟದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸರ್ವರಿಗೂ ಸ್ವಾತಂತ್ರ್ಯವಾಗಿ ಬದುಕಲು ನಮ್ಮ ಸಂವಿಧಾನ ಅವಕಾಶ ಮಾಡಿ ಕೊಟ್ಟಿದೆ. ಜಗತ್ತಿನ ವಿವಿಧ ದೇಶಗಳನ್ನು ಸುತ್ತಿ ಅದ್ಯಯನ ಮಾಡುವ ಮೂಲಕ ಒಳ್ಳೆಯ ಅಂಶಗಳನ್ನು ಆಯ್ಕೆ ಮಾಡಿಕೊಂಡು ನಮ್ಮ ಸಂವಿಧಾನ ರಚನೆ ಮಾಡಲಾಗಿದೆ. ಸಮಾನತೆ, ಸ್ವಾತಂತ್ರ್ಯ ಸೇರಿದಂತೆ ಎಲ್ಲ ರೀತಿಯ ಹಕ್ಕುಗಳನ್ನು ಸಂವಿಧಾನ ನಮಗೆ ಒದಗಿಸಿಕೊಟ್ಟಿದ್ದು, ಕೇವಲ ಹಕ್ಕುಗಳನ್ನು ಪಡೆಯವುದು ಮಾತ್ರವಲ್ಲ ನಮ್ಮ ಕರ್ತವ್ಯಗಳನ್ನು ಕೂಡ ಅರಿತುಕೊಳ್ಳಬೇಕು. ದೇಶದ ಅಭಿವೃದ್ದಿ, ಐಕ್ಯತೆ ಹಾಗೂ ಸಮಗ್ರತೆಗಾಗಿ ನಮ್ಮ ಹಕ್ಕುಗಳೊಂದಿಗೆ ಕರ್ತವ್ಯ ನಿರ್ವಹಿಸಬೇಕು. ರಾಷ್ಟ್ರಗೀತೆ, ರಾಷ್ಟ್ರ ದ್ವಜ ಹಾಗೂ ಪರಿಸರ ರಕ್ಷಣೆ ಹೀಗೆ ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಪ್ರತಿಯೊಬ್ಬರು ತಾವು ಮಾಡುವ ವೃತ್ತಿಯಲ್ಲಿ ಶ್ರೇಷ್ಟತೆಯನ್ನು ಸಾಧಿಸುವ ಮೂಲಕ ದೇಶದ ಪ್ರಗತಿಗೆ ತಮ್ಮದೆ ಆದ ಕೊಡುಗೆ ನೀಡಬೇಕು. ಯುವಪೀಳಿಗೆ ಯಾವುದೇ ರೀತಿ ದುಷ್ಚಟಗಳಿಗೆ ಬಲಿಯಾಗದೆ. ವಿದ್ಯಾಭ್ಯಾಸದಲ್ಲಿ ಶ್ರಮವಹಿಸಿ ಉತ್ತಮ ಪ್ರಜೆಯಾಗಿ ಹೊರಹೊಮ್ಮುವಂತೆ ಕರೆ ನೀಡಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರಸನ್ನಸಿಂಗ್ ಹಜೇರಿ ಉಪನ್ಯಾಸದ ಮೂಲಕ ಮಾತನಾಡಿ, ಸಾಕಷ್ಟು ಜನ ಮೇದಾವಿಗಳ ಶ್ರಮದ ಫಲವಾಗಿ ಜಗತ್ತಿಗೆ ಮಾದರಿಯಾದಂತಹ ಶ್ರೇಷ್ಟವಾದ ಸಂವಿಧಾನ ನಮಗೆ ದೊರೆತಿದೆ. ನಮ್ಮ ಭಾರತ ದೇಶದ ಭಾಷೆ ಹಾಗೂ ಸಂಸ್ಕೃತಿ ವಿಷಯಗಳಿಗೆ ಅನುಗುಣವಾಗಿ ಅಳೆದು ತೂಗಿ ರಚಿಸಲಾದ ಸಂವಿಧಾನ ನಮ್ಮದು ಎಂದರು.

ಮೆರವಣಿಗೆ:

ಇಲ್ಲಿಯ ಪ್ರವಾಸಿ ಮಂದಿರದಿಂದ ತೆರೆದ ವಾಹನದಲ್ಲಿ ಸಂವಿಧಾನ ಪೀಠಿಕೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್‌ ಅವರ ಭಾವಚಿತ್ರ ಮೆರವಣಿಗೆ ಹೊರಟು ಯಲ್ಲಾಪುರ ರಸ್ತೆ, ಬಸವನಬೀದಿ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಂಚರಿಸಿ ಬಳಿಕ ನಗರ ಸಭಾಭವನ ಪ್ರವೇಶಿಸಿತು.

ಈ ಸಂದರ್ಭ ತಹಸೀಲ್ದಾರ ಚಂದ್ರಶೇಖರ ಹೊಸಮನಿ, ಪಪಂ ಸದಸ್ಯ ಅಶೋಕ ಚಲವಾದಿ, ಬಿಜೆಪಿ ತಾಲೂಕಾಧ್ಯಕ್ಷ ಮಂಜುನಾಥ ಪಾಟೀಲ ಮುಂತಾದವರು ಮಾತನಾಡಿದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಬಾಳೇಶ ಸಿದ್ದಯ್ಯನವರ, ಪಂಚಾಯತ್ ರಾಜ್ ಇಲಾಖೆ ಎಇಇ ಪ್ರದೀಪ ಭಟ್ಟ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಕೃಷ್ಣ ಕುಳ್ಳೂರ, ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಸುಮಾ, ಗ್ರಾಮೀಣ ಕುಡಿಯುವ ನೀರು ಇಲಾಖೆ ಎಇಇ ರಾಜೇಶ್ವರಿ ಕದಂ, ಪಪಂ ಸಹಾಯಕ ಅಧಿಕಾರಿಪ್ರದೀಪ ಹೆಗಡೆ, ಪಶುಸಂಗೋಪನಾ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ ಹೆಗಡೆ, ಹಿರಿಯ ಮುಖಂಡ ಎನ್.ಡಿ. ಕಿತ್ತೂರ ಮುಂತಾದವರಿದ್ದರು. ಬಿಇಒ ಜಿ. ಸುಮಾ ಸ್ವಾಗತಿಸಿದರು. ಪಿ. ನಾಗೇಂದ್ರ ನಿರೂಪಿಸಿದರು. ಬಾಳೇಶ ಸಿದ್ದಯ್ಯನವರ ವಂದಿಸಿದರು.

PREV

Recommended Stories

ಡಿಕೆಶಿ ಭೇಟಿಯಾದ್ರೂ ಸಿದ್ದುಗೇ ನಮ್ಮ ಬೆಂಬಲ: ಜಾರಕಿಹೊಳಿ
2028ಕ್ಕೆ ಕಾಂಗ್ರೆಸ್‌ ಅಧಿಕಾರಕ್ಕೆ ತರಲು ಸತೀಶ್‌ ಜತೆ ಚರ್ಚೆ : ಡಿಕೆ