ನರಗುಂದ: ಭಾರತಕ್ಕೆ ಅಂಬೇಡ್ಕರ್ ಅವರು ನೀಡಿರುವ ಸಂವಿಧಾನವೇ ಶಕ್ತಿ, ಸಂವಿಧಾನವನ್ನು ರಕ್ಷಣೆ ಮಾಡಿ ಐಕ್ಯತೆಯಿಂದ ಬಾಳಬೇಕು ಎಂದು ಅಂಜುಮನ್ ಎ ಇಸ್ಲಾಂ ಸಂಸ್ಥೆ ಅಧ್ಯಕ್ಷ ಐ.ಪಿ. ಚಂದೂನರ ಹೇಳಿದರು.ಅವರು ಭಾನುವಾರ ಪಟ್ಟಣದ ಅಂಜುಮನ್ ಎ ಇಸ್ಲಾಂ ಸಂಸ್ಥೆ (ರಿ) ಆವರಣದಲ್ಲಿ 76 ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ಪಟ್ಟಣದ ಮುಸ್ಲಿಂ ಸಮುದಾಯಕ್ಕೆ ಅಂಜುಮನ್ ಶಾದಿ ಮಹಲ್ ಹಾಗೂ ಕಾರ್ಯಾಲಯ ಅವಶ್ಯವಿದ್ದು, ಮುಸ್ಲಿಂ ಸಮುದಾಯದ ನಾಗರಿಕರು ಸಂಸ್ಥೆಗೆ ಸಹಾಯ ಸಹಕಾರ ನೀಡಿದರೆ ಸಂಸ್ಥೆ ಇನ್ನಷ್ಟು ಅಭಿವೃದ್ಧಿಗೊಳ್ಳುತ್ತದೆ ಎಂದರು.
ಈ ಸಂದರ್ಭದಲ್ಲಿ ಅಂಜುಮನ್ ಎ ಇಸ್ಲಾಂ ಸಂಸ್ಥೆ ಉಪಾಧ್ಯಕ್ಷ ದಿವಾನ ಸಾಬ್ ಕಿಲ್ಲೆದಾರ, ಕಾರ್ಯದರ್ಶಿ ಅಬ್ದುಲಸಾಬ್ ಮುಲ್ಲಾ, ಖಜಾಂಜಿ ರಸೂಲ ಸಾಬ ದೌಲತ್ದಾರ, ಅಮ್ಜದ ಅಹಮದ ಖಾಜಿ, ದಸ್ತಗಿರ ಸಾಬ್ ನಾಲಬಂದ, ಭಾಷೆಸಾಬ್ ಪಠಾಣ, ಮಾಬೂಸಾಬ್ ಹಂಪಿಹೊಳಿ, ಬಾಬಾಜಾನ ಪಠಾಣ, ಮಹಮ್ಮದ ನಾಯ್ಕರ, ಆಯುಬ ಖಾನ್ ಪಠಾಣ, ರಿಯಾಜ್ ಅಹ್ಮದ ನಾಲ್ಬಂದ, ಸಿಕಂದರ ಜಕಾತಿ, ಕಾಶೀಂ ಖಾನ ಪಠಾಣ, ಹಜರತ ಅಲಿ ನಾಲ್ಬಂದ, ಕೆ.ಬಿ.ಮಾಲ್ದಾರ, ಇಮಾಮಸಾಬ ಅತ್ತಾರ, ಕಲಂದರ ಸಕಲಿ, ಫಾರೂಕ ಮಾಜೀದಮನಿ, ಅಯಾಜ್ ಪಠಾಣ್, ದಾವೂದ ಖಾನ ಪಠಾಣ, ಬುಡ್ಡಾ, ಮಾಬುಲಿ ನವಲಗುಂದ, ಜಾವಿದ್ ಸಕಲಿ, ಅರಬಾಜ ವಟ್ನಾಳ ಇದ್ದರು.