ಕನ್ನಡಪ್ರಭ ವಾರ್ತೆ ಹೂವಿನಹಡಗಲಿ
ಇಲ್ಲಿನ ತೇರು ಹನುಮಪ್ಪದ ಹತ್ತಿರದ ವೇದಿಕೆಯಲ್ಲಿ ತಾಲೂಕು ಆಡಳಿತ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಂ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಸಾಮಾಜಿಕ ಸಮಾನತೆಯ ಹರಿಕಾರರಾದ ಅಂಬೇಡ್ಕರ್ ಕೇವಲ ದಲಿತರು, ಹಿಂದುಳಿದ ಜನಾಂಗಕ್ಕೆ ಮಾತ್ರ ಮೀಸಲಾಗಿಲ್ಲ, ಬದಲಾಗಿ ಅವರು ಮನುಕುಲಕ್ಕೆ ಆದರ್ಶಪ್ರಾಯವಾಗಿದ್ದಾರೆ. ದೇಶದಲ್ಲಿ ಎಲ್ಲ ಧರ್ಮ, ಜಾತಿಯವರು ಐಕ್ಯತೆ, ಸಾಮರಸ್ಯದಿಂದ ಬದುಕಲು ಸಂವಿಧಾನದಲ್ಲಿ ಅವರು ಅಳವಡಿಸಿರುವ ಮೌಲ್ಯಗಳು ಕಾರಣವಾಗಿವೆ ಎಂದರು.ದಲಿತ ಮುಖಂಡ ಕೆ.ಪುತ್ರೇಶ ಮಾತನಾಡಿ, ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆ, ದಶಕಗಳ ಕಾಲ ಜಾಲರಿಯಲ್ಲಿ ಇಟ್ಟಿದ್ದರು. ಅಂಬೇಡ್ಕರ್ ಪ್ರತಿಮೆಯನ್ನು ಬಂಧಮುಕ್ತಗೊಳಿಸಿ, ₹1 ಕೋಟಿ ವೆಚ್ಚದಲ್ಲಿ ಹೊಸ ಪ್ರತಿಮೆ ನಿರ್ಮಾಣಕ್ಕೆ ಯೋಜನೆ ರೂಪಿಸಿರುವ ಶಾಸಕರಿಗೆ ಸಮಾಜದ ಬೆಂಬಲ ಸದಾ ಇರುತ್ತದೆ ಎಂದರು.
ಪುರಸಭೆ ಅಧ್ಯಕ್ಷೆ ಗಂಟಿ ಜಮಾಲ್ ಬೀ, ತಹಸೀಲ್ದಾರ್ ಜಿ. ಸಂತೋಷಕುಮಾರ್, ತಾಪಂ ಇಒ ಎಂ. ಉಮೇಶ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಉಪ ವಿಭಾಗದ ಎಇಇ ಅಂಬೇಡ್ಕರ್ ಸನಗುಂದ, ಮುಖಂಡರಾದ ಎಂ.ಪರಮೇಶ್ವರಪ್ಪ, ಜೆ.ಶಿವರಾಜ, ಗುಡದಯ್ಯ, ಪಿ. ನಿಂಗಪ್ಪ, ಜೆ.ದುರುಗಮ್ಮ, ಪಿ.ವಿಜಯಕುಮಾರ್, ಶಿವಪುರ ಸುರೇಶ, ಶ್ರೀಧರನಾಯ್ಕ ಇತರರಿದ್ದರು.
ಪಟ್ಟಣದ ಪೊಲೀಸ್ ಠಾಣೆಯ ಹತ್ತಿರದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆಯನ್ನು ಕಬ್ಬಿಣ ಜಾಲರಿ ಬಂಧ ಮುಕ್ತಗೊಳಿಸಿ, ಉತ್ತಮ ರೀತಿಯಲ್ಲಿ ಎತ್ತರದ ಕಂಚಿನ ಪುತ್ಥಳಿ ಅನಾವರಣಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಶಾಸಕ ಕೃಷ್ಣನಾಯ್ಕ ಹೇಳಿದರು. ಪ್ರತಿಮೆ ಬಂಧಮುಕ್ತಗೊಳಿಸುವ ಸಂಕಲ್ಪದೊಂದಿಗೆ ನೀಲನಕ್ಷೆ ತಯಾರಿಸಿದ್ದೇನೆ ಎಂದರು.