ಧಾರವಾಡ:
ನಗರದ ಜಕಣಿ ಬಾವಿ ಬಳಿ ಇರುವ ಖಿಲಾಫತ್ ಹೋರಾಟಗಾರರ ಗೌರವಾರ್ಥ ಸ್ಥಾಪಿಸಿರುವ ಹುತಾತ್ಮರ ಸ್ಮಾರಕಕ್ಕೆ ಸೋಮವಾರ ಪುಷ್ಪ ನಮನ ಸಲ್ಲಿಸಿದ ಅವರು, ಇತಿಹಾಸದ ಅರಿವಿಲ್ಲದೆ, ಉತ್ತಮ ಭವಿಷ್ಯ ಕಟ್ಟವುದು ಕಷ್ಟಸಾಧ್ಯ ಎಂದರು.
ವಿಶೇಷವಾಗಿ ಯುವ ಸಮೂಹ ಮತ್ತು ಮಕ್ಕಳಿಗೆ ಸ್ವಾತಂತ್ರ‍್ಯ ಹೋರಾಟಗಾರರು, ರಾಷ್ಟ್ರ ನಾಯಕರ ಬಗ್ಗೆ ಅರಿವು ಮೂಡಿಸಬೇಕಿದೆ ಎಂದ ಅವರು, ಜಿಲ್ಲೆಯ ಅನೇಕ ಗ್ರಾಮ ಮತ್ತು ಪಟ್ಟಣಗಳಲ್ಲಿ ಸ್ವಾತಂತ್ರ‍್ಯದ ಹೋರಾಟಗಳು ನಡೆದಿವೆ. ಅನೇಕರು ಹೋರಾಟದಲ್ಲಿ ಹುತಾತ್ಮರಾಗಿದ್ದಾರೆ. ಈ ಕುರಿತು ಬೆಳಕು ಚಲ್ಲುವ ಒಂದು ದಿನದ ಅರ್ಥಪೂರ್ಣ ಕಾರ್ಯಕ್ರಮವನ್ನು ಜಿಲ್ಲಾಡಳಿತದಿಂದ ಆಯೋಜಿಸಲಾಗುವುದು ಎಂದು ಹೇಳಿದರು.ಥ್ಯಾಕರೆ ಸಮಾಧಿ, ಗಾನವಿಧೂಷಿ ಗಂಗೂಬಾಯಿ ಹಾನಗಲ್ಲ ಹುಟ್ಟಿದ ಮನೆ, ದ.ರಾ. ಬೇಂದ್ರೆ ಅವರ ಕುರಿತ ವಿಷಯಗಳು ಧಾರವಾಡದ ಹೆಮ್ಮೆಯ ಸಂಗತಿಗಳು. ಇವುಗಳನ್ನು ರಕ್ಷಿಸಿ, ನಮ್ಮವರಿಗೆ ಪ್ರಚುರಪಡಿಸಿ ಹೆಮ್ಮೆ, ಅಭಿಮಾನ ಮೂಡಿಸುವುದು ನಮ್ಮ ಕರ್ತವ್ಯ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಂಯೋಜಕ ಉದಯ ಯಂಡಿಗೇರಿ ಸ್ವಾಗತಿಸಿದರು. ಕರ್ನಾಟಕ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಪ್ರಾಸ್ತಾವಿಕ ಮಾತನಾಡಿದರು. ಹಿರಿಯ ವರ್ತಕ ರವೀಂದ್ರ ಆಕಳವಾಡಿ, ಶಂಕರ ಕುಂಬಿ, ಚಂದ್ರಶೇಖರ ಅಮ್ಮಿನಬಾವಿ, ಪೊಲೀಸ್ ಇನ್‌ಸ್ಪೆಕ್ಟರ್ ಎನ್.ಸಿ. ಕಾಡದೇವರಮಠ, ಮಹಾಂತೇಶ ಪಟ್ಟಣಶೆಟ್ಟಿ, ಕಿರಣ ತೂಗ್ಗಿ, ವಿದೇಶಿ ಕೆಲಗೇರಿ, ಶಿಕ್ಷಕರಾದ ಭೀಮಣ್ಣ ಮಲ್ಲಿಗೆ, ಶಾಂತಾ ಹಂಚಿನಮನಿ, ಶಾಮರಾವ ಕುಲಕರ್ಣಿ ಮತ್ತು ಆದರ್ಶ ಬಾಲಿಕಾ ಹಾಗೂ ನಿವೇದಿತಾ ಶಾಲೆಯ ಮಕ್ಕಳು, ಸಾರ್ವಜನಿಕರು ಇದ್ದರು.