ಮೈಸೂರಿನ ಕೀರ್ತಿಗೆ ಗಣಪತಿ ಸಚ್ಚಿದಾನಂದ ಆಶ್ರಮದ ಕೊಡುಗೆ ಅನನ್ಯ

KannadaprabhaNewsNetwork |  
Published : Jun 19, 2025, 11:51 PM IST
42 | Kannada Prabha

ಸಾರಾಂಶ

ಮೈಸೂರು: ಆಧ್ಯಾತ್ಮಿಕ ಕ್ಷೇತ್ರದ ಜತೆಗೆ ಪರಿಸರ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೈಸೂರಿನ ಕೀರ್ತಿ ಹೆಚ್ಚಿಸಿದೆ ಎಂದು ಮಾಜಿ ಮೇಯರ್‌ಸಂದೇಶ್ ಸ್ವಾಮಿ ತಿಳಿಸಿದ್ದಾರೆ.

ಮೈಸೂರು: ಆಧ್ಯಾತ್ಮಿಕ ಕ್ಷೇತ್ರದ ಜತೆಗೆ ಪರಿಸರ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಸೇವೆ ಸಲ್ಲಿಸುತ್ತಿರುವ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮವು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೈಸೂರಿನ ಕೀರ್ತಿ ಹೆಚ್ಚಿಸಿದೆ ಎಂದು ಮಾಜಿ ಮೇಯರ್‌ಸಂದೇಶ್ ಸ್ವಾಮಿ ತಿಳಿಸಿದ್ದಾರೆ.

ಜಾಗತಿಕ ಪರಿಸರ ಸಮತೋಲನ ಹಾಗೂ ವಿಶ್ವ ಶಾಂತಿಗಾಗಿ ಹನ್ನೊಂದು ದಿನಗಳ ಕಾಲ ದತ್ತಪೀಠದಲ್ಲಿ ಏರ್ಪಡಿಸಿದ್ದ ವನದುರ್ಗಾ ವೃಕ್ಷ ಶಾಂತಿ ಮಹಾಯಜ್ಞವು ಅಪರೂಪದ್ದಾಗಿತ್ತು. ಬೃಹತ್ ಹೋಮಕುಂಡದಲ್ಲಿ ಪರಿಸರ ಉಳಿವಿಗಾಗಿ ನಡೆಸಿದ ಈ ಮಹಾಯಾಗವು ಒಂದು ದಾಖಲೆಯ ಸಂಗತಿ. ಈ ವೇಳೆ ಬೋನ್ಸಾಯ್ ಸಸ್ಯಗಳನ್ನು ಸಂಗ್ರಹಿಸುವಲ್ಲಿ ಗಿನ್ನಿಸ್ ಪುರಸ್ಕಾರಕ್ಕೆ ಗಣಪತಿ ಸಚ್ಚಿದಾನಂದ ಶ್ರೀಗಳು ಪಾತ್ರವಾಗಿ ವಿಶ್ವ ದಾಖಲೆ ಮಾಡಿರುವುದು ಹೆಮ್ಮಯ ಸಂಗತಿ. ಇದು ಪರಿಸರದ ರಕ್ಷಣೆಗೂ ಅಮೂಲ್ಯ ಕೊಡುಗೆ ನೀಡಿದಂತಾಗಿದೆ. ಅಲ್ಲದೆ ಆಶ್ರಮದ ಆವರಣದಲ್ಲಿ ಗಿಡಮೂಲಿಕೆ ಸೇರಿದಂತೆ ಅಪಾರ ಮರಗಿಡಗಳನ್ನು ಬೆಳಸಿ ಹಾಗೂ ಪಕ್ಷಿಗಳನ್ನು ಪೋಷಿಸಿ ಮುಂದಿನ ಪೀಳಿಗೆಗೆ ಕೊಡುಗೆ ನೀಡಿರುವ ಪೂಜ್ಯ ಶ್ರೀಗಳ ಸೇವೆ ಸ್ಮರಣೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಂಗೀತ ರಾಗವು ರೋಗವನ್ನು ಗುಣ ಪಡಿಸಬಲ್ಲದು ಎಂಬುದನ್ನು ಜಗತ್ತಿಗೆ ಸಾರುತ್ತಿರುವ ಗಣಪತಿ ಸಚ್ಚಿದಾನಂದ ಶ್ರೀಗಳು, ಸ್ವತಃ ಗಾಯಕರಾಗಿ ನೂರಾರು ಭಕ್ತಿಗೀತೆಗಳನ್ನು ಹಾಗೂ ಭಜನೆಗಳನ್ನು ಹಾಡಿದ್ದಾರೆ. ದೇಶ ವಿದೇಶದ ನಾನಾ ಭಾಗಗಳಲ್ಲಿ ಸಂಗೀತ ಕಚೇರಿ ನಡೆಸಿಕೊಟ್ಟಿರುವುದು ಗಮನಾರ್ಹ. ನಾದ ಮಂಟಪ ನಿರ್ಮಿಸಿರುವುದು ಶ್ರೀಗಳ ಸಂಗೀತ ಪ್ರೇಮಕ್ಕೆ ಸಾಕ್ಷಿ ಎಂದು ಅವರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!