ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
೬೮ನೇ ವಿಮಾ ಸಪ್ತಾಹದ ಅಂಗವಾಗಿ ಪಟ್ಟಣದ ಜೀವ ವಿಮಾ ಶಾಖಾ ಕಚೇರಿ ವತಿಯಿಂದ ಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸೇರಿ ಬೈಕ್ ಜಾಥಾ ಹಮ್ಮಿಕೊಂಡಿದ್ದರು.ಪಟ್ಟಣದ ಶಾಖಾ ಕಚೇರಿಯಿಂದ ಹೊರಟ ಬೈಕ್ ಜಾಥಾ ಧಾನಲಕ್ಷ್ಮಿ ಚಿತ್ರಮಂದಿರ, ಮೈಸೂರು ರಸ್ತೆ, ಹಾಗೂ ಎಪಿಎಂಸಿ ತಲುಪಿ ನಂತರ ಕೆ.ಆರ್. ವೃತ್ತ ತಲುಪಿ ನವೋದಯ ವೃತ್ತದ ಮೂಲಕ ಶಾಖಾ ಕಚೇರಿ ಬಳಿ ಬಂದರು.ಬೈಕ್ ಜಾಥಾವನ್ನು ಉದ್ದೇಶಿಸಿ ಮಾತನಾಡಿದ ಶಾಖಾಧಿಕಾರಿ ಸಿ.ಜೆ. ರಾಘವೇಂದ್ರ, ದೇಶದ ಅಭಿವೃದ್ಧಿಯಲ್ಲಿ ಎಲ್‌ಐಸಿಯ ಕೊಡುಗೆ ಅಪಾರವಾಗಿದೆ. ವಿಶ್ವಾಸಾರ್ಹತೆ ಉಳ್ಳ ಏಕೈಕ ಸಂಸ್ಥೆ ಜೀವವಿಮಾ ಸಂಸ್ಥೆಯಾಗಿದ್ದು. ದೇಶದ ಎಲ್ಲಾ ಪಟ್ಟಣ ಹಾಗೂ ಹಳ್ಳಿಗಳಲ್ಲೂ ಕೂಡ ನಂಬಿಕೆಯನ್ನು ಉಳಿಸಿಕೊಂಡಿದೆ. ನಮ್ಮ ವಿಮಾ ಪ್ರತಿನಿಧಿಗಳು ಕೂಡ ಸೈನಿಕರಂತೆ ಕೆಲಸ ನಿರ್ವಹಿಸಿ ಸೇವೆ ಸಲ್ಲಿಸುತ್ತಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಏಳು ದಿನಗಳ ಕಾಲ ವಿಮಾ ಸಪ್ತಾಹವನ್ನು ಆಚರಿಸುತ್ತೇವೆ. ೬೮ ವಸಂತಗಳನ್ನು ತುಂಬಿರುವ ಜೀವ ವಿಮಾ ಸಂಸ್ಥೆ ಹಾಗೂ ವಿಮಾ ಪ್ರತಿನಿಧಿಗಳ ಒಕ್ಕೂಟ ಕೂಡ ೬೦ ವಸಂತವನ್ನು ತುಂಬಿರುವುದು ಸಂತಸದ ವಿಚಾರ ಎಂದು ತಿಳಿಸಿದರು.
ಮೈಸೂರು ವಿಭಾಗೀಯ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ವಿ.ಜಿ. ಅಶೋಕ್ ಮಾತನಾಡುತ್ತಾ ನಮ್ಮ ಸಂಸ್ಥೆಯಲ್ಲಿ ದೇಶದಾದ್ಯಂತ ೧೪ ಲಕ್ಷ ಪ್ರತಿನಿಧಿಗಳಿದ್ದು ಜೀವ ವಿಮಾ ಸಂಸ್ಥೆಗಳಲ್ಲಿಯೇ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿದೆ. ೧ ಲಕ್ಷ ನೌಕರರನ್ನ ಹೊಂದಿದ್ದು ಈ ವರ್ಷ ಭಾರತ ಸರ್ಕಾರಕ್ಕೆ ೩೭೦೦ ಕೋಟಿ ರು.ಗಳನ್ನು ಡಿವಿಡೆಂಟ್ ರೂಪದಲ್ಲಿ ನೀಡಿದ್ದು ಬಡವರಿಗೆ ರೈತರಿಗೆ ನೆರವಾಗಿದೆ ಎಂದರು.ನಂತರ ಶಾಖಾ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿವೃದ್ಧಿ ಅಧಿಕಾರಿಗಳಾದ ಬಿ. ಎಸ್. ಜಗದೀಶ್, ಎಸ್ ಪಿ ಕುಮಾರ್, ಬಿ.ಟಿ. ರಘು, ಆರ್.ಎಸ್ ಪ್ರಸಾದ್, ಕೆ.ಟಿ. ಪ್ರಮೋದ್ ಕುಮಾರ, ಎಲ್. ಕೆ. ಪ್ರಕಾಶ್, ಚೇತನ್, ಪ್ರವೀಣ್ ಕುಮಾರ್ ಇವರುಗಳಿಗೆ ಸನ್ಮಾನಿಸಲಾಯಿತು. ಜೀವ ವಿಮಾ ಪ್ರತಿನಿಧಿಗಳಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಉಪ ಶಾಖಾಧಿಕಾರಿ ವಿ. ಸೋಮೇಶ್ ಹಾಗೂ ಎಲ್ಲಾ ಅಧಿಕಾರಿಗಳ ತಂಡ, ಚನ್ನರಾಯಪಟ್ಟಣ ನಿಮ್ಮ ಪ್ರತಿ ನಿಧಿಗಳ ಒಕ್ಕೂಟದ ಅಧ್ಯಕ್ಷ ಕೆ ಆರ್ ವಾಸುದೇವ, ಉಪಾಧ್ಯಕ್ಷ ಜಿ. ರಾಮಕೃಷ್ಣಗೌಡ, ಕಾರ್ಯದರ್ಶಿ ಎ.ಬಿ. ರುದ್ರೇಶ್, ಖಜಾಂಚಿ ಅರುಣ್ ಕುಮಾರ್ ಹಾಗೂ ನಿರ್ದೇಶಕರು ಹಿರಿಯ ಪ್ರತಿನಿಧಿಗಳು ಕಿರಿಯ ಪ್ರತಿನಿಧಿಗಳು ಮಹಿಳಾ ಪ್ರತಿನಿಧಿಗಳು ಭಾಗವಹಿಸಿದ್ದರು.