ಕನಕಪುರ: ಭೂಮಂಡಲದಲ್ಲಿ ರಾಕ್ಷಸರ ಉಪಟಳವನ್ನು ತಾಳಲಾರದೆ ಋಷಿಮುನಿಗಳು ದೇವಾನುದೇವತೆಗಳ ಬೇಡಿಕೆಯಂತೆ ಕ್ಷತ್ರಿಯರು ಮಾಡಿದ ಯಾಗದ ಅಗ್ನಿಕುಂಡದಲ್ಲಿ ಜನಿಸಿದವರು ಅಗ್ನಿಬನ್ನಿರಾಯಸ್ವಾಮಿ ಎಂದು ತಿಗಳ ಸಮಾಜದ ಮುಖಂಡ ಶ್ರೀನಿವಾಸ್ ತಿಳಿಸಿದರು.
ಧಮ್ಮದೀವಿಗೆ ಟ್ರಸ್ಟ್ ಮಲ್ಲಿಕಾರ್ಜುನ್ ಮಾತನಾಡಿ, ಐತಿಹಾಸಿಕ, ಪೌರಾಣಿಕ ಹಾಗೂ ಚರಿತ್ರಗಳಲ್ಲಿ ಉಲ್ಲೇಖಸಿದ್ದನ್ನು ನೋಡಿ ಹೇಳುವುದಾದರೆ ಮಹಾಭಾರತ ಸೇರಿದಂತೆ ಹಲವು ಪುರಾಣಗಳಲ್ಲಿ ಹೇಳುವುದಾದರೆ ತಿಗಳ ಸಮುದಾಯ ಈ ದೇಶಕ್ಕೆ ಮಹಾನ್ ಕೊಡುಗೆ ನೀಡಿದೆ ಎಂದರು.
ಬೆಂಗಳೂರಿನಲ್ಲಿ ವಿಶ್ವ ಪರಂಪರಾಗತ ಕರಗ ಮಹೋತ್ಸವ ಪ್ರಾರಂಭಿಸಿ ನಾಡಪ್ರಭು ಕೆಂಪೇಗೌಡರು ದ್ರೌಪತಮ್ಮ ಕರಗ ಮಹೋತ್ಸವ ಕಟ್ಟಿ ತಿಗಳರ ಪೇಟೆಯನ್ವು ಕಟ್ಟಿ ಬೆಂಗಳೂರು ಮಹಾನಗರದ ಮುಖ್ಯ ಕೇಂದ್ರದಲ್ಲಿ ಅವರ ಸಮುದಾಯವನ್ನು ಮುಂಚೂಣಿಗೆ ತರುವ ಕೆಲಸ ಮಾಡಿದ್ದು ಅವರ ಸಾಧನೆ ಹಾಗೂ ಜನಪರ ಕಾರ್ಯಗಳನ್ನು ತಿಳಿಸುವ ಕೆಲಸ ನಾಡಿನ ಇತಿಹಾಸಕಾರರು ಮಾಡಬೇಕಾಗಿದೆ ಎಂದರು.ಕಸಾಪ ಅಧ್ಯಕ್ಷ ಶಿವನಹಳ್ಳಿ ಶಿವಲಿಂಗಯ್ಯ ಮಾತನಾಡಿ, ಸುಸ್ಥಿರ ಸಮಾಜ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ ಸಮಾಜ ಇಂದು ರಾಜಕೀಯ, ಸಾಮಾಜಿಕ, ಆರ್ಥಿಕ ಅಸ್ಥಿರತೆಯಿಂದ ನಲುಗುತ್ತಿದೆ. ಇದಕ್ಕೆ ಕಾರಣ ಸಮುದಾಯದಲ್ಲಿ ಸಂಘಟನೆಯ ಕೊರತೆ. ಸಮುದಾಯದ ಭೌತಿಕ ಅಸಮಾನತೆಯನ್ನು ತೊಡೆದುಹಾಕಲು ಸಂಘಟನೆಯಿಂದ ಮಾತ್ರ ಸಾಧ್ಯವಾಗಲಿದ್ದು ರಾಜ್ಯದಲ್ಲಿ ಸುಮಾರು 40 ಲಕ್ಷಕ್ಕೂ ಅಧಿಕ ಜನರಿರುವ ಈ ಸಮುದಾಯ ರಾಜ್ಯದ ಸುಮಾರು 70 ಕ್ಷೇತ್ರಗಳಲ್ಲಿ ನಿರ್ಣಾಯಕರಾಗಿರುವುದು ಗಮನಾರ್ಹ. ಅಂತಹ ಸಮುದಾಯ ರಾಜಕೀಯ ಅಸಮಾನತೆಯಿಂದ ನರಳುತ್ತಿರುವುದು ವಿಪರ್ಯಾಸ ಎಂದರು.
(ಫೋಟೋ ಕ್ಯಾಫ್ಷನ್)