ರಾಜ್ಯಕ್ಕೆ ಟೀಕಿನಮಠದ ಕೊಡುಗೆ ಅಪಾರ

KannadaprabhaNewsNetwork |  
Published : Feb 06, 2026, 04:15 AM IST
(ಫೋಟೊಬಿಕೆಟಿ7,  ಷಟ್ಸ್ಥಳ ಧ್ವಜಾರೋಹಣ ಮೂಲಕ ಧಾರ್ಮಿಕ ಕಾರ್ಯಗಳಿಗೆ ಚಾಲನೆ.) | Kannada Prabha

ಸಾರಾಂಶ

ರಾಷ್ಟ್ರಕಾರ್ಯಕ್ಕೆ ರಾಷ್ಟ್ರಧ್ವಜ, ಧರ್ಮಕಾರ್ಯಕ್ಕೆ ಧರ್ಮ ಧ್ವಜಾರೋಹಣ ಸಂಪ್ರದಾಯವಾಗಿದ್ದು, ರಾಜ್ಯಕ್ಕೆ ಟೀಕಿನಮಠದ ಕೊಡುಗೆ ಅಪಾರವಾಗಿದೆ ಎಂದು ಬೆಳಗಾವಿ ಕಾರಂಜಿಮಠ ಗುರುಸಿದ್ದಮಹಾಸ್ವಾಮಿಗಳು ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ರಾಷ್ಟ್ರಕಾರ್ಯಕ್ಕೆ ರಾಷ್ಟ್ರಧ್ವಜ, ಧರ್ಮಕಾರ್ಯಕ್ಕೆ ಧರ್ಮ ಧ್ವಜಾರೋಹಣ ಸಂಪ್ರದಾಯವಾಗಿದ್ದು, ರಾಜ್ಯಕ್ಕೆ ಟೀಕಿನಮಠದ ಕೊಡುಗೆ ಅಪಾರವಾಗಿದೆ ಎಂದು ಬೆಳಗಾವಿ ಕಾರಂಜಿಮಠ ಗುರುಸಿದ್ದಮಹಾಸ್ವಾಮಿಗಳು ಹೇಳಿದರು.

ನಗರ ಚರಂತಿಮಠ ಶಿವಾನುಭವ ಮಂಟಪದ ಆವರಣದಲ್ಲಿ ಗುರುವಾರ ಷಟಸ್ಥಳ ಧ್ವಜಾರೋಹಣ ಮಾಡುವ ಮೂಲಕ ಟೀಕಿನಮಠದ ನೂತನ ಶ್ರೀಗಳ ಚರಪಟ್ಟಾಧಿಕಾರ ಮಹೋತ್ಸವದ ಧಾರ್ಮಿಕ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದರು. ರಾಷ್ಟ್ರದ ಕಾರ್ಯಕ್ಕೆ ರಾಷ್ಟ್ರಧ್ವಜ, ಧಾರ್ಮಿಕ ಕಾರ್ಯಕ್ಕೆ ಧರ್ಮ ಧ್ವಜ, ಈ ರಾಷ್ಟ್ರಧ್ವಜ ಧರ್ಮಧ್ವಜ ಎರಡೂ ಕೂಡ ಅಮೂಲ್ಯ ಮತ್ತು ಮಹತ್ವ ಉಳ್ಳದ್ದಾಗಿದೆ ಎಂದರು.ಷಟಸ್ಥಳ ಎಂದರೆ 6 ಮೆಟ್ಟಿಲುಗಳುಳ್ಳದ್ದು ಭಕ್ತ, ಮಹಿಶ, ಪ್ರಸಾಧಿ, ಪ್ರಾನಲಿಂಗಿ, ಶರಣ ಐಕ್ಯ ಇವು ಒಂದೊಂದು ಮೆಟ್ಟಿಲಗಳನ್ನು ನಾವೆಲ್ಲರೂ ಸಾಧನೆ ಮೂಲಕ ಏರಿ ಜೀವ ಶಿವನಾಗುವುದಕ್ಕೆ ಮಾರ್ಗದರ್ಶನ ಎಂದ ಶ್ರೀಗಳು, ಷಟಸ್ಥಳ ಧ್ವಜಾರೋಹಣ ಮಾಡುವ ಮೂಲ ಉದ್ದೇಶ ಮನುಷ್ಯನ ಜೀವನದ ಸಾರ್ಥಕತೆ ಪ್ರತಿಯೊಬ್ಬರಿಗೂ ಗೊತ್ತಾಗಬೇಕು. ಮನುಷ್ಯ ಪ್ರತಿಯೊಬ್ಬ ವ್ಯಕ್ತಿಯು ಮುಕ್ತನಾಗಬೇಕಾದರೆ ಭಕ್ತಸ್ಥಳದಿಂದ ಸಾಧನೆ ಮಾಡುತ್ತಾ ಐಕ್ಯಸ್ಥಳ ಮುಟ್ಟಲು ಎಲ್ಲರಿಗೂ ಸಾಧ್ಯ ಎಂದು ತೋರಿಸಿಕೊಟ್ಟವರು ಎಂದರು.

ನಮ್ಮ ಬಸವಾದಿ ಶರಣರು, ಆ ಪರಂಪರೆ ಇಂದಿಗೂ ನಡೆದುಕೊಂಡು ಬಂದಿದೆ. ಟೀಕಿನಮಠ ಬಹಳ ಪರಂಪರೆಯುಳ್ಳದ್ದು. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಾಲ್ಕನೆಯ ಮಹಾಸಭೆ, ಶಿವಯೋಗ ಮಂದಿರ ಸಂಸ್ಥೆ ಹಾಗೂ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘ ಸ್ಥಾಪನೆಗೊಳ್ಳಲು ಟೀಕಿನಮಠ ಪ್ರೇರಣೆಯಾಗಿದ್ದು, ಇಲ್ಲಿನ ಶ್ರೀಗಳ ಕೊಡುಗೆ ಅಪಾರವಾಗಿದೆ. ಟೀಕಿನ ಮಠ ನೂತನ ಶ್ರೀಗಳ ಪಟ್ಟಾಧಿಕಾರ ಮಹೋತ್ಸವ ಸಂಭ್ರಮದಿಂದ ನಡೆದಿರುವುದು ಬಾಗಲಕೋಟೆ ಸಾಂಸ್ಕೃತಿಕ ಲೋಕದ ಅನಾವರಣಗೊಂಡಿದೆ ಎಂದರು.ಚರಂತಿಮಠದ ಪ್ರಭುಮಹಾಸ್ವಾಮಿಗಳು ಷಟಸ್ಥಳ ಧ್ವಜಾರೋಹಣವು ವೀರಶೈವ ಲಿಂಗಾಯತ ಮಠಗಳ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಯ ಆರಂಭವನ್ನು ಸೂಚಿಸುವ ಪವಿತ್ರ ಆಚರಣೆಯಾಗಿದೆ ಎಂದರು.ಈ ವೇಳೆ ಗುಳೆದಗುಡ್ಡದ ಒಪ್ಪತ್ತೇಶ್ವರಮಹಾಸ್ವಾಮಿಗಳು, ಟೀಕಿನ ಮಠದ ಮಲ್ಲಿಕಾರ್ಜುನ ದೇಸಿಕರ ಸ್ವಾಮಿಗಳು, ಅನವಾಲದ ಕೈಲಾಸಪತಿ ಸ್ವಾಮಿಗಳು, ಟೀಕಿನಮಠದ ಮಲ್ಲಿಕಾರ್ಜುನ ದೇಶಿಕರ ಸ್ವಾಮಿಗಳು, ತಾರಿಹಾಳ ಅಡವಿಸಿದ್ದೇಶ್ವರ ದೇವರು, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿ.ಎನ್.ಪಾಟೀಲ, ಎ.ಎಸ್.ಪಾವಟೆ. ಬಸವಾರಾಜ ಭಗವತಿ, ಚಂದ್ರಶೇಖರ ಶೆಟ್ಟರ ಸೇರಿದಂತೆ ಅನೇಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಂಗಳೂರು : ನಗರದ ವಿವಿಧೆಡೆ ನಾಳೆ ವಿದ್ಯುತ್ ವ್ಯತ್ಯಯ-ಎಲ್ಲೆಲ್ಲಿ ?
ಸಾಮಾಜಿಕ ಜಾಲತಾಣ ಮೇಲೆ ಕಣ್ಣಿಡಲು ಸರ್ಕಾರಿ ಸಾಫ್ಟ್‌ವೇರ್‌