ಕನ್ನಡಪ್ರಭ ವಾರ್ತೆ ತಾಳಿಕೋಟೆ ಹಿರಿಯರ ಮಾರ್ಗದರ್ಶನದಿಂದ ಸಹಕಾರಿ ಬ್ಯಾಂಕ್ ಬೆಳವಣಿಗೆಗೆ ಕಾರಣವಾಗಿದೆ. ಎಲ್ಲ ಸಮಾಜದವರಂತೆ ರಜಪೂತ ಸಮಾಜ ಬಾಂಧವರು ಬ್ಯಾಂಕ್ ಬೆಳವಣಿಗೆಗೆ ಸಹಕರಿಸುತ್ತಿದ್ದಾರೆ ಎಂದು ದಿ.ತಾಳಿಕೋಟಿ ಸಹಕಾರಿ ಬ್ಯಾಂಕ್‌ನ ನೂತನ ಅಧ್ಯಕ್ಷ ಕಾಶಿನಾಥ ಸಜ್ಜನ ಹೇಳಿದರು.
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಹಿರಿಯರ ಮಾರ್ಗದರ್ಶನದಿಂದ ಸಹಕಾರಿ ಬ್ಯಾಂಕ್ ಬೆಳವಣಿಗೆಗೆ ಕಾರಣವಾಗಿದೆ. ಎಲ್ಲ ಸಮಾಜದವರಂತೆ ರಜಪೂತ ಸಮಾಜ ಬಾಂಧವರು ಬ್ಯಾಂಕ್ ಬೆಳವಣಿಗೆಗೆ ಸಹಕರಿಸುತ್ತಿದ್ದಾರೆ ಎಂದು ದಿ.ತಾಳಿಕೋಟಿ ಸಹಕಾರಿ ಬ್ಯಾಂಕ್‌ನ ನೂತನ ಅಧ್ಯಕ್ಷ ಕಾಶಿನಾಥ ಸಜ್ಜನ ಹೇಳಿದರು.ಪಟ್ಟಣದ ವಿಠ್ಠಲ ಮಂದಿರ ಸಭಾಭವನದಲ್ಲಿ ರಜಪೂತ ಸಮಾಜದಿಂದ ಸಹಕಾರಿ ಬ್ಯಾಂಕ್ ನೂತನ ನಿರ್ದೇಶಕ ಮಂಡಳಿಯ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ರಜಪೂತ ಸಮಾಜ ಚಿಕ್ಕದಾಗಿದ್ದರು ತಾಳಿಕೋಟೆ ಪಟ್ಟಣದಲ್ಲಿ ಚೊಕ್ಕ ಸಮಾಜವಾಗಿದೆ. ಬ್ಯಾಂಕ್ ಸ್ಥಾಪನೆಯಿಂದ ರಜಪೂತ ಸಮಾಜದ ಹಿರಿಯರು ನಿರ್ದೇಶಕರಾಗಿ ಎಲ್ಲ ಸದಸ್ಯರಿಗೂ ಮಾರ್ಗದರ್ಶಕರಾಗಿದ್ದರು. ಅವರ ಅಗಲಿಕೆಯ ನಂತರ ಈಗ ಇಬ್ಬರು ಸದಸ್ಯರು ಆಯ್ಕೆಯಾಗಿದ್ದಾರೆ. ನಮ್ಮನ್ನು ಸನ್ಮಾನಿಸಿರುವದು ಜವಾಬ್ದಾರಿ ಹೆಚ್ಚಿಸಿದಂತಾಗಿದೆ ಎಂದರು.ಬ್ಯಾಂಕ್ ನಿರ್ದೇಶಕ ಮುರುಗೆಪ್ಪ ಸರಶೆಟ್ಟಿ ಮಾತನಾಡಿ, ದಿ.ತಾಳಿಕೋಟಿ ಸಹಕಾರಿ ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಬೆಳೆಯುತ್ತಿದ್ದು, ವಿಸ್ವಾಸವಿಟ್ಟು ನಮ್ಮನ್ನ ಆಯ್ಕೆ ಮಾಡಿದ್ದಾರೆ. ಅವರ ಪ್ರೀತಿಗೆ ಚುತಿಬರದಂತೆ ಕೆಲಸ ಮಾಡುವುದಾಗಿ ತಿಳಿಸಿದರು.
ಈ ವೇಳೆ ೧೩ ಜನ ನೂತನ ಸದಸ್ಯರನ್ನು ಸನ್ಮಾನಿಸಲಾಯಿತು.
ರಜಪೂತ ಸಮಾಜದ ಅಧ್ಯಕ್ಷ ಹರಿಸಿಂಗ್ ಮೂಲಿಮನಿ ಅಧ್ಯಕ್ಷತೆ ವಹಿಸಿದ್ದರು. ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ ಹಾಜರಿದ್ದರು.
ಈ ವೇಳೆ ಸಮಾಜದ ಉಪಾಧ್ಯಕ್ಷ ರತನಸಿಂಗ್ ಕೊಕಟನೂರ, ವ್ಹಿ.ಸಿ.ಹಿರೇಮಠ(ಹಂಪಿಮುತ್ಯಾ), ಕಾಶಿನಾಥ ಮುರಾಳ, ಜಗದೀಶ ಬಿಳೇಭಾವಿ, ಮುತ್ತು ಕಶೆಟ್ಟಿ, ರವಿ ಚಂದುಕರ, ಮುತ್ತುಗೌಡ ಪಾಟೀಲ, ದತ್ತು ಉಭಾಳೆ, ವಜ್ರಕುಮಾರ ಪ್ರಥಮಶೆಟ್ಟಿ, ವಾಸುದೇವ ಹೆಬಸೂರ, ಪ್ರಕಾಶ ಹಜೇರಿ, ಮಾನಸಿಂಗ್ ಕೊಕಟನೂರ, ಭರತಸಿಂಗ್ ಹಜೇರಿ, ಗೋವಿಂದಸಿಂಗ್ ಗೌಡಗೇರಿ, ಅರುಣ ದಡೇದ, ನೀತಿನ ಹಜೇರಿ, ಅಮಿತ್‌ಸಿಂಗ್ ಮನಗೂಳಿ, ದೀಲಿಪಸಿಂಗ್ ಹಜೇರಿ, ಸುರೇಶಸಿಂಗ್ ಹಜೇರಿ, ಬ್ಯಾಂಕ್ ಉಪಾಧ್ಯಕ್ಷ ಚಿಂತಪ್ಪಗೌಡ ಯಾಳಗಿ, ನಿರ್ದೇಶಕರಾದ ಡಿ.ಕೆ.ಪಾಟೀಲ, ಪ್ರಲ್ಹಾದಸಿಂಗ್ ಹಜೇರಿ, ಸುರೇಶ ಪಾಟೀಲ, ಐ.ಬಿ.ಬಿಳೇಭಾವಿ, ದತ್ತು ಹೆಬಸೂರ, ಬಾಬುಸಿಂಗ್ ಹಜೇರಿ, ಗಿರಿಜಾಬಾಯಿ ಕೊಡಗಾನೂರ, ಶೈಲಜಾ ಬಡದಾಳಿ, ರಾಮಪ್ಪ ಕಟ್ಟಿಮನಿ, ಸಂಜೀವ ಬರದೇನಾಳ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.