ಎಲ್ಲ ಜಾತಿ, ಧರ್ಮದವರು ಒಗ್ಗೂಡಿದರೆ ದೇಶ ಅಭಿವೃದ್ಧಿ ಸಾಧ್ಯ: ಪೊನ್ನಣ್ಣ

KannadaprabhaNewsNetwork |  
Published : Sep 16, 2025, 12:04 AM IST
ನಾಪೋಕ್ಲು ಸುನ್ನೀ ಮುಹಿಯದ್ದೀನ್ ಜುಮಾ ಮಸೀದಿ ವತಿಯಿಂದ  ಆಯೋಜಿಸಲಾಗಿದ್ದ “ ಮದದೇ ಮದೀನ“ ಮಿಲಾದ್  ಬೃಹತ್ ಸಮಾವೇಶ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಸಲಹೆಗಾರರು ಹಾಗೂ ಶಾಸಕ ರೂ ಆಗಿರುವ ಎ.ಎಸ್.ಪೊನ್ನಣ್ಣ  ಮಾತನಾಡಿದರು.15-ಎನ್ಪಿ ಕೆ-3.. ನಾಪೋಕ್ಲು ಸುನ್ನೀ ಮುಹಿಯದ್ದೀನ್ ಜುಮಾ ಮಸೀದಿ ವತಿಯಿಂದ  ಆಯೋಜಿಸಲಾಗಿದ್ದ “ ಮದದೇ ಮದೀನ“ ಮಿಲಾದ್  ಬೃಹತ್ ಸಮಾವೇಶ ಕಾರ್ಯಕ್ರಮದ ಜಾಥಾ=============================================================================== | Kannada Prabha

ಸಾರಾಂಶ

ಸುನ್ನೀ ಮುಹಿಯದ್ದೀನ್ ಜುಮಾ ಮಸೀದಿ ವತಿಯಿಂದ ಆಯೋಜಿಸಲಾಗಿದ್ದ ಮದದೇ ಮದೀನ ಮಿಲಾದ್ ಬೃಹತ್ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಸರ್ವಧರ್ಮ ಸಂಗಮ ಕಾರ್ಯಕ್ರಮ ನಡೆಯಿತು.

ಮದದೇ ಮದೀನ ಮಿಲಾದ್ ಬೃಹತ್ ಸಮಾವೇಶ: ಸರ್ವಧರ್ಮ ಸಂಗಮಕನ್ನಡಪ್ರಭ ವಾರ್ತೆ ನಾಪೋಕ್ಲು

ಎಲ್ಲ ಜಾತಿ, ಧರ್ಮದವರು ಒಗ್ಗೂಡಿದರೆ ಮಾತ್ರ ದೇಶ ಅಭಿವೃದ್ಧಿಯಾಗಲು ಸಾಧ್ಯ ಎಂದು ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಹೇಳಿದರು.

ಇಲ್ಲಿನ ಸುನ್ನೀ ಮುಹಿಯದ್ದೀನ್ ಜುಮಾ ಮಸೀದಿ ವತಿಯಿಂದ ಆಯೋಜಿಸಲಾಗಿದ್ದ ಮದದೇ ಮದೀನ ಮಿಲಾದ್ ಬೃಹತ್ ಸಮಾವೇಶ ಸಮಾರೋಪ ಸಮಾರಂಭದಲ್ಲಿ ಆಯೋಜಿಸಲಾದ ಸರ್ವಧರ್ಮ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.ರಾಜ್ಯದಲ್ಲಿ ಎಲ್ಲ ವರ್ಗದ ಜನರು ಶಾಂತಿಯುತ ಬದುಕನ್ನು ನಡೆಸುತ್ತಾ ಬಂದಿದ್ದಾರೆ. ಆಚರಣೆಗಳಲ್ಲಿ ಭಿನ್ನತೆ ಇದ್ದರೂ ಎಲ್ಲ ಧರ್ಮದವರು ಶಾಂತಿಯನ್ನು ಕಾಪಾಡಬೇಕಾದದ್ದು ಅತ್ಯಗತ್ಯ. ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಶ್ರಮವಹಿಸಿ ಇಂತಹ ಒಂದು ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಮಾತನಾಡಿ, ತಾವು ಬಾಹ್ಯವನ್ನು ಉದ್ಧರಿಸುವುದಕ್ಕಿಂತ ನಮ್ಮನ್ನು ನಾವು ಉದ್ಧರಿಸಿಕೊಂಡು ಜೀವನ ಸಾಗಿಸಬೇಕು. ಸಾಮಾಜಿಕವಾಗಿರುವ ಎಲ್ಲ ಚೌಕಟ್ಟುಗಳನ್ನು ಕಳಚಿಕೊಂಡು ಇಡೀ ಮನುಕುಲವನ್ನು ಪ್ರೀತಿಸುವುದು ಸಹಜವಾದ ಧರ್ಮ ಎಂದು ಹೇಳಿದರು.ನಾಪೋಕ್ಲುವಿನ ಸಂತಮೇರಿ ಚರ್ಚ್‌ನ ಜ್ಞಾನಪ್ರಕಾಶ್ ಮಾತನಾಡಿ, ಈ ಭೂಮಿಯ ಮೇಲೆ ನೂರಾರು ಧರ್ಮಗಳಿವೆ. ಈ ಎಲ್ಲ ಧರ್ಮಗಳಿಗಿಂತ ಬಹಳ ಮುಖ್ಯವಾದದ್ದು ಮನುಷ್ಯ ಧರ್ಮ ಎಂದರು.

ಜಮಾಯತ್ ಅಧ್ಯಕ್ಷ ಎಂ.ಎಚ್.ಅಬ್ದುಲ್ ರಹಮಾನ್ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮವನ್ನು ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಅಬ್ದುಲ್ ಫೈಝಿ ಉದ್ಘಾಟಿಸಿದರು.

ಮಿಲಾದ್‌ ಜಾಥಾ:

ಹಳೆ ತಾಲೂಕಿನಿಂದ ನಾಪೋಕ್ಲು ಮಾರ್ಕೆಟ್ ವರೆಗೆ ಮೀಲಾದ್ ಜಾಥಾ ನಡೆಯಿತು. ಜಾಥಾದಲ್ಲಿ ಮಸೀದಿಯ ಸ್ತಬ್ಧ ಚಿತ್ರ, ಮಕ್ಕಳ ದಫ್ ಪ್ರದರ್ಶನ ಗಮನಸೆಳೆಯಿತು. ಈ ಸಂದರ್ಭ ಬಸ್‌ ನಿಲ್ದಾಣದ ಸಮೀಪ ವಿವೇಕಾನಂದ ಯುವಕ ಸಂಘದಿಂದ ಜಾಥಾವನ್ನು ಸ್ವಾಗತಿಸಿ, ತಂಪು ಪಾನೀಯವನ್ನು ವಿತರಿಸಿದರು.

ಸಂಜೆ ಜರುಗಿದ ಕಾರ್ಯಕ್ರಮದ ವೇದಿಕೆಯಲ್ಲಿ ಸಮಾಜದ ಪ್ರಮುಖರಾದ ಮನ್ಸೂರ್ ಆಲಿ, ಕೆ.ಎ.ಇಸ್ಮಾಯಿಲ್, ಖುರೇಶಿ ಎಂ.ಐ., ಅಶ್ರಫ್ ಕೆ.ವೈ., ಮೊಹಮ್ಮದ್, ಹಂಸ ಕೊಟ್ಟಮುಡಿ, ಕೆ.ಕೆ. ಉಸ್ಮಾನ್, ಅಜೀಜ್, ರಶೀದ್, ಅಬ್ದುಲ್, ಸಲೀಂ ಹ್ಯಾರಿಸ್, ಶೌಕತ್ ಅಲಿ, ಅರಾಫತ್, ಅಹಮ್ಮದ್ ಸಿ.ಎಚ್., ಬದ್ರುದ್ದೀನ್ ಸಿ.ಎಂ., ನೌಫಲ್, ಆಸಿಫ್ ಆಲಿ, ತೆರುವತ್ ಹುಸೈನಾರ್, ನಾಲ್ಕು ನಾಡಿನ ಎಲ್ಲ ಜಮಾಯತ್ ಅಧ್ಯಕ್ಷರು, ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಜನಾಂಗ ಬಾಂಧವರು ಉಪಸ್ಥಿತರಿದ್ದರು.

ಈ ಸಂದರ್ಭ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಲಾಯಿತು.

ಜಮಾಯತ್ ಕಾರ್ಯದರ್ಶಿ ಪಿ.ಎಂ.ಯೂನಸ್ ಸ್ವಾಗತಿಸಿದರು. ಅಹಮ್ಮದ್ ಸಿಎಚ್‌ ನಿರೂಪಿಸಿದರು. ತಿರುವತ್ ಹ್ಯಾರಿಸ್‌ ವಂದಿಸಿದರು.

PREV

Recommended Stories

ಸಂಪುಟ ಪುನಾರಚನೆಗಾಗಿ ನ.15ರಂದು ದೆಹಲಿಗೆ : ಸಿಎಂ ಸಿದ್ದರಾಮಯ್ಯ
ಸರ್ಕಾರದ ಪ್ರತಿ ಇಲಾಖೆಯ ಮೇಲೂ ಲೋಕಾಯುಕ್ತ ಕಣ್ಣು