ದೇಶದ ಆರ್ಥಿಕತೆ ಉಳಿದಿರುವುದು ನಮ್ಮ ತಾಯಂದಿರಿಂದ-ಬೊಮ್ಮಾಯಿ

KannadaprabhaNewsNetwork |  
Published : Jan 26, 2025, 01:31 AM IST
25ಎಚ್‌ಕೆಆರ್‌1 | Kannada Prabha

ಸಾರಾಂಶ

ನಮ್ಮ ದೇಶದ ಆರ್ಥಿಕತೆ ಉಳಿದಿರುವುದು ನಮ್ಮ ತಾಯಂದಿರಿಂದ, ನಮ್ಮ ದೇಶದಲ್ಲಿ ಉಳಿತಾಯ ಸಂಸ್ಕೃತಿ ಇದೆ. ಪಾಶ್ಚಿಮಾತ್ಯರದ್ದು ಖರ್ಚಿನ ಸಂಸ್ಕೃತಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಹಿರೇಕೆರೂರು: ನಮ್ಮ ದೇಶದ ಆರ್ಥಿಕತೆ ಉಳಿದಿರುವುದು ನಮ್ಮ ತಾಯಂದಿರಿಂದ, ನಮ್ಮ ದೇಶದಲ್ಲಿ ಉಳಿತಾಯ ಸಂಸ್ಕೃತಿ ಇದೆ. ಪಾಶ್ಚಿಮಾತ್ಯರದ್ದು ಖರ್ಚಿನ ಸಂಸ್ಕೃತಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.ಅವರು ಇಂದು ಹಿರೆಕೆರೂರು ತಾಲೂಕಿನ ಚಿಕ್ಕೆರೂರು ಗ್ರಾಮದಲ್ಲಿ ಆರ್ಯ ವೈಶ್ಯ ಮಂಡಳಿ ಹಾಗೂ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಶ್ರೀ ವಾಸವಿ ಕನ್ನಿಕಾ ಪರಮೇಶ್ವರಿ, ಮೈಲಾರಲಿಂಗೇಶ್ವರ, ಲಕ್ಷ್ಮೀ ನಾರಾಯಣ, ಸುಬ್ರಮಣ್ಯ, ಗಣಪತಿ ದೇವರುಗಳ ನೂತನ ಮೂರ್ತಿಗಳ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮ ಮತ್ತು ವಾಸವಿ ಸಮುದಾಯ ಭವನ ಮತ್ತು ಪ್ರಸಾದ ನಿಲಯ ಉದ್ಘಾಟನೆ ಮಾಡಿ ಮಾತನಾಡಿದರು.

ಆರ್ಯ ವೈಶ್ಯ ಸಮಾಜ ಬಹಳ ವೈಶಿಷ್ಟ್ಯಪೂರ್ಣ ಗುಣಧರ್ಮ ಇರುವ ಸಮಾಜ ಇದೆ. ಹಣಕಾಸಿನ ನಿಯಂತ್ರಣ ನಿಮ್ಮ ಕೈಯಲ್ಲಿದೆ. ಲಕ್ಷ್ಮೀ ನಿಮಗೆ ಒಲಿದಿದ್ದಾಳೆ. ಲಕ್ಷ್ಮೀ ಪುತ್ರರು ನೀವು. ಇಡೀ ಜಗತ್ತಿಗೆ ಅಂಕಿ ಸಂಖ್ಯೆಯ ಜೊತೆಗೆ ಲೆಕ್ಕಾಚಾರ, ಗಣಿತ ಕಲಿಸಿರುವುದು ನಿಮ್ಮ ಸಮಾಜ. ಸೊನ್ನೆ ಕಂಡು ಹಿಡಿದಿರುವ ಆರ್ಯಭಟ ನಿಮ್ಮ ಸಮಾಜದ ಮುಖ್ಯಸ್ಥರು ಅವರು ಸಂಖ್ಯಾ ಬಲ ಮುಖ್ಯವಲ್ಲ. ಬುದ್ಧಿ ಬಲ ಮುಖ್ಯ. ನಿಮ್ಮ ಜ್ಞಾನ ಮತ್ತು ಭಕ್ತಿಯಿಂದ ನೀವು ಎಲ್ಲೇ ಇದರೂ ಯಶಸ್ವಿಯಾಗುತ್ತೀರಿ, ನಿಮ್ಮ ಕೈ ಯಾವಾಗಲೂ ಭೂಮಿಯ ಕಡೆಗೆ ನೋಡುತ್ತದೆ. ಯಾವತ್ತೂ ಆಕಾಶದ ಕಡೆಗೆ ನೋಡುವುದಿಲ್ಲ. ಇದ್ದ ಹಣಕಾಸಿನ ಸ್ಥಿತಿಯಲ್ಲಿ ಹೆಂಗೆ ಬದುಕು ಮಾಡಬೇಕು ವ್ಯಾಪಾರ ಮಾಡಬೇಕು ಎನ್ನುವುದನ್ನು ನಿಮ್ಮಿಂದ ನೋಡಿ ಕಲಿಯಬೇಕು. ಹೇಗೆ ಉಳಿತಾಯಮಾಡಿ ಬದುಕು ನಡೆಸಬೇಕು ಎನ್ನುವುದನ್ನು ನಿಮ್ಮಿಂದ ಕಲಿಯಬೇಕು ಎಂದು ಹೇಳಿದರು.

ಬಿ.ಸಿ. ಪಾಟೀಲರ ಕೊಡುಗೆ: ಹಿರೇಕೆರೂರು ತಾಲೂಕು ಬಹಳ ಫಲವತ್ತಾದ ತಾಲೂಕು. ಭೂಮಿಗೆ ನೀರು ಕೊಟ್ಟರೆ ಭೂತಾಯಿ ಫಲವತ್ತಾದ ಬೆಳೆ ಕೊಡುತ್ತಾಳೆ, ಬಿ.ಸಿ. ಪಾಟೀಲರು ಈ ಕ್ಷೇತ್ರಕ್ಕೆ ನೀರು ತರಬೇಕೆಂದು ಬಿ.ಸಿ. ಪಾಟೀಲರು ಕೆಲಸ ಮಾಡಿದ್ದಾರೆ. ಅವರಿಗೆ ಈ ಕ್ಷೇತ್ರದ ಜೊತೆಗೆ ಭಾವನಾತ್ಮಕ ಸಂಬಂಧ ಇದೆ. ಹಿರೆಕೇರೂರು ಅಭಿವೃದ್ಧಿಯಲ್ಲಿ ಬಿ.ಸಿ.ಪಾಟೀಲರ ಕೊಡುಗೆ ದೊಡ್ಡದು. ಹುರ್ಗಾದೇವಿ ಕೆರೆ ತುಂಬಿಸುವುದು, ಸರ್ವಜ್ಞ ವಿತ್ತ ನೀರಾವರಿ. ಗುಡ್ಡದ ಮಲ್ಲಾಪುರ ಏತ ನೀರಾವರಿ ಯೋಜನೆ ಜಾರಿಗೆ ತಂದಿದ್ದಾರೆ ಎಂದರು.ಹಿರೆಕೇರೂರು ತಾಲೂಕಿನ ಅಭಿವೃದ್ಧಿ ಭವಿಷ್ಯ ಬಿ.ಸಿ. ಪಾಟೀಲರ ಜೊತೆಗೆ ಜೋಡಿಸಿಕೊಂಡಿದೆ. ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿಯಾಗಬೇಕೆಂದರೆ ಅದರ ಹಿಂದಿರುವ ದೊಡ್ಡ ಶಕ್ತಿ ಬಿ.ಸಿ. ಪಾಟೀಲರು. ಅವರಿಗೆ ನೀವು ಯಾವಾಗ ಶಕ್ತಿ ಕೊಡುತ್ತೀರಿ ಆಗ ಅಭಿವೃದ್ಧಿ ಹೆಚ್ಚಾಗುತ್ತದೆ. ನಾನು ಎಂಪಿ ಚುನಾವಣೆಯಲ್ಲಿ ನಿಂತಾಗ ನನಗೆ 18 ಸಾವಿರಕ್ಕೂ ಹೆಚ್ಚು ಅಂತರದ ಮತಗಳನ್ನು ನೀಡಿ ನನಗೆ ಆಶೀರ್ವದಿಸಿದ್ದೀರಿ, ನಾನೂ ಹಿರೇಕೆರೂರು ಅಭಿವೃದ್ಧಿಗೆ ಶ್ರಮಿಸುತ್ತೇವೆ. ಕನ್ನಿಕಾ ಪರಮೇಶ್ವರಿ ನಿಮ್ಮ ಎಲ್ಲ ಕಾರ್ಯಗಳಿಗೂ ಆಶೀರ್ವಾದ ಮಾಡಲಿ ಎಂದು ಪ್ರಾರ್ಥಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಬಿ.ಸಿ. ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್.ಅರುಣ, ಕನ್ನೀಕಾ ಪರಮೇಶ್ವರಿ ಟ್ರಸ್ಟ್ ಕಮಿಟಿಯ ಅಧ್ಯಕ್ಷರಾದ ಕೇಶವಮೂರ್ತಿ ಚನ್ನಗಿರಿ ಸೇರಿದಂತೆ ಸಮಾಜದ ಪ್ರಮುಖರು, ಗ್ರಾಮ ಪಂಚಾಯತಿಯ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!