ಬೆಂಗಳೂರನ್ನು ಸಿಲಿಕಾನ್ ಸಿಟಿ ಮಾಡಿದ ಕೀರ್ತಿ ಎಸ್.ಎಂ.ಕೆಗೆ ಸಲ್ಲುತ್ತದೆ: ಡಾ.ಕೆ.ಪಿಅಂಶುಮಂತ್

KannadaprabhaNewsNetwork |  
Published : Dec 12, 2024, 12:30 AM IST
ನರಸಿಂಹರಾಜಪುರ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ  ಎಸ್.ಎಂ.ಕೃಷ್ಣ ಅವರಿಗೆ ಶ್ರದ್ದಾಂಜಲಿ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಮಾತನಾಡಿದರು. | Kannada Prabha

ಸಾರಾಂಶ

ನರಸಿಂಹರಾಜಪುರ, ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನದ ಮುಖಾಂತರ ಬೆಂಗಳೂರು ನಗರವನ್ನು ಐಟಿ ಸಿಟಿ ಮತ್ತು ಸಿಲಿಕಾನ್ ಸಿಟಿ ಮಾಡಿದ ಕೀರ್ತಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರಿಗೆ ಸಲ್ಲುತ್ತದೆ ಎಂದು ಶಿವಮೊಗ್ಗ ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಹೇಳಿದರು.

ಬ್ಲಾಕ್ ಕಾಂಗ್ರೆಸ್ ನಿಂದ ಎ.ಎಂ.ಕೃಷ್ಣ ಅವರಿಗೆ ಶ್ರದ್ಧಾಂಜಲಿ

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಕಂಪ್ಯೂಟರ್ ಮತ್ತು ಮಾಹಿತಿ ತಂತ್ರಜ್ಞಾನದ ಮುಖಾಂತರ ಬೆಂಗಳೂರು ನಗರವನ್ನು ಐಟಿ ಸಿಟಿ ಮತ್ತು ಸಿಲಿಕಾನ್ ಸಿಟಿ ಮಾಡಿದ ಕೀರ್ತಿ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರಿಗೆ ಸಲ್ಲುತ್ತದೆ ಎಂದು ಶಿವಮೊಗ್ಗ ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ.ಅಂಶುಮಂತ್ ಹೇಳಿದರು.

ಮಂಗಳವಾರ ಸಂಜೆ ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ನಿಂದ ನಡೆದ ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿ, ಎಸ್.ಎಂ.ಕೃಷ್ಣ ಅವರು ಕರ್ನಾಟಕದ ಆರ್ಥಿಕ ಮತ್ತು ಔದ್ಯೋಗಿಕ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿದ್ದರು. ರಾಜ್ಯದ ಗ್ರಾಮೀಣ ಭಾಗದ ವಿದ್ಯಾವಂತ ಯುವಕ, ಯುವತಿಯರು ಇಂದು ಪ್ರಪಂಚದಾದ್ಯಂತ ನಾವು ಬೆಂಗಳೂರಿಗರು ಎಂದು ಹೆಮ್ಮೆಯಿಂದ ಹೇಳಲು ಕಾರಣ ಎಸ್.ಎಂ.ಕೃಷ್ಣ ಅವರ ದೂರ ದೃಷ್ಟಿ, ಆರ್ಥಿಕ ಚಿಂತನೆ. ಪ್ರಪಂಚದ ನಾಯಕರಲ್ಲಿ ಒಬ್ಬರಾಗಿದ್ದ ಅಮೇರಿಕಾದ ಮಾಜಿ ಅಧ್ಯಕ್ಷ ಜಾನ್ ಎಫ್ ಕೆನಡಿ ಅವರ ಒಡನಾಟ ಎಸ್. ಎಂ.ಕೃಷ್ಣ ಅವರಿಗೆ ಇತ್ತು ಅಂದರೆ ಅವರ ವ್ಯಕ್ತಿತ್ವವೇ ಅದ್ಬುತ. ಎಸ್.ಎಂ.ಕೃಷ್ಣ ಅವರು ನೆಟ್ಟ ಗಿಡ ಇಂದು ಹೆಮ್ಮರವಾಗಿ ದೇಶದ ಎಲ್ಲಾ ಭಾಗದ ಜನ ಉದ್ಯೋಗಕ್ಕೆ ಬೆಂಗಳೂರಿಗೆ ಬರುತ್ತಿದ್ದಾರೆ. ದೇಶದಲ್ಲೇ ರಾಜ್ಯ ಇಂದು ತೆರಿಗೆ ಸಂಗ್ರಹದಲ್ಲಿ 2ನೇ ಸ್ಥಾನದಲ್ಲಿ ಇದ್ದರೆ ಅದಕ್ಕೆ ಮೂಲ ಕಾರಣ ಎಸ್.ಎಂ.ಕೆ ಎಂದರು.ಅವರು ಒಕ್ಕಲಿಗರಾಗಿದ್ದರೂ ತಮ್ಮ ಸಾರ್ವಜನಿಕ ಜೀವನದಲ್ಲಿ ತನ್ನ ಜಾತಿಯನ್ನು ರಾಜಕೀಯ ಬೆಳವಣಿಗೆಗೆ ಬಳಸದೆ ಎಲ್ಲಾ ಜಾತಿ, ಧರ್ಮಗಳ ನಾಯಕರಾಗಿ ಕುವೆಂಪು ಅವರ ಆಶಯದಂತೆ ವಿಶ್ವ ಮಾನವರಾಗಿದ್ದರು ಎನ್ನುವುದೇ ನಮಗೆ ಹೆಮ್ಮೆ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸ್ತ್ರೀಶಕ್ತಿ, ಬಡವರ ಆರೋಗ್ಯ ಚೇತನಕ್ಕೆ ಯಶಸ್ವಿನಿ ಮತ್ತು ವಿದ್ಯೆಯಿಂದ ಮಾತ್ರ ಒಂದು ದೇಶ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದು ಸರ್ಕಾರಿ ಶಾಲೆ ಮಕ್ಕಳು ಬಡತನದಿಂದ ಶಾಲೆ ತ್ಯಜಿಸದಂತೆ ಮಕ್ಕಳಿಗೆ ಬಿಸಿ ಊಟದ ವ್ಯವಸ್ಥೆ ಮಾಡಿ, ವಿದ್ಯೆಗೆ ಪ್ರೋತ್ಸಾಹ ನೀಡಿದ ಬಡವರ ಬಂಧು ಕೂಡ ಆಗಿದ್ದರು. ಎಸ್.ಎಂ.ಕೃಷ್ಣ ಅವರ ನೆನಪು ಶಾಶ್ವತವಾಗಿ ನೆಲೆಯೂರಲಿದೆ ಎಂದರು. ಮುಖಂಡರು ಎಸ್.ಎಂ.ಕೃಷ್ಣ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು. ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಸದಾಶಿವ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೇರ್‌ಬೈಲ್‌ನಟರಾಜ್, ಪಪಂ ಅಧ್ಯಕ್ಷೆ ಸುರಯ್ಯಭಾನು, ನಗರ ಘಟಕದ ಅಧ್ಯಕ್ಷ ಬಿಳಾಲುಮನೆ ಉಪೇಂದ್ರ, ಎಪಿಎಂಸಿ ನಿರ್ದೇಶಕ ಎಚ್.ಎಂ.ಶಿವಣ್ಣ,ಮುಖಂಡರಾದ ಸೈಯ್ಯದ್ ವಸೀಂ, ಈಚಿಕೆರೆಸುಂದರೇಶ್,ಮಾಳೂರು ದಿಣ್ಣೆ ರಮೇಶ್,ಎಸ್.ಡಿ.ರಾಜೇಂದ್ರ, ಬೆನ್ನಿ,ಎನ್.ಪಿ.ರಮೇಶ, ಮಂಜಪ್ಪಗೌಡ, ಬಾಳೆ ಹಿತ್ಲುನಾರಾಯಣಸ್ವಾಮಿ ಮತ್ತಿತರರು ಇದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ