ಮಹಿಳಾ ಸಂಕುಲಕ್ಕೆ ಶಿಕ್ಷಣ ನೀಡಿದ ಕೀರ್ತಿ ಫುಲೆ ದಂಪತಿಗೆ: ಚಂದ್ರಶೇಖರ್‌

KannadaprabhaNewsNetwork | Updated : Jan 10 2024, 01:46 AM IST

ಸಾರಾಂಶ

ಅಕ್ಷರ ವಂಚಿತ ಸಮಾಜದಲ್ಲಿ ಅಕ್ಷರದ ಧ್ವನಿಯಾಗಿ ಮಹಿಳಾ ಸಂಕುಲಕ್ಕೆ ಶಿಕ್ಷಣ ಕಲಿಸಿದ ಕೀರ್ತಿ ಸಾವಿತ್ರಿ ಬಾಯಿ ಫುಲೆ ದಂಪತಿಗಳಿಗೆ ಹಾಗೂ ಶೇಖ್ ಫಾತೀಮಾ ಅವರಿಗೆ ಸಲ್ಲುತ್ತದೆ

ಬೀದರ್: ಅಕ್ಷರ ವಂಚಿತ ಸಮಾಜದಲ್ಲಿ ಅಕ್ಷರದ ಧ್ವನಿಯಾಗಿ ಮಹಿಳಾ ಸಂಕುಲಕ್ಕೆ ಶಿಕ್ಷಣ ಕಲಿಸಿದ ಕೀರ್ತಿ ಸಾವಿತ್ರಿ ಬಾಯಿ ಫುಲೆ ದಂಪತಿಗಳಿಗೆ ಹಾಗೂ ಶೇಖ್ ಫಾತೀಮಾ ಅವರಿಗೆ ಸಲ್ಲುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಚಂದ್ರಶೇಖರ ಪಾಟೀಲ್ ಹೇಳಿದರು.

ನಗರದ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ಕಲ್ಯಾಣ ಕರ್ನಾಟಕ ಪ್ರೌಢ ಶಾಲಾ ಶಿಕ್ಷಕರ ಸಂಘ ಬೀದರ್ ಹಾಗೂ ಕರ್ನಾಟಕ ರಾಜ್ಯ ಶಿಕ್ಷಕರ ವಿಕಾಸ ಪರಿಷತ್‌ ಬೆಂಗಳೂರು ಸಂಯುಕ್ತಾಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದರು.

ಕೃತಿ ಬಿಡುಗಡೆ ಮಾಡಿದ ಮಾಜಿ ಎಂಎಲ್ಸಿ ಶರಣಪ್ಪಾ ಮಟ್ಟೂರು ಮಾತನಾಡಿ, ಶಿಕ್ಷಕರಿಲ್ಲದ ಸಮಾಜ ಶಾಂತಿ, ಸಮೃದ್ಧಿ, ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ಶಿಕ್ಷಕರ ಅಗತ್ಯ ಬೇಡಿಕೆಗಳಿಗೆ ಸರ್ಕಾರ ಸ್ವಂದನೆ ಮಾಡುವುದು ಅನಿವಾರ್ಯವಾಗಿದೆ ಎಂದರು.

ಆರ್ಚಸ್ಮಿತಾ ತಾಯಿ ಸಾನಿಧ್ಯ ವಹಿಸಿದರು. ಪ್ರೊ.ಶಿವಶರಣಪ್ಪಾ ಹುಗ್ಗೆ ಪಾಟೀಲ್ ವಿಶೇಷ ಉಪನ್ಯಾಸ ನೀಡಿದರು. ರಾಜ್ಯ ಸರ್ಕಾರಿ ನೌಕರ ಸಂಘದ ರಾಜ್ಯ ಉಪಾಧ್ಯಕ್ಷರಾದ ರಾಜೇಂದ್ರಕುಮಾರ ಗಂದಗೆ ಮಾತನಾಡಿದರು.

ಕಲ್ಯಾಣ ಕರ್ನಾಟಕ ಪ್ರೌಢ ಶಾಲಾ ಶಿಕ್ಷಕರ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಪಾಂಡುರಂಗ ಬೆಲ್ದಾರ ಅಧ್ಯಕ್ಷತೆ ವಹಿಸಿ, ಶಿಕ್ಷಕರ ವೃತ್ತಿ ಪ್ರವಿತ್ರವಾದ ವೃತ್ತಿಯಾಗಿದೆ. ದೇಶದ ಪ್ರಥಮ ಉಪರಾಷ್ಟ್ರಪತಿ ರಾಧಕೃಷ್ಣನ್ ಶಿಕ್ಷಣ ವೃತ್ತಿಗೆ ಗೌರವ ಹೆಚ್ಚಿಸುವ ನಿಟ್ಟಿನಲ್ಲಿ ತಮ್ಮ ಹುಟ್ಟು ಹಬ್ಬವನ್ನು ಶಿಕ್ಷಕರ ಹೆಸರಲ್ಲಿ ಆಚರಣೆ ಮಾಡಲು ಸರ್ಕಾರಕ್ಕೆ ಹೇಳಿಕೊಟ್ಟಿದ್ದಾರೆ. ಅಕ್ಷರದ ಅವ್ವ ಸಾವಿತ್ರಿಬಾಯಿ ಫುಲೆ ತನ್ನಗೆ ಎದುರಾಗಿರುವ ಎಲ್ಲಾ ಶೋಷಣೆಗಳನ್ನು ಎದುರಿಸಿ ದಲಿತರಿಗೆ ಶೋಷಿತ ಮಹಿಳೆಯರ ಸಲುವಾಗಿ ಶಾಲೆಗಳನ್ನು ತೇರೆದು ಶಿಕ್ಷಣ ಕಲಿಸಿದ್ದಾರೆ ಎಂದರು.

ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಹಾಗೂ ಮಹಿಳಾ ಐಕಾನ್ ಶೇಖ್‌ ಫಾತೀಮಾ ಜಯಂತಿ ನಿಮಿತ್ತ ರಾಜ್ಯಮಟ್ಟದ 21 ಶಿಕ್ಷಕರಿಗೆ ಸಾವಿತ್ರಿಬಾಯಿ ಫುಲೆ, 6 ಶಿಕ್ಷಕಿಯರಿಗೆ ಶೇಖ್‌ ಫಾತೀಮಾ ಹಾಗೂ 21 ಜನರಿಗೆ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್‌ ಆದರ್ಶ ದಂಪತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವರ್ಷದ ಪಾಕಿಟ್ ಡೈರಿ ಹಾಗೂ ಕ್ಯಾಲೆಂಡರ ಬಿಡುಗಡೆ ಅಲ್ಲದೇ ಸಾಹಿತಿ ಸುಬ್ಬಣ್ಣಾ ಕರಕನಳ್ಳಿ ಬರೇದ ಕ್ರಾಂತಿಯ ಬೆಳಕು ಹಾಗೂ ಸಂಘರ್ಷದ ಬೆಳಕು ಕೃತಿ ಬಿಡುಗಡೆ ಮಾಡಲಾಯಿತು.

ಮುಖ್ಯ ಅತಿಥಿಯಾಗಿ ವಿಶ್ವನಾಥ ಕಟ್ಟಿಮನಿ, ಪ್ರತೇಶ ಬಣಕರ ಶಿವರಾಜ ಕಪಾಲಪೂರೆ, ಮೊಹ್ಮದ ಅಶಿಪೋದ್ಧಿನ್, ಡಾ.ಕಾಶಿನಾಥ ಚಲ್ವಾ,ವಿಷ್ಣುಕಾಂತ ಠಾಕುರ್, ಶಿವಕುಮಾರ ಸದಾಫುಲೆ, ಸುರೇಶ ಟಾಳೆ, ವೈಜಿನಾಥ ಸಾಗರ, ನರಸಮ್ಮಾ ಪಾಟೀಲ್, ಗೋವಿಂದ ಪೂಜಾರಿ, ಪ್ರಕಾಶ ರಡ್ಡಿ, ಬಾಬುರಾವ ಮಜಿಗೆ, ದಾನಪ್ಪಾ ಗೌಡ, ಎಂ.ಡಿ.ಶಾಬೋದ್ಧಿನ್, ಮಲ್ಲಿಕಾರ್ಜುನ ಟಂಕಶಾಲೆ, ದೇವಿಪ್ರಸಾದ ಕಲಾಲ್, ಸೂರ್ಯಕಾಂತ ಸಿಂಗೆ ಮತ್ತಿತರರು ಇದ್ದರು.

Share this article