ಶೈಕ್ಷಣಿಕ ಅಭಿವೃದ್ಧಿಗೆ ಜಿಲ್ಲೆಯ ಸಾಂಸ್ಕೃತಿಕ ನೆಲೆಗಟ್ಟು ಪೂರಕ: ಪಾರಿ ಬಸವರಾಜ್

KannadaprabhaNewsNetwork | Published : Dec 15, 2024 2:03 AM

ಸಾರಾಂಶ

ರಾಷ್ಟ್ರೀಯ ಮತದಾನ ಸಾಕ್ಷರತಾ ಕ್ಲಬ್ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಉತ್ತರ ಕನ್ನಡ ಜಿಲ್ಲಾಮಟ್ಟದ ಸ್ಪರ್ಧೆಗಳು ಶುಕ್ರವಾರ ಯಲ್ಲಾಪುರ ಪಟ್ಟಣದ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ನಡೆಯಿತು.

ಯಲ್ಲಾಪುರ: ರಾಷ್ಟ್ರೀಯ ಮತದಾನ ಸಾಕ್ಷರತಾ ಕ್ಲಬ್ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಉತ್ತರ ಕನ್ನಡ ಜಿಲ್ಲಾಮಟ್ಟದ ಸ್ಪರ್ಧೆಗಳು ಶುಕ್ರವಾರ ಪಟ್ಟಣದ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಜಿಪಂ ಉಪ ಕಾರ್ಯದರ್ಶಿ ನಾಗೇಶ್ ರಾಯ್ಕರ್ ಮಾತನಾಡಿ, ಒಂದು ಅಂಕ ಮತ್ತು ಒಂದು ಮತದ ಮಹತ್ವವನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು.

ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ್ ಕೋಣೆಮನೆ ಮಾತನಾಡಿ, ಪ್ರಜಾಪ್ರಭುತ್ವದ ಮೌಲ್ಯಗಳು ಭಾರತದಲ್ಲಿನ್ನೂ ಆಚರಣೆಯಲ್ಲಿರುವುದಕ್ಕೆ ಇಲ್ಲಿನ ಸಂವಿಧಾನಿಕ ತಳಹದಿಯೇ ಕಾರಣವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕ ಪಾರಿ ಬಸವರಾಜ್ ಮಾತನಾಡಿ, ಉತ್ತರ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ನೆಲೆಗಟ್ಟು ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಆರ್. ಹೆಗಡೆ ಪ್ರಾಸ್ತಾವಿಕ ಮಾತನಾಡಿ, ಸ್ವಾಗತಿಸಿದರು. ಜಿಲ್ಲಾ ಎನ್‌ವಿಡಿ ಕಾರ್ಯಕ್ರಮ ಉಸ್ತುವಾರಿ ಅಧಿಕಾರಿ ಎಪಿಸಿ ಕುಮಾರ್ ಜಿ. ಭಟ್ಟ, ವಿಷಯ ಪರಿವೀಕ್ಷಕ ಜಿ.ಆರ್. ಹೆಗಡೆ, ಎಂ.ಕೆ. ಮೊಗೇರ್, ಪ್ರೌಢಶಾಲಾ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಅಜಯ್ ನಾಯಕ್, ತಾಲೂಕು ಸಂಘದ ಚಂದ್ರಶೇಖರ ಸಿ.ಎಸ್., ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಸಂತೋಷ್ ಜಗಳೂರು, ಸಮಾಜ ವಿಜ್ಞಾನ ಶಿಕ್ಷಕರ ಕ್ಲಬ್ ಅಧ್ಯಕ್ಷ ಜನಾರ್ದನ ಗಾಂವ್ಕರ, ವಿಶ್ವದರ್ಶನ ಪ್ರೌಢಶಾಲಾ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ, ಯಲ್ಲಾಪುರ ತಾಲೂಕು ಎನ್‌ವಿಡಿ ಕಾರ್ಯಕ್ರಮ ಉಸ್ತುವಾರಿ ಅಧಿಕಾರಿ ಪ್ರಶಾಂತ್ ಪಟಗಾರ ಉಪಸ್ಥಿತರಿದ್ದರು. ರಾಘವೇಂದ್ರ ಹೆಗಡೆ ಇಡಗುಂದಿ ಮತ್ತು ಶ್ರೀಧರ ಹೆಗಡೆ ಬಿಸಗೋಡ, ಶಾಮಲಾ ಕೆರೆಗದ್ದೆ, ಚಿದಾನಂದ ಹಳ್ಳಿ, ಮಂಗಳಗೌರಿ ನಾಯಕ್, ಪ್ರಶಾಂತಿ ನಾಯ್ಕ, ಷಣ್ಮುಖ ಹೆಗಡೆ ಹಂಸನಗದ್ದೆ ನಿರ್ವಹಿಸಿದರು.

ವಿಜೇತರ ಯಾದಿ:

ಪೋಸ್ಟರ್‌ ತಯಾರಿಕೆ : ಬಿಂದು ಈ ಜೈವಂತ ಡಾನ್ ಬಾಸ್ಕೋ ಪ್ರೌಢಶಾಲೆ ಶಿರಸಿ ಪ್ರಥಮ; ಕವನಾ ಆರ್. ನಾಯ್ಕ ಶ್ರೀ ಚೆನ್ನಕೇಶವ ಪ್ರೌಢಶಾಲೆ ಕರ್ಕಿ ಹೊನ್ನಾವರ ದ್ವಿತೀಯ; ಸಂಚಿತಾ ಎಸ್. ರಾಯ್ಕರ, ಡಾ. ಎ.ವಿ. ಬಾಳಿಗಾ ಶಾಲೆ ಕುಮಟಾ, ತೃತೀಯ.

ಪ್ರಬಂಧ ಸ್ಪರ್ಧೆ (ಕನ್ನಡ): ಸ್ನೇಹಾ ಉದಯ ನಾಯ್ಕ, ಸಿ.ವಿ.ಎಸ್.ಕೆ. ಪ್ರೌಢಶಾಲೆ, ಕುಮಟಾ ಪ್ರಥಮ; ಮಮತಾ ಜಿ. ಭಟ್ಟ, ಸರ್ಕಾರಿ ಪ್ರೌಢಶಾಲೆ ಬಿಸಗೋಡ ದ್ವಿತೀಯ; ಕಾವ್ಯಾ ಚಂದ್ರಶೇಖರ ದೇವಡಿಗ, ಮಾರಿಕಾಂಬಾ ಸರ್ಕಾರಿ ಪ್ರೌಢಶಾಲೆ ಶಿರಸಿ ತೃತೀಯ.

ಪ್ರಬಂಧ ಸ್ಪರ್ಧೆ (ಇಂಗ್ಲಿಷ್): ಸಾಕ್ಷಿ ಕೆ.ಎಸ್. ಸಿವಿಎಸ್‌ಕೆ ಪ್ರೌಢಶಾಲೆ ಕುಮಟಾ ಪ್ರಥಮ; ಸಾತ್ವಿಕ ಪೂಜಾರಿ ಚಂದನ ಪ್ರೌಢಶಾಲೆ ನರೇಬೈಲ್ ಶಿರಸಿ ದ್ವಿತೀಯ; ಇಕ್ರಾ ಶೇಖ್ ಬ್ಲೂಮಿಂಗ್ ಬರ್ಡ್ಸ್ ಶಾಲೆ ಮುಂಡಗೋಡ ತೃತೀಯ.

ರಸಪ್ರಶ್ನೆ: ಸಿವಿಎಸ್‌ಕೆ ಪ್ರೌಢಶಾಲೆ ಕುಮಟಾ ಪ್ರಥಮ; ಸರ್ಕಾರಿ ಪ್ರೌಢಶಾಲೆ ಬಂಡಲ ದ್ವಿತೀಯ; ಕೆ.ಪಿ.ಎಸ್. ಮುರ್ಕವಾಡ, ತೃತೀಯ ಸ್ಥಾನ ಪಡೆದು ಬಹುಮಾನಿತರಾದರು.

ಉತ್ತರ ಕನ್ನಡ ಜಿಪಂ, ಶಿರಸಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರ ಕಾರ್ಯಾಲಯ ಹಾಗೂ ಯಲ್ಲಾಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

Share this article