ಭೀಕರ ಬರದಲ್ಲಿಯೂ ರೈತರ ಕೈ ಹಿಡಿದ ಹೈನೋದ್ಯಮ

KannadaprabhaNewsNetwork |  
Published : Oct 12, 2026, 02:30 AM IST
ಕೊಪ್ಪಳ ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ‘ಕಾಲೇಜು ರಂಗ’ ಪ್ರಾಯೋಗಿಕ ಪತ್ರಿಕೆ ಬಿಡುಗಡೆ ಮಾಡಲಾಯಿತು. | Kannada Prabha

ಸಾರಾಂಶ

ತಾಲೂಕಿನಲ್ಲಿ ಮುಂಗಾರು, ಹಿಂಗಾರು ಮಳೆ ಕೈ ಕೊಟ್ಟ ಪರಿಣಾಮ ಭೂಮಿಗೆ ಬಿತ್ತಿದ, ಬೊಗಸೆ ಬೀಜವೂ ರೈತರ ಕೈ ಸೇರಲಿಲ್ಲ, ಕೃಷಿಯೊಂದಿಗೆ ಉಪ ಕಸಬು ಮಾಡಿಕೊಂಡ ಹೈನುಗಾರಿಕೆ, ಭೀಕರ ಬರದಲ್ಲಿಯೂ ಅನ್ನದಾತರ ಕೈ ಹಿಡಿದಿದೆ.

ಹೊಳಲಿನಲ್ಲಿ ಹರಿಯುತ್ತಿದೆ ಹಾಲಿನ ಹೊಳೆ

ಉಪ ಕಸಬು ಮುಖ್ಯ ಕಸಬಾಗಿ ಪರಿವರ್ತನೆ

ಚಂದ್ರು ಕೊಂಚಿಗೇರಿ

ಕನ್ನಡಪ್ರಭ ವಾರ್ತೆ ಹೂವಿನಹಡಗಲಿ

ತಾಲೂಕಿನಲ್ಲಿ ಮುಂಗಾರು, ಹಿಂಗಾರು ಮಳೆ ಕೈ ಕೊಟ್ಟ ಪರಿಣಾಮ ಭೂಮಿಗೆ ಬಿತ್ತಿದ, ಬೊಗಸೆ ಬೀಜವೂ ರೈತರ ಕೈ ಸೇರಲಿಲ್ಲ, ಕೃಷಿಯೊಂದಿಗೆ ಉಪ ಕಸಬು ಮಾಡಿಕೊಂಡ ಹೈನುಗಾರಿಕೆ, ಭೀಕರ ಬರದಲ್ಲಿಯೂ ಅನ್ನದಾತರ ಕೈ ಹಿಡಿದಿದೆ.

ಹೌದು, ನಾಲ್ಕಾರು ಹಸು, ಎಮ್ಮೆಗಳನ್ನು ಹೈನುಗಾರಿಕೆಯಿಂದ ಬದುಕನ್ನು ಹಸನು ಮಾಡಿಕೊಂಡ ಕುಟುಂಬಗಳ ಸಂಖ್ಯೆ ಹೆಚ್ಚಾಗುತ್ತಿವೆ. ಕೃಷಿಯೊಂದಿಗೆ ಉಪ ಕಸಬು ಮಾಡಿಕೊಂಡಿದ್ದ ಅದೆಷ್ಟೋ ಬಡ ಕುಟುಂಬಗಳು ಮುಖ್ಯ ಕಸುಬು ಮಾಡಿಕೊಂಡಿವೆ.

ತಾಲೂಕಿನಲ್ಲಿ 75 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ, ಇದರಡಿಯಲ್ಲಿ 4,757 ಕುಟುಂಬಗಳು ಹಾಲು ಕರೆಯುವ 8,915 ಹಸುಗಳು, 476 ಎಮ್ಮೆಗಳನ್ನು ಸಾಕಾಣಿಕೆ ಮಾಡಿಕೊಂಡಿದ್ದಾರೆ.

ತಾಲೂಕಿನ ಹೊಳಲು ಗ್ರಾಮ ಹಾಲು ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದ್ದು, ಪ್ರತಿ ದಿನ 6,576 ಲೀಟರ್‌ ಹಾಲು ಸಂಗ್ರಹವಾಗುತ್ತಿದೆ, ಮದಲಗಟ್ಟಿ ಗ್ರಾಮದಲ್ಲಿ ಪ್ರತಿ ದಿನ 15 ಲೀ. ಹಾಲು ಸಂಗ್ರಹವಾಗುತ್ತಿದ್ದು ಕೊನೆ ಸ್ಥಾನದಲ್ಲಿದೆ.

ಹಾಲು ಉತ್ಪಾದಕರ ಸಹಕಾರ ಸಂಘವು ರೈತರಿಂದ ಪ್ರತಿ ಲೀಟರ್‌ ಹಾಲಿಗೆ ₹33ರಿಂದ ₹34ಗಳಂತೆ ಖರೀದಿ ಮಾಡುತ್ತಿದೆ, ಜತೆಗೆ ಸರ್ಕಾರ ಪ್ರತಿ ಲೀ. ಹಾಲಿಗೆ ₹5 ಪ್ರೋತ್ಸಾಹಧನ ನೀಡುತ್ತಿದೆ. ಸಂಘದಲ್ಲಿ ಸಂಗ್ರಹವಾದ ಹಾಲನ್ನು ಪ್ರತಿ ಲೀಟರ್‌ಗೆ ₹48ರಿಂದ ₹56ಗಳಂತೆ ಜನ ಖರೀದಿ ಮಾಡುತ್ತಾರೆ. ಸಂಘಕ್ಕೆ ಸಂಗ್ರಹವಾದ ಹಣವನ್ನು ಸಿಬ್ಬಂದಿ ಸಂಬಳ, ಆಡಳಿತ್ಮಾಕ ವೆಚ್ಚ, ಸಾಗಾಣಿಕೆ ವೆಚ್ಚಕ್ಕೆ ಬಳಕೆಯಾಗುತ್ತಿದೆ. ಇದರಿಂದ ಯಾವ ಸಹಕಾರ ಸಂಘವೂ ನಷ್ಟದಲ್ಲಿ ಇಲ್ಲ.

ತಾಲೂಕಿನಲ್ಲಿ 75 ಸಹಕಾರ ಸಂಘಗಳಿಂದ ಪ್ರತಿ ತಿಂಗಳು 11,62,472 ಲೀ. ಹಾಲು ಸಂಗ್ರಹವಾಗುತ್ತದೆ, ಹಾಲು ಉತ್ಪಾದಕರಿಗೆ ಸರ್ಕಾರದಿಂದ ಪ್ರತಿ ಲೀ ಹಾಲಿಗೆ ₹5 ಪ್ರೋತ್ಸಾಹಧನ ನೀಡುತ್ತಿದ್ದು, ಪ್ರತಿ ತಿಂಗಳು ₹57,80,195 ನೇರವಾಗಿ ಹೈನುಗಾರಿಕೆ ಮಾಡುವ ರೈತರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುತ್ತಿದೆ. ಈ ವರೆಗೂ ಜೂನ್‌ ತಿಂಗಳ ವರೆಗೆ ಹಣ ಜಮಾ ಆಗಿದೆ. ಉಳಿದಂತೆ 3 ತಿಂಗಳ ಪ್ರೋತ್ಸಾಹಧನ ಬಾಕಿ ಇದೆ.

ಬರದಲ್ಲಿ ಬಿಸಿಲಿನ ತಾಪಕ್ಕೆ ಹಾಲು ಉತ್ಪಾದನೆ ಕಡಿಮೆಯಾಗುತ್ತಿಲ್ಲ, ಬದಲಾಗಿ ಹಾಲಿನ ಗುಣಮಟ್ಟ ಕಡಿಮೆಯಾಗುತ್ತಿದೆ. ಕಾರಣ ರಾಸುಗಳಿಗೆ ಹಸಿರು ಹುಲ್ಲಿನ ಕೊರತೆ ಕಾಡುತ್ತಿದೆ. ಒಟ್ಟಾರೆ ಮೇವಿನ ಕೊರತೆಯೂ ಕಾಡುತ್ತಿದೆ. ರೈತರು ಹಾಲು ಉತ್ಪಾದನೆ ಹೆಚ್ಚಳ ಮತ್ತು ಗುಣಮಟ್ಟದ ಹಾಲಿಗಾಗಿ, ಸಹಕಾರ ಸಂಘದಿಂದ ₹1369 ಪಶು ಆಹಾರ ಖರೀದಿಸುತ್ತಿದ್ದಾರೆ. ಬರಗಾಲ ಇದ್ದರೂ ಹಾಲಿನ ಉತ್ಪಾದನೆ ಕಡಿಮೆಯಾಗಿಲ್ಲ, ಬಿಸಿಲಿನ ತಾಪಕ್ಕೆ ಹಾಲಿನ ಗುಣಮಟ್ಟ ಕಡಿಮೆಯಾಗಲಿದೆ. ಹಸಿರು ಹುಲ್ಲಿನ ಕೊರತೆ ಕಾಡುತ್ತಿದೆ. ಇದರ ಮಧ್ಯೆ ಹೈನುಗಾರಿಕೆ ಉಪ ಕಸಬು ಇಂದು ರೈತರಿಗೆ ಮುಖ್ಯ ಕಸಬಾಗಿ ಪರಿವರ್ತನೆಯಾಗಿದೆ ಎಂದು ಹೂವಿನಹಡಗಲಿ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ ವಿಸ್ತರಣಾಧಿಕಾರಿ ಎಂ. ಕೊಟ್ರೇಶ ತಿಳಿಸಿದ್ದಾರೆ.ನಮಗೆ ಕೃಷಿ ಭೂಮಿ ಇಲ್ಲ, ಕೂಲಿ ಕೆಲಸದ ಜತೆಗೆ ಹೈನುಗಾರಿಕೆ ಮಾಡಿಕೊಂಡಿದ್ದೇವೆ, ಇದರಿಂದ ಉಪ ಜೀವನ ಸಾಗುತ್ತಿದೆ ಎನ್ನುತ್ತಾರೆ ಮಾಗಳದ ಎಸ್‌. ಪರಮೇಶ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೊಡಗು ಗೌಡ ವಿದ್ಯಾ ಸಂಘದಿಂದ ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ
ಕನ್ನಡ ರಾಜ್ಯೋತ್ಸವ ಆಚರಣೆಗೆ ಪೂರ್ವಭಾವಿ ಸಭೆ