ಕನ್ನಡಪ್ರಭ ವಾರ್ತೆ, ದಾವಣಗೆರೆ
ರೂಪ ಎಂಬಾಕೆಯೇ ಮರಗಳ ಕಡಿದ ಗೃಹಿಣಿ. ಚಿದಾನಂದ ಸ್ವಾಮಿ ಹಾಗೂ ಶಿವನಾಗಮ್ಮ ದಂಪತಿಯ ಹಿರಿಯ ಪುತ್ರ ಕುಮಾರಸ್ವಾಮಿ ಅವರ ಪತ್ನಿ.
ರೂಪ ಕುಮಾರಸ್ವಾಮಿ ಹಲವಾರು ವರ್ಷಗಳಿಂದ ಆಸ್ತಿಯಲ್ಲಿ ಪಾಲು ಕೊಡುವಂತೆ ಅತ್ತೆ- ಮಾವನಿಗೆ ಆಗಾಗ ಕೇಳುತ್ತಿದ್ದರು. ಆದರೆ, ಇದಕ್ಕೆ ಅವರು ಒಪ್ಪಿರಲಿಲ್ಲ. ಇದೇ ಕಾರಣದಿಂದ ಕುಪಿತಕೊಂಡು ತೋಟಕ್ಕೆ ನುಗ್ಗಿ ಮೂರು ವರ್ಷಗಳ ಅಡಕೆ ಗಿಡಗಳನ್ನು ಮಚ್ಚಿನಿಂದ ಕೊಚ್ಚಿಹಾಕಿದ್ದಾರೆ ಎನ್ನಲಾಗಿದೆ.ಈಗಾಗಲೇ ಮನೆ ಕಟ್ಟಿಸಿಕೊಳ್ಳಲು ₹8 ಲಕ್ಷವನ್ನು ನಮ್ಮಿಂದ ಪಡೆದುಕೊಂಡಿದ್ದಾರೆ. ನಮಗೆ ವಯಸ್ಸಾಗಿದೆ. ನಮ್ಮನ್ನ ಸರಿಯಾಗಿ ನೋಡಿಕೊಳ್ಳದೇ ಹಲ್ಲೆ ಮಾಡುತ್ತಿದ್ದಾಳೆ. ಇದು ಸಾಲದು ಎಂಬಂತೆ ಮಚ್ಚು ತಂದು ಅಡಕೆ ಮರಗಳ ಕಡಿದು ಹಾಕಿದ್ದಾಳೆ ಎಂದು ಸೊಸೆ ರೂಪ ವಿರುದ್ಧ ಆರೋಪಿಸಿ ಮಾವ ಚಿದಾನಂದಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ.
- - - (-ಫೋಟೋ: ಸಾಂದರ್ಭಿಕ ಚಿತ್ರ)