ಗುರು ಶಿಷ್ಯರಿಗೆ ವಿದ್ಯೆ ಧಾರೆ ಎರೆದು ಉನ್ನತ ಹುದ್ದೆ ಅಲಂಕರಿಸುವ ಮಹಾದಾಸೆ ಹೊಂದಿರುತ್ತಾರೆ
ಯಲಬುರ್ಗಾ: ಹೆತ್ತವರು ಜನ್ಮ ನೀಡಿದರೆ, ಗುರುಗಳು ನಮ್ಮ ಬದುಕು ರೂಪಿಸುವ ದಾರಿದೀಪ ಆಗಿದ್ದಾರೆ. ಹೆತ್ತವರ ಮತ್ತು ಗುರುಗಳ ಋಣ ತೀರಿಸಲು ಸಾಧ್ಯವಿಲ್ಲ ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಳಕಪ್ಪ ಕಂಬಳಿ ಹೇಳಿದರು.
ತಾಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ನಿವೃತ್ತ ಮುಖ್ಯ ಶಿಕ್ಷಕ ವೀರಭದ್ರಪ್ಪ ಎಸ್. ಬೆಣಕಲ್ ಸೇವಾ ನಿವೃತ್ತಿಯ ಅಂಗವಾಗಿ ಗೌರವ ಸಮರ್ಪಣಾ ಸಮಾರಂಭ ಹಾಗೂ ವಜ್ರಬಂಡಿಯ ಅಭಿನವ ಗವಿಶ್ರೀ ನಾಟ್ಯ ಸಂಘದಿಂದ ಅಭಿನಯಿಸಲ್ಪಟ್ಟ ತಾಯಿಯ ಮಡಿಲು ನಾಟಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ಗುರು ಶಿಷ್ಯರಿಗೆ ವಿದ್ಯೆ ಧಾರೆ ಎರೆದು ಉನ್ನತ ಹುದ್ದೆ ಅಲಂಕರಿಸುವ ಮಹಾದಾಸೆ ಹೊಂದಿರುತ್ತಾರೆ.ಅವರ ಆಸೆಯಂತೆ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುವ ಮೂಲಕ ಗುರುವಿನ ಆಸೆ ಈಡೇರಿಸಬೇಕು. ಬೆಣಕಲ್ ಗುರುಗಳಿಂದ ಕಲಿತಂಥ ಸಾವಿರಾರು ವಿದ್ಯಾರ್ಥಿಗಳು ಉನ್ನತ ಸ್ಥಾನದಲ್ಲಿರುವುದು ನಿಜಕ್ಕೂ ಸಂತಸ ಎಂದರು.
ಜಿಪಂ ಮಾಜಿ ಸದಸ್ಯ ಈರಪ್ಪ ಕುಡಗುಂಟಿ ಮಾತನಾಡಿ, ವಿದ್ಯಾರ್ಥಿಗಳ ಬಾಳು ಬೆಳಕಾಗಬೇಕಾದರೇ ಗುರುವಿನ ಮಾರ್ಗದರ್ಶನ ಮುಖ್ಯ.ಎಲ್ಲ ರಂಗದಲ್ಲಿ ಅಭಿಮಾನಿ ಬಳಗ ಇರುವುದು ಸಾಮಾನ್ಯ.ಆದರೆ ವಿ.ಎಸ್. ಬೆಣಕಲ್ ತಮ್ಮ ಸೇವಾ ಅವಧಿಯಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದಾರೆ ಎಂದರು.
ಮುಖಂಡ ಶರಣಯ್ಯ ಶಾಸ್ತ್ರಿಮಠ ಸಾನ್ನಿಧ್ಯ ವಹಿಸಿದ್ದರು.ನಿವೃತ್ತ ಶಿಕ್ಷಕ ವಿ.ಎಸ್. ಬೆಣಕಲ್ ಅಧ್ಯಕ್ಷತೆ ವಹಿಸಿದ್ದರು. ಅಪರ ಸರ್ಕಾರಿ ವಕೀಲ ಮಲ್ಲನಗೌಡ ಪಾಟೀಲ್, ಉಪನ್ಯಾಸಕ ಡಾ. ಮಹಾಂತೇಶ ನೆಲಾಗಣಿ ಮಾತನಾಡಿದರು.
ಮಾಜಿ ಸೈನಿಕ ಶಂಕ್ರಪ್ಪ ಮೆಣಸಗೇರಿ, ಚನಲಚಿತ್ರ ನಟ ತಿರುಪತಿ ರಾಠೋಡ, ಮುಖ್ಯಶಿಕ್ಷಕ ಬಸವರಾಜ ಮಾಸ್ತಿ, ಸುರೇಶ ವೇದಪಾಠಕ, ಶರಣಪ್ಪ ಚನ್ಯಾಳ, ನೌಕರರ ಸಂಘದ ತಾಲೂಕಾಧ್ಯಕ್ಷ ಸಿದ್ದಲಿಂಗಪ್ಪ ಶ್ಯಾಗೋಟಿ, ನಿವೃತ್ತ ಶಿಕ್ಷಕ ಸಕ್ರಪ್ಪ ಕುಂಟ್ರು, ಪಂಚಸೇನೆ ರಾಜ್ಯಾಧ್ಯಕ್ಷ ರುದ್ರಗೌಡ ಸೋಲಬಗೌಡ್ರ, ಬಳಗೇರಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಶರಣಪ್ಪ ಬೂದಗುಂಪಾ, ರಾಜಶೇಖರ ಹೂಗಾರ, ಶಿಕ್ಷಕ ಬಸವರಾಜ ಮೇಟಿ, ಹನುಮಂತಪ್ಪ ನಡುಕಟ್ಟಿನ, ಕೃಷಿ ಅಧಿಕಾರಿ ಪ್ರಕಾಶ ಚವಡಿ, ಚಾಲಕ, ನಿರ್ವಾಹಕ ಶರಣಪ್ಪ ಕರಿಗಾರ, ಬಸವರಾಜ ಅಂಗಡಿ, ಕಾಳೇಶ ಕಮ್ಮಾರ, ಮಾರುತಿ ಚಂಡೂರು, ಬಾಗೇಶ ಬಿಂದ್ಗಿ, ರಾಮಣ್ಣ ವಣಗೇರಿ ಇತತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.