ಕನ್ನಡಪ್ರಭ ವಾರ್ತೆ ಮೈಸೂರುನಗರದ ರೇಲ್ವೆ ನಿಲ್ದಾಣದಲ್ಲಿರುವ ಶ್ರೀ ಬಲಮುರಿ ಗಣಪತಿ ದೇವಸ್ಥಾನದಲ್ಲಿ ಭಾನುವಾರ 36ನೇ ವಾರ್ಷಿಕೋತ್ಸವ ವಿಜೃಂಭಣೆಯಿಂದ ನೆರವೇರಿತು. ವಾರ್ಷಿಕೋತ್ಸವದ ಅಂಗವಾಗಿ ಅಷ್ಠದ್ರವ್ಯ ಸಮೇತ ಶ್ರೀ ಮಹಾಗಣಪತಿ ಹೋಮ, ಸಂತಾನ ದೋಷ ಪರಿಹಾರಕ್ಕಾಗಿ ಮಂಗಳ ಕಾರ್ಯ ಹಾಗೂ ವಿವಿಧ ಹೋಮಗಳು ಶ್ರದ್ಧಾ ಭಕ್ತಿಯಿಂದ ನೆರವೇರಿತು.ಶ್ರೀಬಲಮುರಿ ಗಣಪತಿ, ಅನಂತ ಸುಬ್ರಹ್ಮಣ್ಯ, ದತ್ತಾತ್ರೇಯ ಹಾಗೂ ಐಯ್ಯಪ್ಪ ಸ್ವಾಮಿ ದೇವರಿಗೆ ಮಾಡಿದ್ದ ಆಕರ್ಷಕ ಅಲಂಕಾರಗಳು ಭಕ್ತರ ಕಣ್ಮನ ಸೆಳೆಯಿತು.ಶನಿವಾರ ಸಂಜೆ ಶ್ರೀ ಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ ನಂತರ ಕಳಸ ಸ್ಥಾಪನೆ ಪೂಜಾ ಕಾರ್ಯಕ್ರಮ ನೆರವೇರಿತು. ಅಷ್ಠದ್ರವ್ಯ ಸಮೇತ ಶ್ರೀ ಮಹಾಗಣಪತಿ ಹೋಮಶ್ರೀ ವಿಶ್ವಸುನಾಮ ಸಂವತ್ಸರೇ ದಕ್ಷಿಣಾಯನೇ ಹಿಮಂತ ಪುಷ್ಯ ಮಾಸೇ ಶುಕ್ಲಪಕ್ಷ ನವಮಿ, ರೇವತಿ ನಕ್ಷತ್ರ ಭಾನುವಾರ ಪ್ರಾತಃಕಾಲ ಶ್ರೀ ಮಹಾಗಣಪತಿ ಪೂಜೆ, ಪುಣ್ಯಾಹ, ಕಳಶಸ್ಥಾಪನೆ ನಂತರ ಪರಿವಾರ ದೇವತಾ ಹೋಮಗಳು, ಅಷ್ಠದ್ರವ್ಯ ಸಮೇತ ಶ್ರೀ ಮಹಾಗಣಪತಿ ಹೋಮ, ಶ್ರೀ ಸುಬ್ರಹ್ಮಣ್ಯ ಸ್ವಾಮಿ, ಶ್ರೀ ಧರ್ಮಶಾಸ್ತ್ರ ಹೋಮ, ಶ್ರೀ ಗುರುದತ್ತಾತ್ರೇಯ ಹೋಮ, ಸ್ರೀ ಆಂಜನೇಯ ಹೋಮ, ಶ್ರೀ ಪರಮೇಶ್ವರಸ್ವಾಮಿ ಹೋಮ, ಶ್ರೀ ನವಗ್ರಹ ದೇವತಾ ಹೋಮ, ನಾಗದೇವತಾ ಹೋಮ, ಕುಂಭಾಭಿಷೇಕ ನೆರವೇರಿತು. ನಂತರ ಮಹಾಪೂರ್ಣಾಹುತಿ, ಮಹಾಮಂಗಳಾರತಿ ತೀರ್ಥಪ್ರಸಾದ ವಿನಿಯೋಗವಾಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ವಾರ್ಷಿಕೋತ್ಸವದಲ್ಲಿ ಭಾಗವಹಿಸಿ ಭಗವಂತನ ಕೃಪೆ ಪಾತ್ರರಾದರು.-- ಬಾಕ್ಸ್--