ಬಿಡಿಸಿಸಿ ಬ್ಯಾಂಕ್‌ ಎತ್ತರಕ್ಕೆ ಬೆಳೆಸುವ ಸಂಕಲ್ಪ

KannadaprabhaNewsNetwork |  
Published : Nov 21, 2025, 03:00 AM IST
ಜೊಲ್ಲೆ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಚಿಕ್ಕೋಡಿ ರಾಜ್ಯದ ಜಿಲ್ಲಾ ಮಧ್ಯವರ್ತಿ ಬ್ಯಾಂಕುಗಳಲ್ಲಿಯೇ ಬೆಳಗಾವಿ ಡಿಸಿಸಿ ಬ್ಯಾಂಕ್‌ನ್ನು ಎತ್ತರಕ್ಕೆ ಬೆಳೆಸುವ ಸಂಕಲ್ಪ ಮಾಡಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ರಾಜ್ಯದ ಜಿಲ್ಲಾ ಮಧ್ಯವರ್ತಿ ಬ್ಯಾಂಕುಗಳಲ್ಲಿಯೇ ಬೆಳಗಾವಿ ಡಿಸಿಸಿ ಬ್ಯಾಂಕ್‌ನ್ನು ಎತ್ತರಕ್ಕೆ ಬೆಳೆಸುವ ಸಂಕಲ್ಪ ಮಾಡಲಾಗಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದರು.

ನಿಪ್ಪಾಣಿ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಗುರುವಾರ ಶಾಸಕಿ ಶಶಿಕಲಾ ಜೊಲ್ಲೆ ಅವರ ಜನ್ಮದಿನ ಮತ್ತು ನೂತನ ಆಯ್ಕೆಯಾಗಿರುವ ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರ ಸನ್ಮಾನ ಸಮಾರಂಭದಲ್ಲಿ ಸತ್ಕಾರ ಸ್ವೀಕರಿಸಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ರೈತರಿಗೆ ಅನುಕೂಲವಾಗುವ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದ್ದು, ಬಿಡಿಸಿಸಿ ಬ್ಯಾಂಕ್‌ ಮೂಲಕ ರೈತರಿಗೆ ಅನುಕೂಲ ಮಾಡಲಾಗುತ್ತದೆ. ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಬೆಳಗಾವಿ ಬುಡಾ ಅಧ್ಯಕ್ಷ ಲಕ್ಷ್ಮಣರಾವ ಚಿಂಗಳೆ ಮತ್ತು ನಿರ್ದೇಶಕರ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಬಿಡಿಸಿಸಿ ಬ್ಯಾಂಕನ್ನು ಎತ್ತರಕ್ಕೆ ಬೆಳೆಸುವ ಸಂಕಲ್ಪ ಮಾಡಲಾಗಿದೆ. ಬೀರೇಶ್ವರ ಮಾದರಿ ಬಿಡಿಸಿಸಿ ಬ್ಯಾಂಕನ್ನು ಬೆಳೆಸಲಾಗುತ್ತದೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಬೆಳವಣಿಗೆಗೆ ಪ್ರತಿ ತಾಲೂಕಿನಲ್ಲಿ ಸಭೆ ನಡೆಸಿ ರೈತರಿಗೆ ಅನುಕೂಲ ಕಲ್ಪಿಸಲಾಗುವುದು ಎಂದು ತಿಳಿಸಿದರು.

ರೈತರಿಗೆ ಬೇಕಾದ ಹೊಸ ಹೊಸ ಯೋಜನೆ ತರಲಾಗುತ್ತದೆ. ನಬಾರ್ಡ್‌, ಅಪೇಕ್ಷ್‌ ಬ್ಯಾಂಕ್‌ ಮೂಲಕ ರೈತರಿಗೆ ಅನುಕೂಲ. ಸಂಸ್ಥೆಯನ್ನು ಒಳ್ಳೆಯ ರೀತಿಯಲ್ಲಿ ನಡೆಸಲು ಆಡಳಿತ ಮಂಡಳಿ ಸೂಕ್ತ ಕ್ರಮ ವಹಿಸಿದೆ ಎಂದು ಹೇಳಿದರು.

ಬಿಡಿಸಿಸಿ ಬ್ಯಾಂಕ್‌ ನಿರ್ದೇಶಕ ಮಹಾಂತೇಶ ದೊಡ್ಡಗೌಡರ ಮಾತನಾಡಿ, ಜೊಲ್ಲೆಯವರು ಮಾಡಿದ ಅಭಿವೃದ್ಧಿ ಕೆಲಸ ಮರೆಯುವಂತಿಲ್ಲ. ಅವರ ಜನಪರ ಕೆಲಸಗಳು ಇಂದಿಗೂ ಮಾದರಿ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಮಾಡಿದ್ದಾರೆ ಎಂದರು.

ಮಹಾರಾಷ್ಟ್ರ ಕೊಲ್ಲಾಪುರದ ರಾಜ್ಯಸಭೆ ಸದಸ್ಯ ಧನಂಜಯ ಮಹಾಡಿಕ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಬೀರೇಶ್ವರ ಬ್ಯಾಂಕನ್ನು ಅಂತಾರಾಜ್ಯ ಮಟ್ಟದಲ್ಲಿ ಬೆಳೆಸಿದ ಸಹಕಾರ ಭೀಷ್ಮ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಬಿಡಿಸಿಸಿ ಬ್ಯಾಂಕ್ ಬೆಳೆಸುವುದು ಅಷ್ಟೇನೂ ಕಷ್ಟವಲ್ಲ. ಮುಂದೊಂದು ದಿನ ಬಿಡಿಸಿಸಿ ಬ್ಯಾಂಕನ್ನು ಜೊಲ್ಲೆ ಅವರ ಸಾರಥ್ಯದ ಬೀರೇಶ್ವರ ಬ್ಯಾಂಕ್ ಮಾದರಿ ಬೆಳೆಸುವುದರಲ್ಲಿ ಸಂಶಯವಿಲ್ಲ ಎಂದರು.

ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಮಾಜಿ ಶಾಸಕರಾದ ಅರವಿಂದ ಪಾಟೀಲ, ಶಶಿಕಾಂತ ನಾಯಿಕ, ಅಪ್ಪಾಸಾಹೇಬ ಕುಲಗುಡೆ, ಮಲ್ಲಣ್ಣ ಯಾದವಾಡ, ನಿಲಕಂಠ ಕಪಲಗುದ್ದಿ, ವಿರೂಪಾಕ್ಷ ಮಾಮನಿ, ಮಲಗೌಡ ಪಾಟೀಲ, ಪವನ ಪಾಟೀಲ, ಬಸವರಾಜ ಕಲ್ಲಟ್ಟಿ, ಬಾಳಸಾಹೇಬ ವಡ್ಡರ, ವಿಶ್ವನಾಥ ಕಮತೆ, ರಾಜೇಂದ್ರ ಪಾಟೀಲ, ಎಂ.ಪಿ. ಪಾಟೀಲ, ಪವನ ಪಾಟೀಲ, ಅಪ್ಪಾಸಾಹೇಬ ಜೊಲ್ಲೆ ಸೇರಿ ಹಿರಾಶುಗರ್‌, ಸಂಗಮ ಹಾಗೂ ಹಾಲಸಿದ್ದನಾಥ ಸಹಕಾರಿ ಕಾರ್ಖಾನೆಗಳ ನಿರ್ದೇಶಕರು, ಸಹಕಾರಿ ಧುರೀಣರು ಉಪಸ್ಥಿತರಿದ್ದರು.ಶ್ರೀಕಾಂತ ಬನ್ನೆ ಸ್ವಾಗತಿಸಿದರು. ಹುಟ್ಟುಹಬ್ಬ ಆಚರಣೆ ಸಮಿತಿ ಅಧ್ಯಕ್ಷ ಸುನೀಲ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು.

20ಸಿಕೆಡಿ2:

ನಿಪ್ಪಾಣಿ ಹಾಲಸಿದ್ದನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಆಯೋಜಿಸಿದ ಮಾಜಿ ಸಚಿವರು ಮತ್ತು ಶಾಸಕಿ ಶಶಿಕಲಾ ಜೊಲ್ಲೆ ಅವರ ಜನ್ಮದಿನ ಆಚರಣೆ ಮತ್ತು ನೂತನವಾಗಿ ಆಯ್ಕೆಯಾಗಿರುವ ಬಿಡಿಸಿಸಿ ಬ್ಯಾಂಕ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ನಿರ್ದೇಶಕರ ಸನ್ಮಾನ ಸಮಾರಂಭವನ್ನು ರಾಜ್ಯಸಭೆ ಸದಸ್ಯ ಧನಂಜಯ ಮಹಾಡಿಕ್, ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಶಾಸಕಿ ಶಶಿಕಲಾ ಜೊಲ್ಲೆ ಉದ್ಘಾಟಿಸಿದರು.

--------

ಕೋಟ್‌

ನಿಪ್ಪಾಣಿ ಭಾಗದ ಜನ ನನ್ನನ್ನು ಮನೆ ಮಗಳೆಂದು ಸ್ವೀಕರಿಸಿ ಮೂರು ಸಲ ಶಾಸಕಿಯಾಗಿ, ಸಚಿವೆಯಾಗಿ ಈ ಭಾಗದ ಅಭಿವೃದ್ಧಿಗಾಗಿ ಕೆಲಸ ಮಾಡಲು ಅನುಕೂಲ ಕಲ್ಪಿಸಿದ್ಧಾರೆ. ಜೊತೆಗೆ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ಈ ಸಲ ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷರನ್ನಾಗಿ ಮಾಡಲು ಕಾರಣರಾದ ನಿಪ್ಪಾಣಿ ಜನತೆಗೆ ಜೊಲ್ಲೆ ಕುಟುಂಬ ಋಣಿಯಾಗಿದೆ.

ಶಶಿಕಲಾ ಜೊಲ್ಲೆ, ಮಾಜಿ ಸಚಿವೆ

PREV

Recommended Stories

ಅಧಿಕಾರ ಕೊಟ್ಟಿರುವುದು 5 ವರ್ಷಕ್ಕೆ: ಸಿಎಂ ಸಿದ್ದರಾಮಯ್ಯ
ಕೊಟ್ಟ ಮಾತನ್ನು ಎಂದೂ ಸಿಎಂ ತಪ್ಪೋಲ್ಲ : ಡಿಕೆಸು