ಶಿಕ್ಷಕರು ಸದೃಢರಾದರೆ ದೇಶದ ಅಭಿವೃದ್ಧಿ ಸಾಧ್ಯ

KannadaprabhaNewsNetwork | Published : Jan 1, 2024 1:15 AM

ಸಾರಾಂಶ

ದೇಶಕ್ಕೆ ಅನ್ನ ನೀಡುವ ರೈತ, ದೇಶಕ್ಕೆ ರಕ್ಷಣೆ ನೀಡುವ ಯೋಧರು ಹಾಗೂ ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕರು ಸದೃಢರಾದರೇ ಮಾತ್ರ ದೇಶ ಉತ್ತಮ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ಮಹಾರಾಷ್ಟ್ರದ ಹಣೆಗಾಂವ್ ಮಠದ ಶಂಕರಲಿಂಗ ಶಿವಾಚಾರ್ಯರು ನುಡಿದರು.ಅವರು ದಿ. ಧಿರುಭಾಯಿ ಅಂಬಾನಿಯ ಜನ್ಮ ದಿನದ ನಿಮಿತ್ತ ತಾಲೂಕಿನ ಹಿಪ್ಪಳಗಾಂವ್ ಗ್ರಾಮದಲ್ಲಿ ರಿಲಾಯನ್ಸ್ ಫೌಂಡೇಷನ್, ಔಟ್ ರೀಚ್, ಸ್ಥಳೀಯ ಗ್ರಾಪಂ ಸಹಯೋಗದಲ್ಲಿ ಜರುಗಿದ 11ನೇ ರೈತ ಸಮ್ಮೇಳನದಲ್ಲಿ ಧೀರುಬಾಯಿ ಅಂಬಾನಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು

ಹಿಪ್ಪಳಗಾಂವದಲ್ಲಿ ಮಹಾರಾಷ್ಟ್ರದ ಹಣೆಗಾಂವ್ ಮಠದ ಶಂಕರಲಿಂಗ ಶಿವಾಚಾರ್ಯರು ನುಡಿ

ಕನ್ನಡಪ್ರಭ ವಾರ್ತೆ ಕಮಲನಗರ

ದೇಶಕ್ಕೆ ಅನ್ನ ನೀಡುವ ರೈತ, ದೇಶಕ್ಕೆ ರಕ್ಷಣೆ ನೀಡುವ ಯೋಧರು ಹಾಗೂ ಮಕ್ಕಳಿಗೆ ಶಿಕ್ಷಣ ನೀಡುವ ಶಿಕ್ಷಕರು ಸದೃಢರಾದರೇ ಮಾತ್ರ ದೇಶ ಉತ್ತಮ ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದು ಮಹಾರಾಷ್ಟ್ರದ ಹಣೆಗಾಂವ್ ಮಠದ ಶಂಕರಲಿಂಗ ಶಿವಾಚಾರ್ಯರು ನುಡಿದರು.

ಅವರು ದಿ. ಧಿರುಭಾಯಿ ಅಂಬಾನಿಯ ಜನ್ಮ ದಿನದ ನಿಮಿತ್ತ ತಾಲೂಕಿನ ಹಿಪ್ಪಳಗಾಂವ್ ಗ್ರಾಮದಲ್ಲಿ ರಿಲಾಯನ್ಸ್ ಫೌಂಡೇಷನ್, ಔಟ್ ರೀಚ್, ಸ್ಥಳೀಯ ಗ್ರಾಪಂ ಸಹಯೋಗದಲ್ಲಿ ಜರುಗಿದ 11ನೇ ರೈತ ಸಮ್ಮೇಳನದಲ್ಲಿ ಧೀರುಬಾಯಿ ಅಂಬಾನಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಭಾರತ ಕೃಷಿ ಪ್ರಧಾನ ರಾಷ್ಟ್ರವಾಗಿದೆ. ಇಲ್ಲಿನ ರೈತನು ಅನೇಕ ಕಷ್ಟ ಕಾರ್ಪಣ್ಯಗಳ ಮಧ್ಯೆದಲ್ಲಿ ಇಂದಿನ ದಿನದಲ್ಲಿ ಕೃಷಿ ಮಾಡುತ್ತಿದ್ದಾರೆ. ರೈತರು ಆಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡು , ಮಣ್ಣಿನ ಫಲವತ್ತತೆ ಕಾಪಾಡಿಕೊಂಡು ಕೃಷಿ ಮಾಡಿದರೇ ಉತ್ತಮ ಇಳುವರಿಯೊಂದಿಗೆ ಒಳ್ಳೆಯ ಆದಾಯ ನೀರೀಕ್ಷೆ ಮಾಡಬಹುದು.

ಭೂಮಿಗೆ ರಾಸಾಯನಿಕ ಗೊಬ್ಬರ ಬಳಸದೇ ಸಾವಯವ ಹಾಗು ತಿಪ್ಪೆ ಗೊಬ್ಬರ ಬಳಸಿದರೇ, ಉತ್ತಮ ಇಳುವರಿ ಬರುತ್ತದೆ ಎಂದ ಅವರು ರಿಲಾಯನ್ಸ್ ಫೌಂಡೇಷನ್ 2012ರಿಂದ ಬೀದರ್ ಜಿಲ್ಲೆಯಲ್ಲಿ ಮುಂದೆ ಗುರು ಹಿಂದೆ ಗುರಿ ಅನ್ನುವ ಹಾಗೆ ರೈತರ ಸರ್ವಾಂಗೀಣ ಅಭಿವೃಧ್ಧಿಗೆ ಶ್ರಮಿಸಿ , ರೈತರ ಹಿತ ಕಾಪಾಡುತ್ತಿದೆ ಎಂದರು.

ಇದಕ್ಕೂ ಮುನ್ನ ಗ್ರಾಮದ ಹನುಮಾನ ಮಂದಿರದಿಂದ ಎತ್ತಿನ ಗಾಡಿಯಲ್ಲಿ ಜರುಗಿದ ರೈತರ ಭವ್ಯ ಮೆರವಣಿಗೆಯೂ ಸರ್ಕಾರಿ ಶಾಲೆಯ ಮಕ್ಕಳ ಕೋಲಾಟ, ಲೇಜೀಂ, ಮತ್ತು ಮಹಿಳೆಯರ ಪಾಂಡುರಂಗ ವಿಠ್ಠಲ ಭಜನೆ ಪದಗಳ ಹಾಡುವ ಮೂಲಕ ವೇದಿಕೆಗೆ ಬಂದು ಸೇರಿತು.

ಹಿರಿಯ ನಿವೃತ ಕೆವಿಕೆ ಮುಖ್ಯಸ್ಥ ಡಾ. ರವಿ ದೇಶಮುಖ, ರಿಲಯನ್ಸ್ ಫೌಂಡೇಷನ್ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ರಾಮಚಂದ್ರ ಶೇರಿಕಾರ್, ಕೃಷಿ ಸಂಶೋಧನಾ ಕೇಂದ್ರ ಬೀದರ್ ಹಿರಿಯ ವಿಜ್ಞಾನಿ ಡಾ. ಆರ್ ಎಲ್ ಜಾಧವ್, ತಾಪಂ ಇಒ ಮಾಣಿಕರಾವ್ ಪಾಟೀಲ್, ತಾಪಂ ಎಡಿ ಶಿವಕುಮಾರ್ ಘಾಟೆ, ಸಂಪನ್ಮೂಲ ವ್ಯಕ್ತಿ ರಾಜೇಂದ್ರ ಮಾಳಿ ಸೇರಿದಂತೆ ಇನ್ನಿತರರು ಮಾತನಾಡಿದರು.

--

Share this article